ಟೌನ್ ಹಾಲ್ ನಿಂದ ತೆರಳುತ್ತಿದ್ದ ಕಾರ್ಯಕರ್ತನ ಮೇಲೆ ರಾಡ್‌ನಿಂದ ಹಲ್ಲೆ
ಪೌರತ್ವ ಕಾಯಿದೆ ವಿರೋಧಿಸಿ ಪ್ರತಿಭಟನೆಗಳ ಒಂದು ಹಂತ ಮುಗಿದಿದಿದ್ದರೆ ಇದೀಗ ಒಔರತ್ವ ಕಾಯಿದೆ ಬೆಂಬಲಿಸಿ ಜನಜಾಗೃತಿ ಕೆಲಸ ಆರಂಭವಾಗಿದೆ. ಶಾಂತವಾಗಿದ್ದ ಬೆಂಗಳೂರಿನಲ್ಲಿಯೂ ಶಾಂತಿ ಕದಡುವ ಕೆಲಸವಾಗಿದೆ.
ಬೆಂಗಳೂರು(ಡಿ. 22) ಟೌನ್ ಹಾಲ್ ಬಳಿಯ ಜನ ಜಾಗೃತಿ ಕಾರ್ಯಕ್ರಮ ಮುಗಿಸಿಕೊಂಡು ಹೊರಟ ಕಾರ್ಯಕರ್ತನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಇಂಡಿಯಾ ಫಾರ್ ಸಿಎಎ ಕಾರ್ಯಕರ್ತನ ಬೆನ್ನು, ತಲೆಗೆ ರಾಡ್ ನಿಂದ ಹೊಡೆದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ವರುಣ್ ಎಂಬಾತನಿಗೆ ಚಾಕುವಿನಿಂದ ಇರಿದಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜೆಸಿ ರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ತೆರಳುವಾಗ ಅಡ್ಡಗಟ್ಟಿ ದುಷ್ಕರ್ಮಿಗಳು ಹಲ್ಲೆನಡೆಸಿದ್ದಾರೆ.
ಪೌರತ್ವ ಮಸೂದೆ ಬೆಂಬಲಿಸಿ ಜನಜಾಗೃತಿ: ತುಂಬಿ ತುಳುಕಿದ ಟೌನ್ ಹಾಲ್
ಗಾಯಗೊಂಡ ಕಾರ್ಯಕರ್ತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವರುಣ್ ತಲೆ ಭಾಗ ಹಾಗೂ ಬೆನ್ನಿಗೆ ಇರಿಯಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ ಘಟನೆ ವಿವರ ಪಡೆದಿದ್ದಾರೆ.
ಸ್ಥಳದಲ್ಲೆ ಮೋಕ್ಕಾಂ ಹೂಡಿರುವ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಬಂದೋಬಸ್ತ್ ನಿರ್ವಹಿಸುತ್ತಿದ್ದಾರೆ. ಯಾರನ್ನೂ ಒಳ ಬಿಡದಂತೆ ಎಚ್ಚರಿಕೆ ವಹಿಸಲಾಗಿದೆ.