ಬೆಂಗಳೂರು(ಜು.09): ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಮೃತಪಟ್ಟ ಬೆನ್ನಲ್ಲೇ ಆಸ್ತಿ ವಿವಾದ ಶುರುವಾಗಿದೆ. ಹೌದು, ಆಸ್ತಿಯಲ್ಲಿ ಪಾಲು ಕೋರಿ ಮುತ್ತಪ್ಪ ರೈ ಅವರ ದ್ವಿತೀಯ ಪತ್ನಿ ಅನುರಾಧಾ ಅವರು ನಗರದ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 

ಈ ಸಂಬಂಧ ಸಿವಿಲ್ ನ್ಯಾಯಾಲಯ ಮುತ್ತಪ್ಪ ರೈ ಪುತ್ರ ರಾಕಿ, ರಿಕ್ಕಿ ಸೇರಿ 17 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನ ಆಗಸ್ಟ್ 4 ಕ್ಕೆ ನ್ಯಾಯಾಲಯ ನಿಗದಿ ಪಡಿಸಿದೆ. 
ಮುತ್ತಪ್ಪ ರೈ ಸಾವನ್ನಪ್ಪುವ ಮುನ್ನವೇ ಎಲ್ಲರ ಲೈಫ್ ಸೆಟಲ್ ಮಾಡಿದ್ದರು ಎಂದು ಹೇಳಲಾಗಿದೆ. ಮುತ್ತಪ್ಪ ರೈ ಬರೆದಿರುವ 41 ಪುಟಗಳ ವಿಲ್‌ನಲ್ಲಿ ಯಾರಿಗೆ ಎಷ್ಟು ಆಸ್ತಿ ಕೊಡಬೇಕು? ಸೈಟ್ ಹಾಗೂ ಮನೆಗಳನ್ನು ಯಾರು ಇಟ್ಟುಕೊಳ್ಳಬೇಕು.

ಸಾವಿಗೂ ಮುನ್ನ ವಿಲ್ ಮಾಡಿಟ್ಟ ಮುತ್ತಪ್ಪ ರೈ; ಯಾರಿಗೆ ಎಷ್ಟು ಆಸ್ತಿ..?

ಜಯಕರ್ನಾಟಕ ಸಂಘಟನೆ ಜವಾಬ್ದಾರಿ ಯಾರಿಗೆ ಎನ್ನುವುದನ್ನು ವಿಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ವಿಲ್ ಪ್ರಕಾರ ರೈ ಆಸ್ತಿ ಸುಮಾರು 2 ಸಾವಿರ ಕೋಟಿ ರುಪಾಯಿಗಳಷ್ಟಿದೆ ಎಂದು ತಿಳಿದು ಬಂದಿದೆ.  ಮಾಜಿ ಡಾನ್‌, ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಮೇ. 15ರಂದು ಇಹಲೋಕ ತ್ಯಜಿಸಿದ್ದರು.