ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್‌ಗಳ ಪೈಕಿ 108 ವಾರ್ಡ್‌ಗಳಲ್ಲಿ ಜನವರಿ 15ರೊಳಗಾಗಿ ನಮ್ಮ ಕ್ಲಿನಿಕ್‌ ಆರಂಭಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಬೆಂಗಳೂರು (ಜ.7) : ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್‌ಗಳ ಪೈಕಿ 108 ವಾರ್ಡ್‌ಗಳಲ್ಲಿ ಜನವರಿ 15ರೊಳಗಾಗಿ ನಮ್ಮ ಕ್ಲಿನಿಕ್‌ ಆರಂಭಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು. ಶುಕ್ರವಾರ ಪಶ್ಚಿಮ ವಲಯದ ವಿವಿಧ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 108 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ.15ರೊಳಗಾಗಿ ಉದ್ಘಾಟಿಸಲಾಗುವುದು. ಉಳಿದ ನಮ್ಮ ಕ್ಲಿನಿಕ್‌ಗಳನ್ನು ಜನವರಿ ಅಂತ್ಯದೊಳಗೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಇನ್ನು ಪಶ್ಚಿಮ ವಲಯದ ವಿವಿಧ ರಸ್ತೆ ಪರಿಶೀಲನೆ ನಡೆಸಲಾಗಿದೆ. ಕೆಲವು ರಸ್ತೆಯ ಮೇಲ್ಪದರ ಕಿತ್ತು ಹೋಗಿದ್ದು, ಡಾಂಬರೀಕರಣ ಮಾಡುವಂತೆ ಸೂಚನೆ ನೀಡಲಾಗಿದೆ. ಪಾದಚಾರಿ ಮಾರ್ಗ ಮತ್ತು ರಸ್ತೆ ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಉಂಟು ಮಾಡುವ ಮರದ ಕೊಂಬೆ ತೆರವುಗೊಳಿಸುವಂತೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

Ayushmati Clinic: ಸ್ತ್ರೀಯರಿಗೆ ಪ್ರತ್ಯೇಕ ‘ಆಯುಷ್ಮತಿ’ ಕ್ಲಿನಿಕ್‌: ಸಚಿವ ಸುಧಾಕರ್‌

ಮಲ್ಲೇಶ್ವರ((Malleshwar)ದ ಅಜಾದ್‌ ಆಟದ (Azad play ground) ಮೈದಾನದಲ್ಲಿರುವ ಜಿಮ್‌ ಪರಿಶೀಲಿಸಿ, ಉಪಕರಣಗಳನ್ನು ಸರಿಯಾಗಿ ನಿರ್ವಹಣೆ ಮಾಡುಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು. ಜತೆಗೆ ಅಜಾದ್‌ ಆಟದ ಮೈದಾನದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌, ವಾಲಿಬಾಲ್‌ ಟ್ರ್ಯಾಕ್‌ ಪರಿಶೀಲಿಸಿದರು. ಈ ವೇಳೆ ವಲಯ ಆಯುಕ್ತ ಡಾ ಆರ್‌.ಎಲ್‌.ದೀಪಕ್‌, ಜಂಟಿ ಆಯುಕ್ತ ಯೋಗೇಶ್‌, ಮುಖ್ಯ ಅಭಿಯಂತರ ದೊಡ್ಡಯ್ಯ, ವಲಯ ಆರೋಗ್ಯಾಧಿಕಾರಿ ಡಾ ಮನೋರಂಜನ್‌ ಹೆಗ್ಡೆ ಉಪಸ್ಥಿತರಿದ್ದರು.

ರಸ್ತೆಯಲ್ಲಿ ಕಟ್ಟಡ ಸಾಮಗ್ರಿ: ದಂಡ

ಮಲ್ಲೇಶ್ವರದ ಬಹು ಶಿಸ್ತೀಯ ಮಹಿಳಾ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ರಸ್ತೆಯಲ್ಲಿ ನಿರ್ಮಾಣ ಸಾಮಗ್ರಿ ಸುರಿದಿರುವುದನ್ನು ಗಮನಿಸಿದ ಆಯುಕ್ತರು, ಸಂಬಂಧಪಟ್ಟಗುತ್ತಿಗೆದಾರರಿಗೆ .1 ಸಾವಿರ ದಂಡ ವಿಧಿಸಲು ಸೂಚಿಸಿದರು. ಜತೆಗೆ, ಎನ್ರಾಲ್ಡ್‌ ಗ್ರೀನ್ಸ್‌ ಅಪಾರ್ಚ್‌ಮೆಂಟ್‌ನಿಂದ ಪಾದಚಾರಿ ಮಾರ್ಗದಲ್ಲಿ ತ್ಯಾಜ್ಯ ಹಾಕಿದನ್ನು ಗಮನಿಸಿದ ಆಯುಕ್ತ ತುಷಾರ್‌ ಗಿರಿನಾಥ್‌, ತೆರವುಗೊಳಿಸಿ ಅಪಾರ್ಚ್‌ಮೆಂಟ್‌ಗೆ ದಂಡ ವಿಧಿಸಲು ಸೂಚಿಸಲಾಗಿದೆ. Namma Clinic: ಬಡವರ ಆರೋಗ್ಯ ರಕ್ಷಣೆಗೆ ನಮ್ಮ ಕ್ಲಿನಿಕ್‌: ಸಚಿವ ಸುಧಾಕರ್‌