Asianet Suvarna News Asianet Suvarna News

ಬೆಂಗಳೂರಿಗೆ ಉಸ್ತುವಾರಿ ಇರುವಾಗ ಚರ್ಚೆ ಅನಗತ್ಯ: ಮುನಿರತ್ನ

  •  ಬೆಂಗಳೂರು ಜಿಲ್ಲೆಯ ಉಸ್ತುವಾರಿ ಮುಖ್ಯಮಂತ್ರಿ ಬಳಿ ಇರುವಾಗ ಇದರ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ 
  • ಸಿಎಂ ಯಾವುದೇ ನಿರ್ಧಾರ ಕೈಗೊಂಡರೂ ಪಾಲಿಸುತ್ತೇವೆ 
muniratna Speaks about bengaluru in charge issue snr
Author
Bengaluru, First Published Oct 13, 2021, 7:34 AM IST

ದಾವಣಗೆರೆ (ಅ.13): ಬೆಂಗಳೂರು (Bengaluru) ಜಿಲ್ಲೆಯ ಉಸ್ತುವಾರಿ ಮುಖ್ಯಮಂತ್ರಿ ಬಳಿ ಇರುವಾಗ ಇದರ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ ಎಂದು ಸಚಿವ ಮುನಿರತ್ನ (Muniratna) ಹೇಳಿದ್ದಾರೆ. 

ನಗರದ ಜಿಎಂಐಟಿ (GMIT) ಅತಿಥಿ ಗೃಹದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾದ ವಿ.ಸೋಮಣ್ಣ (V Somanna), ಆರ್‌.ಅಶೋಕ (R Ashok) ಸೇರಿದಂತೆ ಎಲ್ಲಾ ಸಚಿವರು ಮುಖ್ಯಮಂತ್ರಿಗಳ ಕೆಳಗೆ ಕೆಲಸ ಮಾಡುತ್ತಿದ್ದೇವೆ. 

ಮುನಿರತ್ನ ಪಕ್ಷಾಂತರ ವಿಷಯ ಕೆಣಕಿದ ಡಿಕೆಸು : ಸಿಎಂ ಜೊತೆ ವಾಕ್ಸಮರ

ಸಿಎಂ ಯಾವುದೇ ನಿರ್ಧಾರ ಕೈಗೊಂಡರೂ ಪಾಲಿಸುತ್ತೇವೆ ಎಂದರು. ಸ್ವತಃ ಸಿಎಂ ಬಳಿಯೇ ಬೆಂಗಳೂರು ಉಸ್ತುವಾರಿ, ಖಾತೆ ಇದ್ದಾಗ ಅದರ ಬಗ್ಗೆ ಚರ್ಚಿಸುವ ಪ್ರಮೇಯವೇ ಇಲ್ಲ. 

ಮುಖ್ಯಮಂತ್ರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಶಾಸಕರೆಲ್ಲರೂ ಒಟ್ಟಾಗಿದ್ದು ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಇನ್ನು ಐಟಿ ದಾಳಿ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು (BS Yediyurappa) ನಿಯಂತ್ರಿಸುವ ಪ್ರಶ್ನೆಯೇ ಇಲ್ಲ. ಐಟಿ ದಾಳಿ ವಿಚಾರದಲ್ಲಿ ಯಾರೂ ರಾಜಕೀಯವನ್ನು (politics) ತರಬಾರದು ಎಂದರು.

ಸೋಮಣ್ನ ಪರ ಬ್ಯಾಟಿಂಗ್

 ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basvaraj bommai) ಅವರ ಸಂಪುಟದಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ.

ಸಚಿವ ಸೋಮಣ್ಣಗೆ ಅಶೋಕ್ ತಿರುಗೇಟು: ಬಿಜೆಪಿ ಭುಗಿಲೆದ್ದ ಅಸಮಾಧಾನ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದಿದ್ದು, ವಸತಿ ಸಚಿವ ವಿ.ಸೋಮಣ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ಸೋಮವಣ್ಣ ಪರ ಮತ್ತೋರ್ವ ಸಚಿವ ಬ್ಯಾಟಿಂಗ್ ಮಾಡಿದ್ದಾರೆ.

Follow Us:
Download App:
  • android
  • ios