Asianet Suvarna News Asianet Suvarna News

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಕಾರ್ಖಾನೆಗಳಿಗೆ ಸಚಿವ ಮುನೇನಕೊಪ್ಪ ಖಡಕ್ ಸೂಚನೆ

* ರೈತರಿಗೆ ಹಣ ಪಾವತಿ ಬಾಕಿ ಇಟ್ಟುಕೊಂಡಿರುವ 7 ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು
* ಕಾರ್ಖಾನೆಗಳಿಗೆ  ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಖಡಕ್ ಸೂಚನೆ
* ಒಟ್ಟು 42 ಕೋಟಿ ಹಣ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿರುವ  ಕಾರ್ಖಾನೆಗಳು 

munenakoppa Gives deadline to sugar-factories for farmers pending payments rbj
Author
Bengaluru, First Published Oct 1, 2021, 9:41 PM IST

ಬೆಂಗಳೂರು, (ಅ.01): ಇನ್ನೆರಡು ದಿನಗಳಲ್ಲಿ ರೈತರ ಕಬ್ಬಿನ ಬಾಕಿ ಹಣ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಖಡಕ್ ಸೂಚನೆ ಕೊಟ್ಟಿದ್ದಾರೆ.

 ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು/ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಇಂದು(ಅ.01) ಸಭೆ ನಡೆಸಿದರು.

ಟಾಟಾ ಪಾಲಾಗಿಲ್ಲ ಏರ್ ಇಂಡಿಯಾ ವಿಮಾನ, ಕೊನೆಗೂ ಮೌನ ಮುರಿದ ಬಿಸಿಸಿಐ: ಅ.1ರ ಟಾಪ್ 10 ಸುದ್ದಿ!

7 ಸಕ್ಕರೆ ಕಾರ್ಖಾನೆಗಳು ರೈತರಿಗೆ ಒಟ್ಟು 42 ಕೋಟಿ ಹಣ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿದ್ದು, 2 ದಿನದೊಳಗೆ ರೈತರಿಗೆ ಬಾಕಿ ಪಾವತಿಸುವಂತೆ ಶಂಕರ ಪಾಟೀಲ ಮುನೇನಕೊಪ್ಪ ಖಡಕ್ ಸೂಚನೆ ಕೊಟ್ಟಿದ್ದಾರೆ.

 ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಆಕ್ಟೋಬರ್ 03 ರೊಳಗೆ ಹಣ ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಬಸವೇಶ್ವರ ಶುಗರ್ಸ್ ಹಾಗೂ ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ವಸೂಲಾತಿಗೆ ನೊಟೀಸ್ ಜಾರಿಗೊಳಿಸಲಾಗಿದೆ. ಉಳಿದ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ ರೈತರಿಗೆ ಹಣ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು.

ಇನ್ನು ಯಾವ ಸಕ್ಕರೆ ಕಾರ್ಖಾನೆಗಳಲ್ಲಿ ಎಷ್ಟು ಹಣ ಪಾವತಿಸುವುದು ಬಾಕಿಯಿದೆ? ಎನ್ನುವ ವಿವರ ಈ ಕೆಳಗಿನಂತಿದೆ.

ಕಾರ್ಖಾನೆಗಳು ಹಾಗೂ ಬಾಕಿ ಹಣ
* ಸೋಮೇಶ್ವರ ಎಸ್‌. ಎಸ್. ಕೆ .ಲಿ. ಬೈಲಹೊಂಗಲ, ಬೆಳಗಾವಿ – 69 ಲಕ್ಷ
* ಜಮಖಂಡಿ ಶುಗರ್ಸ್ ಲಿ. ಹಿರೆಪಡಸಲಗಿ, ಜಮಖಂಡಿ, ಬಾಗಲಕೋಟೆ- 1 ಕೋಟಿ 5 ಲಕ್ಷ
* ನಿರಾಣಿ ಶುಗರ್ಸ್ ಲಿ. ಮುಧೋಳ, ಬಾಗಲಕೋಟೆ – 5 ಕೋಟಿ 67 ಲಕ್ಷ
* ಶ್ರೀ ಸಾಯಿಪ್ರಿಯಾ ಶುಗರ್ಸ್ ಲಿ. ಹಿಪ್ಪರಗಿ, ಬಾಗಲಕೋಟೆ – 4 ಕೋಟಿ 15 ಲಕ್ಷ
* ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಲಿ. ಬೀದರ್ – 2 ಕೋಟಿ 9 ಲಕ್ಷ
* ಶ್ರೀ ಬಸವೇಶ್ವರ ಶುಗರ್ಸ್ ಲಿ, ಕಾರಜೋಳ, ವಿಜಯಪುರ – 22 ಕೋಟಿ 11 ಲಕ್ಷ
* ಕೋರ್ ಗ್ಲೀನ್ ಶುಗರ್ಸ್ ಅಂಡ್ ಫ್ಯೂಯೆಲ್ಸ್ ಪ್ರೈ ಲಿ. ಶಹಾಪುರ, ಯಾದಗಿರಿ- 6 ಕೋಟಿ 41 ಲಕ್ಷ

Follow Us:
Download App:
  • android
  • ios