Asianet Suvarna News Asianet Suvarna News

ಮೈಸೂರು ದಸರಾ ಉತ್ಸವ: ತಾಲೀಮು ನಡೆಸುತ್ತಿದ್ದ ವೇಳೆ ಸಿಡಿಮದ್ದು ಸಿಡಿದು ಅವಘಡ!

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ತಾಲೀಮು ನಡೆಸುತ್ತಿದ್ದ ವೇಳೆ ಸಿಡಿಮದ್ದು ಸಿಡಿದು ಸಿಬ್ಬಂದಿ ಗಾಯಗೊಂಡಿರುವ ದುರಂತ ನಡೆದಿದೆ.

Mysore Dasara Festival Explosives explode while training in palace ground rav
Author
First Published Oct 23, 2023, 7:19 AM IST

ಮೈಸೂರು (ಅ.23): ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ತಾಲೀಮು ನಡೆಸುತ್ತಿದ್ದ ವೇಳೆ ಸಿಡಿಮದ್ದು ಸಿಡಿದು ಸಿಬ್ಬಂದಿ ಗಾಯಗೊಂಡಿರುವ ದುರಂತ ನಡೆದಿದೆ.

ನಿನ್ನೆ ಸಂಜೆ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಜಂಬೂಸವಾರಿಗೆ ಪುಷ್ಪಾರ್ಚನೆ ರಿಹರ್ಸಲ್. ಈ ವೇಳೆ ರಾಷ್ಟ್ರಗೀತೆ ನುಡಿಸಿ 21 ಸುತ್ತು ಕುಶಾಲತೋಪು ಸಿಡಿಸಲಾಗಿತ್ತು. ಕುಶಾಲತೋಪು ಸಿಡಿದು ಸಿಬ್ಬಂದಿಗೆ ಗಾಯ. ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸಿಬ್ಬಂದಿ.

ನಾಳೆ ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿ; ಅಂಬಾರಿ ಕಣ್ತುಂಬಿಕೊಳ್ಳಲು ಮೈಸೂರಿನತ್ತ ಪ್ರವಾಸಿಗರು

ಇಂದು ಅಂಬಾವಿಲಾಸ ಅರಮನೆಯ ಕಾರ್ಯಕ್ರಮಗಳು:

ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಮುಕ್ತಾಯವಾದ ಪಟ್ಟದ ಕತ್ತಿ ಪೂಜೆ. ಅರಮನೆಗೆ ಪಟ್ಟದ ಕತ್ತಿ ಕೊಂಡೊಯ್ದ ರಾಜ ಪರಿವಾರ. ಬೆ.11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದಾನೆ, ಪಟ್ಟದಕುದುರೆ, ಪಟ್ಟದಆನೆ, ಪಟ್ಟದಹಸು ಆಗಮನ. ಮ.12.20 ಆಯುಧ‌ಪೂಜೆ ಆರಂಭ 12.45ರವರೆಗೆ ಆಯುಧಪೂಜೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ. ಅರಮನೆ ಕಲ್ಯಾಣ ಮಂಟಪದಲ್ಲಿ ಪೂಜೆ.

ನಾಡಹಬ್ಬ ದಸರಾ: ಸಂಭ್ರಮದ ಆಯುಧಪೂಜೆಗೆ ನಗರ ಸಜ್ಜು!

ಇಂದು ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ. ಅರಮನೆಯಲ್ಲಿ ದುರ್ಗಾಷ್ಠಮಿ ಆಚರಣೆ. ಬೆ.5.30ಕ್ಕೆ ಚಂಡಿ‌ಹೋಮದೊಂದಿಗೆ ಆರಂಭವಾದ ಪೂಜೆ . ಬಳಿಕ ಬೆ.6ಕ್ಕೆ ಆನೆಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನಬೆ.6.05 ರಿಂದ 06.15ಕ್ಕೆ ಖಾಸಾ ಆಯುಧಗಳು ಅರಮನೆ ಕೋಡಿ‌ ಸೋಮೇಶ್ವರ ದೇಗುಲಕ್ಕೆ ರವಾನಿಸಲಾಯಿತು. ಅಲ್ಲಿಂದ ಬೆ.07.15ಕ್ಕೆ ಅರಮನೆಗೆ ವಾಪಸ್ಸು. ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಮುಕ್ತಾಯವಾದ ಪಟ್ಟದ ಕತ್ತಿ ಪೂಜೆ. ಅರಮನೆಗೆ ಪಟ್ಟದ ಕತ್ತಿ ಕೊಂಡೊಯ್ದ ರಾಜ ಪರಿವಾರ. ಬೆ.11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದಾನೆ, ಪಟ್ಟದಕುದುರೆ, ಪಟ್ಟದಆನೆ, ಪಟ್ಟದಹಸು ಆಗಮನವಾಗಲಿದೆ. ಮ.12.20 ಆಯುಧ‌ಪೂಜೆ ಆರಂಭವಾಗಲಿದ್ದು,  12.45ರವರೆಗೆ ಆಯುಧಪೂಜೆ ನಡೆಯುತ್ತದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧಗಳಿಗೆ ಪೂಜೆ.
ಅರಮನೆ ಕಲ್ಯಾಣ ಮಂಟಪದಲ್ಲಿ ಪೂಜೆ ಕೈಂಕರ್ಯ ನೆರವೇರಿಸಲಿದ್ದಾರೆ.

Follow Us:
Download App:
  • android
  • ios