ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮೃತ ಪೌಲ್ ಬಂಧನಕ್ಕೊಳಗಾಗಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಸಿಐಡಿ ಪೊಲೀಸರು ಎಡಿಜಿಪಿಯೊಬ್ಬರನ್ನು ಬಂಧಿಸಿರುವುದು. ಪಿಎಸ್‌ಐ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಹಿನ್ನೆಲೆ ಬಂಧಿಸಲಾಗಿದೆ.  ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಅಮೃತ್ ಪೌಲ್ ಬಂಧನಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು (ಡಿ.14) : ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮೃತ ಪೌಲ್ ಬಂಧನಕ್ಕೊಳಗಾಗಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಸಿಐಡಿ ಪೊಲೀಸರು ಎಡಿಜಿಪಿಯೊಬ್ಬರನ್ನು ಬಂಧಿಸಿರುವುದು. ಪಿಎಸ್‌ಐ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಹಿನ್ನೆಲೆ ಬಂಧಿಸಲಾಗಿದೆ. ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಅಮೃತ್ ಪೌಲ್ ಬಂಧನಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.

ಮಾಧ್ಯಮಗಳಿಗೆ ಪತ್ರ ಬರೆದಿರುವ ಎಡಿಜಿಪಿ ಅಮೃತ್ ಪೌಲ್ ಪುತ್ರಿ ನುಹಾರ್ ಬನ್ಸಾಲ್, ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ. ಈ ಕೇಸ್‌ನಲ್ಲಿ ನನ್ನ ತಂದೆ ನಿರಪರಾಧಿ. ತಪ್ಪು ಮಾಡದೆ ಐದು ತಿಂಗಳಿಂದ ಜೈಲಿನಲ್ಲಿದ್ದಾರೆ. ಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ನನ್ನ ತಂದೆ ಒಬ್ಬ ಪ್ರಾಮಾಣಿಕ, ದಕ್ಷ ಐಪಿಎಸ್ ಅಧಿಕಾರಿ. ಯಾಕಾಗಿ ನನ್ನ ತಂದೆಯನ್ನು ಜೈಲಿನಲ್ಲಿ ಹಾಕಿದ್ದಾರೋ ಗೊತ್ತಿಲ್ಲ. ಅವರು ಅಮಾಯಕರು ಎಂದು ಪತ್ರದಲ್ಲಿ ತಿಳಿಸಿದ್ದಾಳೆ. 

PSI Scam: ಎಡಿಜಿಪಿ ಅಮೃತ್ ಪೌಲ್‌ ವಿರುದ್ದ ಚಾರ್ಜ್ ಶೀಟ್!

ನನ್ನ ತಂದೆಯನ್ನು ಐದು ತಿಂಗಳಿಂದ ಜೈಲಿನಲ್ಲಿರಿಸಿರುವುದರಿಂದ ನನ್ನ ಕುಟುಂಬ ಮಾನಸಿಕ ಹಾಗೂ ದೈಹಿಕ ನೋವು ಅನುಭವಿಸುತ್ತಿದ್ದೇನೆ. ನನ್ನ ತಂದೆ ಜೈಲಿನಲ್ಲಿರುವುದರಿಂದ ಆರ್ಥಿಕವಾಗಿ ಕುಟುಂಬಸ್ಥರಿಗೆ ತೊಂದರೆಯಾಗಿದೆ. ಜು.22 ರಿಂದ ನನ್ನ ತಂದೆಯವರ ಬ್ಯಾಂಕ್ ಖಾತೆ ಫ್ರೀಜ್ ಮಾಡಲಾಗಿದೆ. ಇದರಿಂದಾಗಿ ಇಎಂಐ ಕಟ್ಟಲಾಗದೆ ಸಾಕಷ್ಟು ದಂಡ ವಿಧಿಸಲಾಗ್ತಿದೆ. ತಂದೆ ವಿರುದ್ಧ ಸಲ್ಲಿಸಲಾಗಿರುವು ಚಾರ್ಜ್ ಶೀಟ್‌ನಲ್ಲಿರುವ ಮಾಹಿತಿ ಉರುಳಿಲ್ಲ. ದಯವಿಟ್ಟು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ಇದನ್ನು ತನ್ನಿ. ನಮಗೆ ನ್ಯಾಯ ಕೊಡಿಸಿ ಎಂದು ಎಡಿಜಿಪಿ ಅಮೃತ್ ಪೌಲ್ ಪುತ್ರಿ ಪತ್ರದ ಮೂಲಕ ಮನವಿ ಮಾಡಿದ್ದಾಳೆ.