Asianet Suvarna News Asianet Suvarna News

ಮೋದಿ ಸಂಸತ್‌ಗೆ ಕೈಮುಗಿದು ಹೋಗಿದ್ರು, ಸಂಸತ್‌ ಬದಲಾಯ್ತು, ಈಗ ಸಂವಿಧಾನಕ್ಕೆ ಕೈಮುಗಿದಿದ್ದಾರೆ, ಇದೂ ಬದಲಾಗುತ್ತೆ: ಹಂಸಲೇಖ

ಲೋಕಸಭೆ ಚುನಾವಣೆ ನಡೆದು ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ. ಇಷ್ಟು ದೊಡ್ಡ ಬಹುಮತದಲ್ಲಿ ಪ್ರಧಾನಿಯಾಗಿ ಬಂದ ವ್ಯಕ್ತಿ ದೇಶದಲ್ಲಿ ಏನು ಬದಲಾವಣೆ ತರ್ತಾರೆ ಅನ್ನೋ ಆಶಯ ನನಗಿತ್ತು. ಆದರೆ ಸಂಸತ್ ಭವನಕ್ಕೆ ನಮಸ್ಕಾರ ಮಾಡಿ ಒಳಹೋಗಿದ್ರು ನಂತರ ಸಂಸತ್ತನ್ನೇ ಬದಲಿಸಿಬಿಟ್ರು. ಇವಾಗ ಸಂವಿಧಾನಕ್ಕೆ ನಮಸ್ಕಾರ ಮಾಡಿದ್ದಾರೆ ಅಲ್ಲಿಗೇ ಸಂವಿಧಾನ ಬದಲಾಗುತ್ತೆ ಅಂತರ್ಥ ಎಂದು ಚಿತ್ರ ಸಾಹಿತಿ ಹಂಸಲೇಖ ವ್ಯಂಗ್ಯ ಮಾಡಿದರು.

Music composer Hamsalekha speech about kannada paksha at bengaluru rav
Author
First Published Aug 25, 2024, 4:44 PM IST | Last Updated Aug 26, 2024, 9:06 AM IST

ಬೆಂಗಳೂರು (ಆ.25): ಲೋಕಸಭೆ ಚುನಾವಣೆ ನಡೆದು ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ. ಇಷ್ಟು ದೊಡ್ಡ ಬಹುಮತದಲ್ಲಿ ಪ್ರಧಾನಿಯಾಗಿ ಬಂದ ವ್ಯಕ್ತಿ ದೇಶದಲ್ಲಿ ಏನು ಬದಲಾವಣೆ ತರ್ತಾರೆ ಅನ್ನೋ ಆಶಯ ನನಗಿತ್ತು. ಆದರೆ ಸಂಸತ್ ಭವನಕ್ಕೆ ನಮಸ್ಕಾರ ಮಾಡಿ ಒಳಹೋಗಿದ್ರು ನಂತರ ಸಂಸತ್ತನ್ನೇ ಬದಲಿಸಿಬಿಟ್ರು. ಇವಾಗ ಸಂವಿಧಾನಕ್ಕೆ ನಮಸ್ಕಾರ ಮಾಡಿದ್ದಾರೆ ಅಲ್ಲಿಗೇ ಸಂವಿಧಾನ ಬದಲಾಗುತ್ತೆ ಅಂತರ್ಥ ಎಂದು ಚಿತ್ರ ಸಾಹಿತಿ ಹಂಸಲೇಖ ವ್ಯಂಗ್ಯ ಮಾಡಿದರು.

ಸಮಾನ ಮನಸ್ಕರ ವೇದಿಕೆಯಿಂದ ಬೆಂಗಳೂರಿನ ಬಸವ ಸಮಿತಿಯಲ್ಲಿ ನಡೆದ ನಮ್ಮ‌ ನಾಡು ನಮ್ಮ ಆಳ್ವಿಕೆ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಪಕ್ಷ ಕಟ್ಟುವ ಈ ಬಯಕೆ ಎಷ್ಟು ವಿಸ್ತಾರವಾದ ಕಾರ್ಯಭಾರ ಇದೆ ಅನ್ನೋದು ನನಗೆ ಖುಷಿ ಕೊಟ್ಟಿತು. ಕನ್ನಡ ಪಕ್ಷ ಎನ್ನುವ ನಿನ್ನ(ಕವಿರಾಜ್) ಹುರುಪಿಗೆ ಧನ್ಯವಾದ ಕನ್ನಡಿಗರಿಗೆ ಕನ್ನಡ ಪಕ್ಷದ ಅನಿವಾರ್ಯತೆ ಬಗ್ಗೆ ಬಹಳ ವಿಸ್ತಾರವಾಗಿ ತಿಳಿಸಿದ್ದೀರಿ ಎಂದರು.

ದೆಹಲಿ ಕರ್ನಾಟಕ ಸಂಘಕ್ಕೆ ನೋಯ್ಡಾದಲ್ಲಿ ಜಾಗ; ಉಪ್ರ ಮುಖ್ಯಮಂತ್ರಿ ಜೊತೆ ಚರ್ಚೆ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

ಇವತ್ತಿಂದ ಕನ್ನಡ ಪಕ್ಷ ಉದಯವಾಯ್ತು ಅಂತ ತಿಳಿದುಕೊಳ್ಳಿ. ಇಂದು ಭ್ರೂಣ ಸಿದ್ದವಾಗಿದೆ  ಮುಂದಿನ ಆರು ತಿಂಗಳಿನಲ್ಲಿ ಪ್ರಾಣ ಸಿದ್ಧವಾಗಿ ಆಕಾರ ಸಿದ್ದವಾಗಲಿ ಮುಂದೆ ನಮಗಾಗಿ ಈ ಪಕ್ಷ ಇರುತ್ತೆ. ಕನ್ನಡ ದೀಪಗಳು ಬಿಡಿ ಬಿಡಿಯಾಗಿ ಹೊತ್ತಿಕೊಂಡಿದೆ. ಇವುಗಳೆಲ್ಲ ಹೊಂದಾಗಿ ಪಂಚಾಗಿ ಉರಿಯಬೇಕು. ಕರ್ನಾಟಕ ಕ್ಕೆ ಒಂದು ಕನ್ನಡ ಪಕ್ಷ ಆಗಬೇಕಿತ್ತು. ರಾಜಕುಮಾರ ರಾಜಕುಮಾರ ಅಂತ ಎಲ್ರೂ ಸಿದ್ದವಾಗಿದ್ರು. ರಾಜಕುಮಾರ ಅವ್ರು ನನಗೆ ರಾಜಕಾರಣ ಬೇಡ ಅಂದು ಬಿಟ್ರು. ಇವತ್ತು ಮತ್ತೆ ಕವಿರಾಜ್ ಅವರಿಂದ ಈ ಕೂಗು ಶುರುವಾಗಿದೆ. ಈ ಕನ್ನಡ ಪಕ್ಷ ಸಮತ್ವದ ಪ್ರತಿಷ್ಠಾಪನೆಯಲ್ಲಿ ಶುದ್ಧವಾಗಬೇಕು. ಕರ್ನಾಟಕ ನಮ್ಮ ಇಂಡಿಯ. ಕನ್ನಡ ಮಾತೆಯೇ ಭಾರತ ಮಾತೆಯಾಗಬೇಕು. ಸಮತ್ವವನ್ನು ಸಿದ್ದಾಂತವಾಗಿ ಇಟ್ಟುಕೊಂಡು ಇನ್ನು ನಾಲ್ಕು ವರ್ಷ ಇದೆ ಅವಕಾಶ ಇದೆ ಮುಂದಿನ ಚುನಾವಣೆಯಲ್ಲಿ ಕನ್ನಡ ಪಕ್ಷದ ಧ್ವಜ ಹಾರಲಿ ಎಂದರು. 

ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ: ಚಿತ್ರಸಾಹಿತಿ ಕವಿರಾಜ್

ನಮ್ಮ ರಾಜ್ಯದ ಆಡಳಿತಕ್ಕೆ, ಶಿಕ್ಷಣಕ್ಕೆ, ನೀರಾವರಿಗೆ ಯಾವುದಾದರೂ ಅಭಿವೃದ್ಧಿ ಕಾರ್ಯಕ್ರಗಳಾಗಬೇಕಾದರೆ ನಮಗೆ ಹಕ್ಕಿಲ್ಲ. ನಮ್ಮ‌ ತೆರಿಗೆಯನ್ನು ನಾವು ಬಳಸಿಕೊಳ್ಳುವದಕ್ಕೂ ಹಕ್ಕಿಲ್ಲ.  ಅಭಿವೃದ್ಧಿ ಕಾರ್ಯಗಳಿಗಾಗಿ ನಾವು ಅನುದಾನಕ್ಕಾಗಿ ಭಿಕ್ಷೆ ಬೇಡಬೇಕು. ಅತಿ ಹೆಚ್ಚು ವಲಸೆ ಬೆಂಗಳೂರಿನ ಕಡೆಗೆ ಬರ್ತಾ ಇದೆ. ಸಾಮಾನ್ಯ ಕನ್ನಡಿಗರು ಬೆಂಗಳೂರಿನ ನಗರದಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಅದೇ ಹೊರ ರಾಜ್ಯದವರು ಇಲ್ಲಿ ದುಬಾರಿ ಹಣ ನೀಡಿ ಸೈಟ್ ಮನೆ ಮಾಡ್ತಾ ಇದ್ದಾರೆ. ಹಿಂದಿ ಹೇರಿಕೆ ನಮ್ಮ ಕನ್ನಡಿಗರ ಮೇಲೆ ಅತಿ ಹೆಚ್ಚಾಗಿ ಆಗ್ತಿದೆ. ಬ್ಯಾಂಕ್‌ಗಳಲ್ಲಿ ಹಿಂದಿ ಭಾಷಿಕರ ಸಂಖ್ಯೆಯೇ ಹೆಚ್ಚಾಗಿದೆ. ಮಾಲ್‌ಗಳಲ್ಲಿ ಪಾರ್ಕಿಂಗ್ ಸ್ಥಳದಿಂದ ಹಿಡಿದು ಲಿಫ್ಟ್ ಆಪರೇಟ್ ಮಾಡುವವರೆಗೂ ಕ್ಯಾ ಚಾಯಿಯೇ ಅಂತಾರೆ.  ನಾವು ಯಾವುದೋ ಬೇರೆ ರಾಜ್ಯಕ್ಕೆ ಹೋಗಿಬಂದ್ವೇನೋ ಅನಿಸುತ್ತೆ.

ಹಂಸಲೇಖಾ-ರವಿಚಂದ್ರನ್ ಕಿತ್ತಾಟಕ್ಕೆ ಮೂಲ ಕಾರಣ ಬಿಚ್ಚಿಟ್ಟ ಲಹರಿ ವೇಲು: ಹೀಗೂ ಉಂಟೇ ಗುರೂ...!

ನಮ್ಮ ರಾಜ್ಯದಲ್ಲಿ ನಾವು ನಮ್ಮ ಭಾಷೆ  ಎರಡನೇ ದರ್ಜೆಗೆ ಇಳಿದಿದ್ದೇವೆ. ಈಗಾಗಲೇ ಸಾಕಷ್ಟು ಮೈಮರೆತಿದ್ದೇವೆ. ಇನ್ನು ಮುಂದೆ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಯಾರಿಗೂ ನಾವು ಬರೋದು ಬೇಡಾ ಅಂತ ಹೇಳ್ತಾ ಇಲ್ಲ. ಬಂದವರು ಇಲ್ಲಿನವರನ್ನು ತುಳಿಯೋದು ಬಿಟ್ಟು ಇಲ್ಲಿನ ತನವನ್ನು ರೂಪಿಸಿಕೊಳ್ಳಿ ಎಂದರು. 

Latest Videos
Follow Us:
Download App:
  • android
  • ios