ಬೆಂಗಳೂರು-ಮೈಸೂರು ರೈಲಿನಲ್ಲಿ ಪ್ರಯಾಣಿಕರಿಗೆ ಬೆದರಿಕೆ ಹಾಕಿ ದರೋಡೆ ಮಾಡಿದ ಮೂವರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಚಾಕು, ಚೂರಿ, ಕಬ್ಬಿಣದ ರಾಡ್‌ಗಳಿಂದ ಬೆದರಿಸಿ ಹಣ, ಚಿನ್ನಾಭರಣ ದೋಚಿದ್ದರು.
ಬೆಂಗಳೂರು (ಫೆ.12): ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಸಂಚಾರ ಮಾಡುವ ಬೆಂಗಳೂರು-ಮೈಸೂರು ರೈಲಿಗೆ ಹತ್ತಿಕೊಂಡು ಚಾಕು, ಚೂರಿ, ಕಬ್ಬಿಣದ ರಾಡ್ ಹಿಡಿದು ರೈಲು ಬೋಗಿಯಲ್ಲಿದ್ದವರಿಗೆ ಜೀವ ಬೆದರಿಕೆ ಹಾಕಿ ಹಣ ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ರೈಲ್ವೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ (ಫೆ.10ರಂದು) ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲು ನಿಲ್ದಾಣದಿಂದ ಹೊರಗೆ ನಿಂತಿದ್ದ ಈ ಆರರೋಪಿಗಳು ಮೈಸೂರು ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ರೈಲನ್ನು ಹತ್ತಿಕೊಂಡಿದ್ದಾರೆ. ಕೂಡಲೇ ಎಲ್ಲರೂ ಒಂದು ಬೋಗಿಯೊಳಗೆ ಬಂದಿದ್ದಾರೆ. ನಂತರ ತಾವು ತಂದಿದ್ದ ಹರಿತವಾಗ ಆಯುಧಗಳಾದ ಚಾಕು, ಚೂರಿ, ಡ್ರ್ಯಾಗರ್, ಕಬ್ಬಿಣದ ರಾಡ್‌ಗಳಿಂದ ಬೋಗಿಯಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಹೆದರಿಸಿದ್ದಾರೆ. ನಿಮ್ಮ ಬಳಿಯಿರುವ ಎಲ್ಲ ನಗದು, ಚಿನ್ನಾಭರಣಗಳನ್ನು ಕೊಡುವಂತೆ ಪ್ರಾಣ ಬೆದರಿಕೆ ಹಾಕಿದ್ದಾರೆ.
ಪ್ರಾಣ ಬೆದರಿಕೆಯಿಂದ ರೈಲ್ವೆ ಪ್ರಯಾಣಿಕರು ತಮ್ಮ ಬಳಿಯಿದ್ದ ಎಲ್ಲ ನಗದು ಹಣ, ಚಿನ್ನಾಭರಣ ಹಾಗೂ ದುಬಾರಿ ಬೆಲೆ ಬಾಳುವ ಮೊಬೈಲ್‌ಗಳನ್ನು ಕೊಟ್ಟಿದ್ದಾರೆ. ಇದಾದ ನಂತರ ಆರೋಪಿಗಳು ಎಲ್ಲವನ್ನೂ ದರೋಡೆ ಮಾಡಿಕೊಂಡು ಅಲ್ಲಿಂದ ಪರಾರಿ ಆಗಿದ್ದರು. ಆದರೆ, ಈ ಸಂಬಂಧ ಪ್ರಯಾಣಿಕ ಚಂದನ್ ಸೇರಿದಂತೆ ಹಲವು ಪ್ರಯಾಣಿಕರು ದರೋಡೆಯಿಂದ ಹಣ ಕಳೆದುಕೊಂಡ ಬಗ್ಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ ಮೈಸೂರು ರೈಲ್ವೆ ಪೊಲೀಸರು ಮೂವರು ಆರೋಪಿಗಳು ಹಾಗೂ ಒಬ್ಬ ಅಪ್ರಾಪ್ತ ಆರೋಪಿ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಹೆಚ್‌ಎಸ್‌ಆರ್ ಲೇಔಟ್ ಮೇಲ್ಸೇತುವೆ ಬಂದ್; ಔಟರ್ ರಿಂಗ್ ರೋಡ್‌ನಲ್ಲೂ ಟ್ರಾಫಿಕ್ ಜಾಮ್!
ರೈಲ್ವೆ ಪ್ರಯಾಣಿಕರಿಂದ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ರೈಲ್ವೆ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಮತ್ತು ಇನ್ನಿತರೆ ತಾಂತ್ರಿಕ ಕ್ರಮಗಳನ್ನು ಅನುಸರಿಸಿ ಪತ್ತೆ ಹಚ್ಚಿದ್ದಾರೆ. ಇದೀಗ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರನ್ನು ಶೈಕ್ ಸೋಹೇಬ್ ,ಸಾಹೀಲ್ ಖಾನ್, ಮಹಮ್ಮದ್ ಯಾಸಿನ್ ಹಾಗೂ ಒಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಇನ್ನು ಬಂಧಿತ ಆರೋಪಿಗಳಿಂದ ಬರೋಬ್ಬರಿ 1 ಲಕ್ಷ ಮೌಲ್ಯದ 6 ಮೊಬೈಲ್, ಸಾವಿರಾರು ರೂ. ಬಗದು ಹಣ, ಮಾರಾಕಾಸ್ತ್ರಗಳನ್ನು ವಶಕ್ಎ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೈಸೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
