Asianet Suvarna News Asianet Suvarna News

ಬಟ್ಟೆ ಕ್ಲೀನ್ ಇಲ್ಲ ಅಂತಾ ರೈತನಿಗೆ ಮೆಟ್ರೋ ಒಳಗೆ ಬಿಡದ ಸಿಬ್ಬಂದಿ! ಅನ್ನದಾತನಿಗೆ ಅವಮಾನ ಮಾಡಿತಾ ನಮ್ಮ ಮೆಟ್ರೋ?

ದೇಶದ ಬೆನ್ನೆಲುಬು ಎಂದು ಕರೆಯಿಸಿಕೊಳ್ಳುವ ರೈತನಿಗೆ ಅನ್ನದಾತನೆಂದು ಎಲ್ಲೆಡೆ ಗೌರವದಿಂದ ನೋಡಲಾಗ್ತಿದೆ. ಆದರೆ ರೈತ ಕೊಳೆ ಬಟ್ಟೆ ಹಾಕಿದ್ದಾನೆಂಬ ನೆಪವೊಡ್ಡಿ ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಲು ಬಿಡದೆ ಅವಮಾನಿಸಿದ ಘಟನೆ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

Namma metro staff insulted the farmer video went viral at bengaluru rav
Author
First Published Feb 26, 2024, 11:27 AM IST

ಬೆಂಗಳೂರು (ಫೆ.26): ದೇಶದ ಬೆನ್ನೆಲುಬು ಎಂದು ಕರೆಯಿಸಿಕೊಳ್ಳುವ ರೈತನಿಗೆ ಅನ್ನದಾತನೆಂದು ಎಲ್ಲೆಡೆ ಗೌರವದಿಂದ ನೋಡಲಾಗ್ತಿದೆ. ಆದರೆ ರೈತ ಕೊಳೆ ಬಟ್ಟೆ ಹಾಕಿದ್ದಾನೆಂಬ ನೆಪವೊಡ್ಡಿ ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಲು ಬಿಡದೆ ಅವಮಾನಿಸಿದ ಘಟನೆ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಮೆಟ್ರೋದಲ್ಲಿ ಪ್ರಯಾಣಿಸಲು ಬಂದಿದ್ದ ಬಡ ರೈತ. ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಲು ಮುಂದಾಗಿದ್ದಾನೆ. ಈ ವೇಳೆ ಸಿಬ್ಬಂದಿ ರೈತನೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ. ಮೈಮೇಲೆ ಹಳೆಬಟ್ಟೆ ಕೊಳೆಯಾಗಿವೆ. ಮೆಟ್ರೋದಲ್ಲಿ ಇತರೆ ಪ್ರಯಾಣಿಕರಿಗೆ ತೊಂದರೆಯಾಗುತ್ತೆ ಎಂಬ ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು ಹೊರಕ್ಕೆ ಕಳಿಸಿದ ಸಿಬ್ಬಂದಿ. 

ಬೆಂಗಳೂರು ಜನತೆಗೆ ಗುಡ್‌ನ್ಯೂಸ್ ಕೊಟ್ಟ ಬಿಎಂಆರ್‌ಸಿಎಲ್: ಮೆಜೆಸ್ಟಿಕ್‌ನಿಂದ ಬೆಳಗ್ಗೆ 5ಕ್ಕೆ ಮೆಟ್ರೋ ಸೇವೆ ಆರಂಭ

ರೈತನನ್ನ ಹೊರಕಳಿಸುತ್ತಿದ್ದಂತೆ ಆಕ್ರೋಶಗೊಂಡ ಸಹ ಪ್ರಯಾಣಿಕರು. ಟಿಪ್‌ಟಾಪ್ ಆಗಿ ಡ್ರೆಸ್ ಮಾಡಿಕೊಂಡರೆ ಮಾತ್ರ ಮೆಟ್ರೋದೊಳಗೆ ಬಿಡ್ತೀರಾ? ರೈತ ಮೆಟ್ರೋದೊಳಗೆ ಪ್ರಯಾಣಿಸಬಾರದ. ರೈತ ಇದ್ದ ಸ್ಥಿತಿಯಲ್ಲೇ ಮೆಟ್ರೋ ಪ್ರಯಾಣ ಮಾಡಿದ್ರೆ ಯಾರಿಗೆ ತೊಂದರೆ ಆಗುತ್ತೆ ಅಂತಾ ಸಹ ಪ್ರಯಾಣಿಕ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ಸಿಬ್ಬಂದಿ ಒಳಪ್ರವೇಶಕ್ಕೆ ಅನುಮತಿ ಕೊಡದಿದ್ರೆ ಸಹ ಪ್ರಯಾಣಿಕ ರೈತನನ್ನು ಮೆಟ್ರೋದೊಳಗೆ ಕರೆದುಕೊಂಡು ಹೋಗಿದ್ದಾನೆ. ಈ ದೃಶ್ಯ ಮತ್ತೋರ್ವ ಪ್ರಯಾಣಿಕ ಮೊಬೈಲ್ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಮ್ಮ ಮೆಟ್ರೋ ಸಿಬ್ಬಂದಿ ಅತಿರೇಕದ ವರ್ತನೆಗೆ ನಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಡ್ರೈವರ್ ರಹಿತ ರೈಲು: ಹೆಬ್ಬಗೋಡಿಯಲ್ಲಿ ಅನ್‌ಲೋಡಿಂಗ್!

ರೈತ ಬೆಳೆದಿಲ್ಲ  ಅಂದ್ರೆ ಹೊಟ್ಟೆಗೇನು ತಿಂತೀರಾ?

ಕೊಳೆ ಬಟ್ಟೆ ಹಾಕಿದ್ದಕ್ಕೆ ರೈತನ ಮೆಟ್ರೋದೊಳಗೆ ಬಿಡದ ಸಿಬ್ಬಂದಿ ಅತಿರೇಕದ ವರ್ತನೆಯ ವಿಡಿಯೋ ಟ್ವಿಟ್ಟರ್ ಎಕ್ಸ್ ನಲ್ಲಿ ಶೇರ್ ಮಾಡಲಾಗಿದ್ದು, ಬಿಎಂಆರ್‌ಸಿಎಲ್‌ಗೆ ಟ್ಯಾಗ್ ಮಾಡಿ, ಮೆಟ್ರೋ ಪ್ರಯಾಣ ಕೇವಲ ವಿಐಪಿಗಳಿಗೆ ಮಾತ್ರವಾ? ರೈತರು ಮೆಟ್ರೋದೊಳಗೆ ಪ್ರಯಾಣ ಮಾಡಬಾರದ? ರೈತರು ಕಷ್ಟಪಟ್ಟು ಬೆಳೆ ಬೆಳೆದಿಲ್ಲಂದ್ರೆ ನೀವೇನು ತಿಂತಿರಾ ಮಣ್ಣು? ಮೊದಲು ಮೆಟ್ರೋ ಸಿಬ್ಬಂದಿಗೆ ರೈತರೊಂದಿಗೆ ಹೇಗೆ ವರ್ತಿಸಬೇಕೆಂದು ತರಬೇತಿ ನೀಡಿ, ಇದೇನು ವಿಮಾನ ನಿಲ್ದಾಣ ಅಂದುಕೊಂಡಿದ್ದಾರೋ ಸಿಬ್ಬಂದಿ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೇ ರೈತನಿಗೆ ಅವಮಾನ ಮಾಡಿದ ಸಿಬ್ಬಂದಿ ಕ್ರಮಕ್ಕೆ ಟ್ವಿಟ್ಟರ್‌ ಬಳಕೆದಾರರ ಆಗ್ರಹಿಸಿದ್ದಾರೆ.

Follow Us:
Download App:
  • android
  • ios