ಟಾಟಾ ಪಾಲಾಗಿಲ್ಲ ಏರ್ ಇಂಡಿಯಾ ವಿಮಾನ, ಕೊನೆಗೂ ಮೌನ ಮುರಿದ ಬಿಸಿಸಿಐ: ಅ.1ರ ಟಾಪ್ 10 ಸುದ್ದಿ!
ಏರ್ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್ ಪಾಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇತ್ತ ಬೆಂಗಳೂರಿನ ಮೆಟ್ರೋ ಸ್ಟೇಷನ್‌ಗೆ ಶಂಕರ್ ನಾಗ್ ಹೆಸರಿಡಲು ನಿರ್ಧರಿಸಲಾಗಿದೆ. ಕೊಹ್ಲಿ ನಾಯಕತ್ವ ಕುರಿತು ಕೊನೆಗೂ ಬಿಸಿಸಿಐ ಮೌನ ಮುರಿದಿದೆ. ಮತ್ತೆ ಇಡಿ ಜಮೀರ್ ವಿಚಾರಣೆ ನಡೆಸಿದೆ. ಅದಾನಿ ಕುಟುಂಬಕ್ಕೆ ನಿತ್ಯದ ಆದಾಯ 1000 ಕೋಟಿ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಸೇರಿದಂತೆ ಅಕ್ಟೋಬರ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಏರ್ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್ ಪಾಲಾಗಿಲ್ಲ ; ಸ್ಪಷ್ಟನೆ ನೀಡಿದ ಕೇಂದ್ರ!
ಏರ್ ಇಂಡಿಯಾ ವಿಯಾನಯಾನ(Air India) ಸಂಸ್ಥೆಯನ್ನು ಖಾಸಗೀಕರಣ ಸ್ಕೀಮ್ ಅಡಿಯಲ್ಲಿ ಮಾರಾಟ ಮಾಡಲಾಗಿದ್ದು, ಟಾಟಾ ಗ್ರೂಪ್(Tata Group) ಖರೀದಿಸಿದೆ ಅನ್ನೋ ಮಾಹಿತಿ ಮಿಂಚಿನಂತೆ ಹರಿದಾಡಿದೆ. ಈ ವರಿದು ಕುರಿತು ಕೇಂದ್ರ ಸರ್ಕಾರ(Finance Ministry) ಸ್ಪಷ್ಟನೆ ನೀಡಿದ್ದು, ಈ ರೀತಿಯ ಯಾವುದೇ ಬಿಡ್ ನಡೆದಿಲ್ಲ, ಮಾಧ್ಯಮ ವರದಿ(Media Reports) ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಿದೆ.
ಇಡಿಯಿಂದ ಜಮೀರ್ ವಿಚಾರಣೆ... ಅದಕಕ್ಕೂ ಇದಕ್ಕೂ ಸಂಬಂಧ ಇಲ್ಲವೆಂದ ಶಾಸಕ!
ನಿವೇಶನ ಖರೀದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜಾರಿ ನಿರ್ದೇಶನಾಲಯದ(Enforcement Directorate) ಅಧಿಕಾರಿಗಳು ಶಾಸಕ ಜಮೀರ್ ಅಹಮದ್(Zameer Ahmed Khan) ಅವರ ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಹಾಜರಾದ ಬಳಿಕ ಜಮೀರ್ ಮಾತನಾಡಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಯಾರೂ ದೂರು ಸಲ್ಲಿಸಿಲ್ಲ: ಬಿಸಿಸಿಐ ಸ್ಪಷ್ಟನೆ
ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿಯ (Virat Kohli) ನಾಯಕತ್ವದ ಕುರಿತಂತೆ ಹಲವು ಹಿರಿಯ ಕ್ರಿಕೆಟಿಗರು ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ ಎನ್ನುವ ಸುದ್ದಿಯು ಭಾರತೀಯ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಬಿಸಿಸಿಐ ತೆರೆ ಎಳೆದಿದೆ.
ಬೆಂಗಳೂರಿನ ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಹೆಸರು ?
ಬೆಂಗಳೂರಿನಲ್ಲಿ (Bengaluru) ಮೆಟ್ರೋ (Metro) ಸ್ಟೇಷನ್ ಗೆ ಶಂಕರ್ ನಾಗ್ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡುವುದಾಗಿ ಸಚಿವ ಬೈರತಿ ಬಸವರಾಜ್ (Byrathi Basavaraj) ಹೇಳಿದ್ದಾರೆ.
ಜನವರಿಯಲ್ಲಿ KGF ಚೆಲುವೆಯ ಮದುವೆ ? ಹುಡುಗ ಯಾರು ?
ನಟಿ ಮೌನಿ ರಾಯ್ ಭಾರತದ ಸಿನಿಮಾ ಮತ್ತು ಕಿರುತೆರೆ ಉದ್ಯಮದ ಅತ್ಯಂತ ಫೇಮಸ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ನಟಿ ಕಿರುತೆರೆಯಲ್ಲಿ ಮಿಂಚಿದ ಮೇಲೆ ಬೆಳ್ಳಿ ಪರದೆಗಳಲ್ಲೂ ಮಿಂಚಿದ್ದಾರೆ. ನಂತರ ಸಾಲು ಸಾಲು ಸಿನಿಮಾಗಳನ್ನು ಮಾಡಿ ಉದ್ಯಮದಲ್ಲಿ ಗಟ್ಟಿಯಾದರು
ವಾಟ್ಸಾಪ್ ಚಾಟ್‌ನಲ್ಲಿ ಈಗ ₹ ಸಿಂಬಲ್: ಹಣ ಕಳಿಸೋದು ಸುಲಭ
ಮೊಬೈಲ್ ಎಪ್ಲಿಕೇಷನ್‌ಗಳು ಅಪ್ಡೇಟ್ ಆಗುತ್ತಲೇ ಇರುತ್ತವೆ. ಪ್ರತಿಬಾರಿ ಚಿಕ್ಕಪುಟ್ಟ ಬದಲಾವಣೆಗಳೂ ಆಗುತ್ತವೆ. ಈ ಬಾರಿ ವಾಟ್ಸಾಪ್‌ನಲ್ಲಿ ಹೊಸ ಬದಲಾವಣೆಯೊಂದು ಆಗಿದೆ. ಭಾರತದ ರುಪೀ ಸಿಂಬಲ್ ಚಾಟ್‌ನಲ್ಲಿ ಸೇರಿಕೊಂಡಿದೆ.
ಡೀಸೆಲ್ , ಪೆಟ್ರೋಲ್ ಬೆಲೆ ಹೆಚ್ಚಳ : ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಕಚ್ಚಾತೈಲದ ಬೆಲೆ ಏರಿಕೆ ಪರಿಣಾಮ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗುರುವಾರ ಡೀಸೆಲ್ (Diesel) ಬೆಲೆಯನ್ನು ಲೀ.ಗೆ 31 ಪೈಸೆ ಮತ್ತು ಪೆಟ್ರೋಲ್ (Petrol) ಬೆಲೆಯನ್ನು ಲೀಗೆ 26 ಪೈಸೆಯಷ್ಟುಹೆಚ್ಚಳ ಮಾಡಿವೆ.
ಅದಾನಿ ಕುಟುಂಬಕ್ಕೆ ನಿತ್ಯದ ಆದಾಯ 1000 ಕೋಟಿ!
ಕೊರೋನಾ (covid) ಬಿಕ್ಕಟ್ಟನಿಂದಾಗಿ ದೇಶದ ಅರ್ಥವ್ಯವಸ್ಥೆ ಕುಸಿದು ಬಿದ್ದು, ಜನರು ಪಡಬಾರದ ಕಷ್ಟಪಡುತ್ತಿರುವಾಗ, ಅತ್ತ ಭಾರತದಲ್ಲಿ ಶ್ರೀಮಂತರ ಸಂಖ್ಯೆಯಲ್ಲೂ ಭಾರಿ ಏರಿಕೆ ದಾಖಲಾಗಿದೆ.
ಡಿಎಲ್, ಪರ್ಮಿಟ್ ಸೇರಿ ವಾಹನ ದಾಖಲೆ ಅವಧಿ ಅ.31ವರೆಗೆ ವಿಸ್ತರಣೆ
ಕೋವಿಡ್ (Covid) ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಚಾಲನಾ ಪರವಾನಿಗೆ (DL), ನೋಂದಣಿ ಪ್ರಮಾಣ ಪತ್ರ (Registration Certificate) ಹಾಗೂ ಪರ್ಮಿಟ್ ಸೇರಿದಂತೆ ವಾಹನಗಳ ದಾಖಲೆಗಳ ಮಾನ್ಯತಾ ಅವಧಿಯನ್ನು ಕೇಂದ್ರ ಸರ್ಕಾರ 2021, ಅ.31ರವರೆಗೆ ವಿಸ್ತರಿಸಿದೆ.