ಲೆಕ್ಚರರ್ ಜೊತೆ ವಿದ್ಯಾರ್ಥಿನಿ ಪರಾರಿಯಾಗಿ ಮದುವೆ: ಹಾಸಿಗೆ ಹಿಡಿದ ತಂದೆ
ಬಿ.ಇಡಿ ಓದಲು ಕಾಲೇಜು ಸೇರಿದ್ದ ವಿದ್ಯಾರ್ಥಿನಿ, ಉಪನ್ಯಾಸಕನ ಜತೆ ಓಡಿಹೋಗಿ ಮದುವೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಹುಣಸೂರು (ಜ.02): ಬಿ.ಇಡಿ ಓದಲು ಕಾಲೇಜು ಸೇರಿದ್ದ ವಿದ್ಯಾರ್ಥಿನಿ, ಉಪನ್ಯಾಸಕನ ಜತೆ ಓಡಿಹೋಗಿ ಮದುವೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ. ಎಂಎ ಮುಗಿಸಿದ್ದ ಹುಣಸೂರಿನ ಪೂರ್ಣಿಮಾ (24), ಬಿ.ಇಡಿ ಮಾಡಲು ಹುಣಸೂರಿನ ಮಹಾವೀರ್ ಕಾಲೇಜ್ ಆಫ್ ಎಜುಕೇಷನ್‌ಗೆ ಸೇರಿಕೊಂಡಿದ್ದಳು. ಅದೇ ಕಾಲೇಜಿನ ಉಪನ್ಯಾಸಕ ಯಶೋಧಕುಮಾರ್ (39) ಯಶೋದಕುಮಾರ್, ಪೂರ್ಣಿಮಾಗಿಂತ 15 ವರ್ಷಗಳಷ್ಟು ಹಿರಿಯರು. ಇವರಿಬ್ಬರ ಪ್ರೇಮಕ್ಕೆ ಮನೆಯವರಿಂದ ವಿರೋಧ ವ್ಯಕ್ತವಾಗಿದ್ದು, ಆಕೆಯನ್ನು ಕಾಲೇಜು ಬಿಡಿಸಿದ್ದರು.
ಬಳಿಕ, ಮೊಬೈಲ್‌ನಲ್ಲೇ ಇವರಿಬ್ಬರ ಪ್ರೇಮ ಮುಂದುವರಿದಿತ್ತು. ಕಾಲೇಜಿನಿಂದ ಸರ್ಟಿಫಿಕೇಟ್ ತರಬೇಕೆಂದು ಹೋದ ಪೂರ್ಣಿಮಾ, ಯಶೋದ ಕುಮಾರ್ ಜೊತೆ ಓಡಿ ಹೋಗಿ, ಮದುವೆಯಾಗಿದ್ದಾಳೆ. ಬಳಿಕ, ಮೆಸೇಜ್ ಮಾಡಿ, ಮದುವೆಯಾಗಿದೆ ಎಂದು ತಿಳಿಸಿದ್ದಾಳೆ. ವಿಷಯ ತಿಳಿದ ಆಕೆಯ ತಂದೆ ಹಾಸಿಗೆ ಹಿಡಿದಿದ್ದಾರೆ. ಸೊಪ್ಪು ಮಾರಿ 2 ಲಕ್ಷ ಸಾಲ ಮಾಡಿ ಆಕೆಯನ್ನು ಓದಿಸಿದ್ದರು.
ತನ್ನ ಸಾಕಿ ಬೆಳೆಸಿದ ವಿಧವೆ ತಾಯಿಗೆ ಮರು ಮದ್ವೆ ಮಾಡಿಸಿದ 18 ವರ್ಷದ ಪುತ್ರ
ಶಾಡಲಗೇರಿಯಲ್ಲಿ ಸಾಮೂಹಿಕ ವಿವಾಹ: ಸಾಮೂಹಿಕ ಮದುವೆಗಳಿಂದ ಆರ್ಥಿಕ ಹೊರೆ ತಪ್ಪಿಸಲು ಸಾಧ್ಯ ಎಂದು ಕುಷ್ಟಗಿಯ ಮದ್ದಾನೇಶ್ವರ ಹಿರೇಮಠದ ಕರಿಬಸವ ಶಿವಚಾರ್ಯ ಹೇಳಿದರು. ಸಮೀಪದ ಶಾಡಲಗೇರಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆಯ ನಿಮಿತ್ತವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ಆಶೀರ್ವದಿಸಿದರು. ಇಂದಿನ ದುಬಾರಿ ಯುಗದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಅವಶ್ಯಕವಿದೆ. ಪಾಲಕರು ಮಕ್ಕಳಿಗೆ ಆಸ್ತಿಯನ್ನು ಮಾಡದೇ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು. ಗಂಡ-ಹೆಂಡತಿ ಚೆನ್ನಾಗಿದ್ದರೆ ಬದುಕು ಬಂಗಾರವಾಗುತ್ತದೆ ಎಂದರು.
ಪ್ರಮುಖರಾದ ಮುತ್ತಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಚಂದ್ರಶೇಖರಯ್ಯ ಹಿರೇಮಠ, ದೊಡ್ಡಬಸನಗೌಡ ಪಾಟೀಲ್ ಬಯ್ಯಾಪೂರ, ಕೆ.ಮಹೇಶ, ಕಲ್ಲಪ್ಪ ತಳವಾರ, ಮಲ್ಲಪ್ಪ ಗಟ್ಟಿ, ರಾಜಶೇಖರ ವಡಗೇರಿ, ಭೀಮಪ್ಪ ವಕ್ರ, ಸಂಗಪ್ಪ ಅಂಗಡಿ, ಗುರುಪಾದಪ್ಪ ಹಡಪದ, ಶಿವಪ್ಪ ರಡ್ಡೇರ, ರಾಮನಗೌಡ ನೈನಾಪೂರ, ಸಂಗಪ್ಪ ಹಳದೂರ, ಅಯ್ಯಪ್ಪ ನಸುಗುನ್ನಿ, ರೇಖಾ ಆರಿ, ಶರಣಪ್ಪ ಹೂಗಾರ, ರಾಯಪ್ಪ ಆರಿ, ಅಬ್ದುಲ್ಲ ಮುಲ್ಲಾ, ಶರಣಪ್ಪ ಸಿದ್ದಪ್ಪ ರೊಟ್ಟಿ, ರಾಜೇಸಾಬ ಕಡೆಮನಿ, ಮಾನಪ್ಪ ಪತ್ತಾರ, ಹನಮಪ್ಪ ಗುಳಗುಳಿ, ಶರಣಪ್ಪ ಅಂಗಡಿ, ಕುಮಾರ ಪೂಜಾರ, ಮಹಾಂತೇಶ ಗೋನಾಳ, ಸಕ್ರಪ್ಪ ಗುಳಗುಳಿ ಇತರರು ಇದ್ದರು. ಶಿಕ್ಷಕ ಗುರುರಾಜ ಹಡಪದ ನಿರ್ವಹಿಸಿದರು.