Asianet Suvarna News Asianet Suvarna News

Mysore: ನಾಡಹಬ್ಬ ಮೈಸೂರು ದಸರಾ ವೇಳಾಪಟ್ಟಿ ಬಿಡುಗಡೆ

ನಾಡಹಬ್ಬ ಮೈಸೂರು ದಸರಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಅಕ್ಟೋಬರ್‌ 15 ರಿಂದ 26ರವರೆಗೆ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವೇಳಾಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಅದರ ವಿವರ ಇಲ್ಲಿದೆ.
 

Mysore Dasara 2023 Dates fo celebration released History of Events san
Author
First Published Sep 15, 2023, 5:47 PM IST

ಮೈಸೂರು (ಸೆ.15): ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣದಲ್ಲೀಗ ದಸರಾ ಸಿದ್ಧತೆಯ ಸಂಭ್ರಮ. ಇದೇ ವೇಳೆ ದಸರಾ ಸಮಿತಿ ನಾಡಹಬ್ಬದ ವೇಳಾಟ್ಟಿಯನ್ನು ಬಿಡುಗಡೆ ಮಾಡಿದೆ. ನವರಾತ್ರಿ ಆಚರಣೆಯ ವೇಳಾಪಟ್ಟಿ ಬಿಡುಗಡೆ ಮಾಡಿರುವ ಸಮಿತಿ, ಯಾವ ದಿನ ಯಾವ ಸಮಯಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿದೆ ಎನ್ನುವ ಮಾಹಿತಿಯನ್ನು ನೀಡಿದೆ. ಅಕ್ಟೋಬರ್‌ 23 ರ ಸೋಮವಾರದಂದು ಆಯುಧಪೂಜೆ ನಡೆಯಲಿದ್ದರೆ, ಅದರ ಮರುದಿನ ವಿಜಯದಶಮಿ ಸಂಭ್ರಮ ಆರಂಭವಾಗಲಿದೆ. ಅಂದು ಮಧ್ಯಾಹ್ನ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಂದಿಧ್ವಜ ಪೂಜೆ ಮಾಡಲಿದ್ದಾರೆ, ಸಂಜೆ ಮೀನ ಲಗ್ನದಲ್ಲಿ ಜಂಬೂ ಸವಾರಿ ಪ್ರಾರಂಭವಾಗಲಿದೆ.

ಅಕ್ಟೋಬರ್‌ 15- ಭಾನುವಾರ 
- ಶರನ್ನವರಾತ್ರಿ ಪ್ರಾರಂಭ
- ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ. (ಬೆಳಿಗ್ಗೆ 10.15 ರಿಂದ 10.36 ಶುಭ ವೃಶ್ಚಿಕ ಲಗ್ನದಲ್ಲಿ ಚಾಲನೆ)
ಅರಮನೆ ಪೂಜೆಗಳು: ಸಾಯಂಕಾಲ 6.30 ರಿಂದ 7.15 ಶುಭಮೇಷ ಲಗ್ನದಲ್ಲಿ ಆರಂಭ.

ಅಕ್ಟೋಬರ್‌ 20-ಶುಕ್ರವಾರ
ಕಾತ್ಯಾಯಿನೀ - ಸರಸ್ವತಿ ಪೂಜೆ.
(ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಪ್ರಾರಂಭ ಮಾಡಿ ಶ್ರವಣ ನಕ್ಷತ್ರದ ದಿನ ಅಂದರೆ 24-10-2023 ರ ಮಂಗಳವಾರ ವಿಸರ್ಜನೆ)

ಅಕ್ಟೋಬರ್‌ 21-ಶನಿವಾರ
ಕಾಳರಾತ್ರಿ, ಮಹಿಷಾಸುರ ಸಂಹಾರ.

ಅಕ್ಟೋಬರ್‌ 23-ಸೋಮವಾರ 
- ಆಯುಧ ಪೂಜೆ.

ಅಕ್ಟೋಬರ್‌ 24: ಮಂಗಳವಾರ
- ವಿಜಯದಶಮಿ.
ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರಿಂದ ನಂದೀ ಧ್ವಜ ಪೂಜೆ.
ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಂದ ಮತ್ತು ಗಣ್ಯಾತಿಗಣ್ಯರಿಂದ ಪುಷ್ಪಾರ್ಚನೆ,  ನಂತರ "ಜಂಬೂ ಸವಾರಿ" ಪ್ರಾರಂಭ.

ಅಕ್ಟೋಬರ್‌ 26-ಭಾನುವಾರ
ಬೆಟ್ಟದ ಶ್ರೀಚಾಮುಂಡೇಶ್ವರಿ ರಥೋತ್ಸವ.

ಬೆಂಗಳೂರು ಕ್ರೀಡಾಪಟುಗಳಿಗೆ ಸಿಹಿ ಸುದ್ದಿ: ಅ.6ರಂದು ದಸರಾ ಕ್ರೀಡಾಕೂಟ ಆಯೋಜನೆ

ಸತ್ಯ-ಮಿಥ್ಯಗಳ ಮಧ್ಯೆ ಏನಿದು ಮಹಿಷ ದಸರಾ..? ಏನಿದರ ಮರ್ಮ..?

Follow Us:
Download App:
  • android
  • ios