ಅಥಣಿ: ಒಂದೊಮ್ಮೆ ಕ್ಷೇತ್ರದ ಮತದಾರರಿಗೆ ಮೋಸ ಮಾಡಿ ಬಿಜೆಪಿ ಸೇರಿದರೆ ಅಥವಾ ಅವರಿಗೆ ಬೆಂಬಲ ನೀಡಿದರೆ ಶಾಸಕ ಮಹೇಶ್‌ ಕುಮಠಳ್ಳಿ ಅವರನ್ನು ಕೊಲೆ ಮಾಡುವುದಾಗಿ ಕುಡಿದ ಮತ್ತಿನಲ್ಲಿ ವ್ಯಕ್ತಿಗಳಿಬ್ಬರು ಬೆದರಿಕೆ ಹಾಕಿದ್ದು, ಇದೀಗ ಆ ವಿಡಿಯೋ ವೈರಲ್‌ ಆಗಿದೆ. 

ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ರಾತ್ರಿ ಕುಡಿದ ಅಮಲಿನಲ್ಲಿ ವ್ಯಕ್ತಿಗಳಿಬ್ಬರು ಈ ಬೆದರಿಕೆ ಹಾಕಿದ್ದು, ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. 

ವಿಡಿಯೋದಲ್ಲಿರುವವರನ್ನು ಅಥಣಿ ತಾಲೂಕಿನ ಬುರ್ಲಟ್ಟಿಗ್ರಾಮದ ಸಂಜೀವ ಯಳ್ಳೂರ ಮತ್ತು ಬಸವರಾಜ ಖೋತ ಎಂದು ಹೇಳಲಾಗಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.