ಬುರ್ಖಾ, ಟೋಪಿ ಧರಿಸಿದ ಮುಸ್ಲಿಂ ಜೋಡಿಯಿಂದ ಜೈ ಶ್ರೀರಾಮ್ ಘೋಷಣೆ: ಯುವ ಜೋಡಿಗೆ ಕೊಲೆ ಬೆದರಿಕೆ
ಬುರ್ಖಾ ಮತ್ತು ಟೋಪಿ ಧರಿಸಿದ ಮುಸ್ಲಿಂ ಜೋಡಿಯೊಂದು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿದ್ದು, ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ.

ಬೆಂಗಳೂರು (ಆ.29): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಾಡಿದ್ದಾರೆನ್ನಲಾದ ವಿಡಿಯೋದಲ್ಲಿ ಬುರ್ಖಾ ಧರಿಸಿದ ಯುವತಿ ಹಾಗೂ ನಮಾಜ್ ಮಾಡಲು ಬಳಸುವ ಟೋಪಿಯನ್ನು ಹಾಕಿಕೊಂಡ ಯುವ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಆದರೆ, ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬುರ್ಖಾ ಮತ್ತು ಟೋಪಿ ತೆಗೆದು ಏನಾದ್ರೂ ಮಾತನಾಡುವಂತೆ ಮುಸ್ಲಿಂ ಸಮುದಾಯದ ಯುವಕರು ಮತ್ತು ಹಿರಿಯರಿಂದ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಮುಸ್ಲಿಂ ಸಮುದಾಯದ ಜೋಡಿಯೊಂದು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ಬುರ್ಖಾ ಧರಿಸಿ ಹಿಂದೆ ನಿಂತುಕೊಂಡಿದ್ದರೆ, ಯುವಕ ಟೋಪಿ ಧರಿಸಿ ಮುಂದೆ ನಿಂತುಕೊಂಡು ಸೆಲ್ಫಿ ವೀಡಿಯೋ ಮಾಡಿಕೊಂಡಿದ್ದಾರೆ. ಇಬಬರೂ ಓಟ್ಟಿಗೆ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಇನ್ನು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತತಿದ್ದಂತೆ, ಅವರ ವಿಡಿಯೋಗೆ ಎಡಿಟ್ ಮಾಡಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.
ಅಂದುಕೊಂಡ ಕಾರ್ಯ ಯಶಸ್ಸು, ತಾಯಿ ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ
ಕತ್ತು ಸೀಳ್ತೀವಿ ಎಂದು ಬೆದರಿಕೆ: ಮತ್ತೊಂದೆಡೆ, ಯುವಕ ಮತ್ತು ಯುವತಿಗೆ ನೀವು 'ಬುರ್ಖಾ ತೆಗೆದು ಏನಾದ್ರು ಮಾತನಾಡಿ' ಮುಸ್ಲಿಂರನ್ನ ಮದ್ಯಕ್ಕೆ ತಂದು ಜೈ ಶ್ರೀರಾಂ ಅಂತ ಹೇಳ್ಬೇಡಿ. ನಿಜವಾದ ಮುಸ್ಲಿಮರ ಮುಂದೆ ಬಂದು ಮಾತನಾಡಿದರೆ ಸೀಳ್ತಿವಿ ಎಂದು ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಬೆಂಗಳೂರಿನಲ್ಲಿ ಮಾಡಿದ್ದು ಎನ್ನಲಾಗುತ್ತಿದ್ದು, ವಿಡೀಯೋ ವೈರಲ್ ಆಗುತ್ತಿದೆ. ಇನ್ನು ಕೆಲವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಈ ಕುರಿತು ಬೆಂಗಳೂರು ನಗರ ಪೊಲೀಸರು ಇದನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿ ರೀಟ್ವೀಟ್ ಮಾಡಿದ್ದಾರೆ.
ಎಸ್‌ಡಿಪಿಐ ಮುಖಂಡನ ಮಗನಿಂದ ಹಲ್ಲೆ: ಮಂಗಳೂರು (ಆ.23): ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಮಂಗಳೂರು ಪೊಲೀಸರು ಎಸ್‌ಡಿಪಿಐ ಮುಖಂಡನ ಪುತ್ರನ ಸಹಿತ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಕಾಲೇಜು ಓದುತ್ತಿದ್ದ ಮುಸ್ಲಿಂ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) (Social Democratic Party of India-SDPI) ಮುಖಂಡ ಅನ್ವರ್ ಸಾದತ್ ಅವರ ಪುತ್ರ ಅಬ್ದುಲ್ಲಾ ಹನ್ನಾನ್ (19) ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ರಾಹಿಂ ತಾಬೀಶ್ (19), ಮಹಮ್ಮದ್ ಶಾಕೀಫ್(19), ಮಹಮ್ಮದ್ ಶಾಯಿಕ್(19), ಯು.ಪಿ.ತನ್ವೀರ್(19), ಅಬ್ದುಲ್ ರಶೀದ್(20) ಮತ್ತು ಮನ್ಸೂರ್(19) ಉಳಿದ ಬಂಧಿತರು ಆಗಿದ್ದಾರೆ.
ಮುಸ್ಲಿಂ ವಿದ್ಯಾರ್ಥಿ ಅಪಹರಿಸಿ ಹಲ್ಲೆ: ಎಸ್‌ಡಿಪಿಐ ಮುಖಂಡನ ಪುತ್ರ ಸಹಿತ 7 ಜನರ ಬಂಧನ
ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಆರೋಪಿಗಳು: ಎಸ್‌ಡಿಪಿಐ ಮುಖಂಡನ ಮಗನ ಮೇಲೆ ಗೂಂಡಾಗಿರಿ ಆರೋಪ: ಎಸ್‌ಡಿಪಿಐ ಮುಖಂಡ ಅನ್ವರ್ ಸಾದತ್ ಪುತ್ರ ಹನಾನ್ ವಿರುದ್ದ ಗೂಂಡಾಗಿರಿ ಆರೋಪ ವ್ಯಕ್ತವಾಗಿತ್ತು. ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲಾಟ್ ನಲ್ಲಿ ಘಟನೆ ನಡೆದಿದ್ದು, ನಗರದ ಅಲೋಶಿಯಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿತ್ತು. ಮಂಗಳೂರಿನ ಬಲ್ಮಠ ಬಳಿಯ ಮತ್ತೊಂದು ಖಾಸಗಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳಿಂದ ಹಲ್ಲೆ ನಡೆದಿದ್ದು, ಹುಡುಗಿ ವಿಚಾರಕ್ಕೆ ಮುಸ್ಲಿಂ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಲಾಗಿತ್ತು.