ಮುಡಾ ಪ್ರಕರಣ: ವಕೀಲರಿಗೆ ಲಕ್ಷ ಲಕ್ಷ ಫೀಸ್ ಕೊಡಲು ಸ್ನೇಹಮಯಿ ಕೃಷ್ಣಗೆ ಹಣ ಎಲ್ಲಿಂದ ಬರುತ್ತೆ?: ಎಂ ಲಕ್ಷ್ಮಣ್ ಪ್ರಶ್ನೆ

ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಆಮಿಷ ಒಡ್ಡಿದ್ದಾರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಸ್ನೇಹಮಯಿ ಕೃಷ್ಣ ಅವರೊಂದಿಗೆ ಹರ್ಷ ಮತ್ತು ಶ್ರೀನಿಧಿ ಕಾರಿನಲ್ಲಿ ಹೋಗಿದ್ದ ಉದ್ದೇಶವೇನೆಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪ್ರಶ್ನಿಸಿದ್ದಾರೆ. ಸ್ನೇಹಮಯಿ ಕೃಷ್ಣಗೆ ಹಣದ ಮೂಲ ಯಾವುದೆಂದು ತನಿಖೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

Muda case kpcc spoke person m lakshman press conference at mysuru rav

ಮೈಸೂರು (ಡಿ.19): ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಆಮಿಷ ಒಡ್ಡುವಂಥ ಮಟ್ಟಕ್ಕೆ ಇಳಿಯುವವರಲ್ಲ. ಆಮಿಷಕ್ಕೆ ಒಳಗಾಗದಿದ್ದರೆ ಸ್ನೇಹಮಯಿ ಕೃಷ್ಣ ಪುತ್ರ ಹರ್ಷ ಮತ್ತು ಶ್ರೀನಿಧಿಯೊಂದಿಗೆ ಕಾರಿನಲ್ಲಿ ಹೋಗಿದ್ದು ಏಕೆ? ಎಲ್ಲಿಗೆ ಹೋಗಿದ್ದರು ಎಂದುಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪ್ರಶ್ನಿಸಿದ್ದಾರೆ.

ಲೋಕಾಯುಕ್ತಕ್ಕೆ ನೀಡಲಾದ ಮುಡಾ ಕೇಸ್ ನಿಂದ ಹಿಂದೆ ಸರಿಯುವಂತೆ ದೂರುದಾರ ಸ್ನೇಹಮಯಿ ಕೃಷ್ಣಗೆ ಆಪ್ತರಿಂದ ಆಮಿಷ ಒಡ್ಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನೆಲೆ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಅವರು, ಸ್ನೇಹಮಯಿ ಕೃಷ್ಣ ಕೊಟ್ಟಿರುವುದು ಬೆಳಗ್ಗೆ 10:30ರ ಫುಟೇಜ್ ಮಾತ್ರ. ಅಂದಿನ ಇಡೀ ದಿನದ ಫುಟೇಜ್ ಯಾಕೆ ಕೊಟ್ಟಿಲ್ಲ? ನಮ್ಮ ಬಳಿಯೂ ಕೆಲವು ಫುಟೇಜ್‌ಗಳಿವೆ. ಅವನ್ನು ನಾವು ಪೊಲೀಸರಿಗೆ ನೀಡುತ್ತೇವೆ. ಸ್ನೇಹಮಯಿ ಕೃಷ್ಣ ಬಿವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿಲ್ವ? ವಿಜಯೇಂದ್ರ ಜೊತೆ ಸ್ನೇಹಮಯಿ ಕೃಷ್ಣ ಡೀಲ್ ಕುದುರಿಸಿಲ್ವ? ಬೆಂಗಳೂರಿನಲ್ಲಿ ಐಷಾರಾಮಿ ಹೋಟೆಲ್ ನಲ್ಲಿ ಸ್ನೇಹಮಹಿ ಕೃಷ್ಣ ಗಾಗಿ ಒಂದು ರೂಂ ಮೀಸಲು ಇದೆ. ಈ ಕೇಸ್ ಗೆ ಎಷ್ಟು ಡೀಲ್ ಆಗಿದೆ ಎಂಬುದು ನಮಗೆ ಗೊತ್ತು. ಸ್ನೇಹಮಹಿ ಕೃಷ್ಣ ಇದುವರೆಗೆ ಎಷ್ಟೋ ಜನಕ್ಕೆ ಬ್ಲ್ಯಾಕ್ ಮೇಲ್ ಮಾಡಿಲ್ವಾ? ಮುಡಾ ಹಗರಣ ಸಿನ್ಮಾದ ನಿರ್ದೇಶಕರು, ನಿರ್ಮಾಪಕರು ಎಲ್ಲಾ ಬಿಜೆಪಿ, ಜೆಡಿಎಸ್ ನವರು ಎಂದು ಆರೋಪಿಸಿದರು.

ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಮುಖಂಡನಿಂದಲೇ ಸ್ನೇಹಮಯಿ ಕೃಷ್ಣಗೆ ಆಮಿಷ?!

ಸ್ನೇಹಮಯಿ ಕೃಷ್ಣಗೆ ಹಣ ಎಲ್ಲಿಂದ ಬರುತ್ತೆ?

ನ್ಯಾಯಾಲಯದಲ್ಲಿ ವಾದ ಮಾಡುವ ವಕೀಲರಿಗೆ ಲಕ್ಷಾಂತರ ರೂಪಾಯಿ ಫೀಸ್ ಕೊಡಬೇಕು. ಸ್ನೇಹಮಯಿ ಕೃಷ್ಣ ಪರ ವಾದ ಮಾಡಲು ಮೂವರು ವಕೀಲರನ್ನು ನೇಮಕ ಮಾಡಲಾಗಿದೆ. ಹಾಗಾದರೆ ಮೂವರು ವಕೀಲರಿಗೆ ಕೊಡಲು ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ? ಈ ಬಗ್ಗೆ ತನಿಖೆ ನಡೆಸಬೇಕು. ಸ್ನೇಹಮಯಿ ಕೃಷ್ಣಗೆ ಲಭ್ಯವಾಗುತ್ತಿರುವ ಹಣದ ಮೂಲದ ಬಗ್ಗೆ ತಿಳಿಸಬೇಕು. ಮುಡಾ ಪ್ರಕರಣದಲ್ಲಿ ಬಿಜೆಪಿ-ಜೆಡಿಎಸ್‌ ನಾಯಕರುಗಳು ಪ್ರೊಡ್ಯೂಸರ್‌ಗಳಾಗಿದ್ದಾರೆ. ಸ್ನೇಹಮಯಿ ಕೃಷ್ಣ ಡೈರೆಕ್ಟರ್ ಆಗಿದ್ದಾರೆ. ಮುಂದೆ ನಾವು ಎಲ್ಲವನ್ನೂ ಸಾಕ್ಷ್ಯಸಮೇತ ಬಹಿರಂಗಪಡಿಸುತ್ತೇವೆ ಎಂದರು.

'ನನ್ನ ಜೀವ ಹೋದ್ರೂ ಮುಡಾ ಹಗರಣ ತಾರ್ಕಿಕ ಅಂತ್ಯಕ್ಕೆ ತರುತ್ತೇನೆ'; ಸರ್ಕಾರದ ವಿರುದ್ಧ ತೊಡೆ ತಟ್ಟಿದ ಸ್ನೇಹಮಯಿ ಕೃಷ್ಣ!

ಮುಡಾವನ್ನು ಬಿಡಿಎ ಮಾದರಿಯಲ್ಲಿ ಮಾಡಲು ವಿಧೇಯಕ ಮಂಡನೆ ಸ್ವಾಗತಾರ್ಹವಾಗಿದೆ. ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಬಿಲ್ ಪಾಸ್ ಆಗಿದೆ. ಇದನ್ನು ಕಾಂಗ್ರೆಸ್ ಪಾರ್ಟಿ ಸ್ವಾಗತ ಮಾಡುತ್ತದೆ. ಮುಡಾಗೆ ಹೊಸ ರೂಪ ನೀಡುವ ಅಗತ್ಯವಿದೆ ಎಂದರು.
 

Latest Videos
Follow Us:
Download App:
  • android
  • ios