ಶಕ್ತಿಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ: ರಾಜ್ಯ ಸರ್ಕಾರವನ್ನ ತಾಲಿಬಾನ್‌ಗೆ ಹೋಲಿಸಿದ ಸಂಸದ ಪ್ರತಾಪ್ ಸಿಂಹ!

ನಾನು ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆ, ಕಾಂಗ್ರೆಸ್‌ಗೆ ವೋಟು ಹಾಕಿದ್ರೆ ತಾಲಿಬಾನ್ ಸರ್ಕಾರ ಬರುತ್ತದೆ. ಅದು ಕನ್ನಡಿಗರ ಸರ್ಕಾರ ಆಗಿರೊಲ್ಲ, ಬದಲಾಗಿ ತಾಲಿಬಾನ್ ಸರ್ಕಾರ ಆಗಿರುತ್ತೆ ಅಂತಾ ಹೇಳಿದ್ದೆ. ಇದೀಗ ನನ್ನ ಮಾತು ನಿಜವಾಗಿದೆ. ಮೊನ್ನೆ ವಿಧಾನಸೌಧದಲ್ಲಿ ಘೊಷಣೆ ಕೂಗಿರುವುದು ಕೇವಲ ಟ್ರಯಲರ್ ಅಷ್ಟೇ ಎಂದು ಮೈಸೂರು ಕೊಡುಗು ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದರು.

MP Pratap Sinha compared the Congress government to the Taliban government at kodagu rav

ಕೊಡಗು (ಫೆ.29): ರಾಜ್ಯಸಭಾ ಚುನಾವಣೆ ಫಲಿತಾಂಶದ ವೇಳೆ ಗೆಲುವು ಪಡೆದ ನಾಸೀರ್ ಹುಸೇನ್ ಅವರ ಬೆಂಬಲಿಗರು ಕೂಗಿದ್ದಾರೆನ್ನಲಾದ 'ಪಾಕಿಸ್ತಾನ್ ಜಿಂದಾಬಾದ್'ಘೋಷಣೆಯು ಇದೀಗ ದೇಶದ್ಯಾಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಪಾಕಿಸ್ತಾನ ಪರ ಘೋಷಣೆ ಕೂಗ್ತಾರೆ, ನಾಳೆ ವಿಧಾನಸೌಧದ ಮೇಲೆ ಕಟುವಾಗಿ ಟೀಕಿಸಿದ್ದಾರೆ.

ವಿರಾಜಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಳಿಕ ಪಾಕಿಸ್ತಾನ ಪರ ಘೋಷಣೆ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ನಾನು ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆ, ಕಾಂಗ್ರೆಸ್‌ಗೆ ವೋಟು ಹಾಕಿದ್ರೆ ತಾಲಿಬಾನ್ ಸರ್ಕಾರ ಬರುತ್ತದೆ. ಅದು ಕನ್ನಡಿಗರ ಸರ್ಕಾರ ಆಗಿರೊಲ್ಲ, ಬದಲಾಗಿ ತಾಲಿಬಾನ್ ಸರ್ಕಾರ ಆಗಿರುತ್ತೆ ಅಂತಾ ಹೇಳಿದ್ದೆ. ಇದೀಗ ನನ್ನ ಮಾತು ನಿಜವಾಗಿದೆ. ಮೊನ್ನೆ ವಿಧಾನಸೌಧದಲ್ಲಿ ಘೊಷಣೆ ಕೂಗಿರುವುದು ಕೇವಲ ಟ್ರಯಲರ್ ಅಷ್ಟೇ, ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲಿರುವ ಗೋಪುರ ಗುಂಬಜ್ ಆಗುತ್ತದೆ, ಅದರ ಮೇಲೆ ಒಂದು ಲೌಡ್ ಸ್ಪೀಕರ್ ಬಂದು ಆಜಾನ್ ಕೇಳುತ್ತದೆ. ಕಾಂಗ್ರೆಸ್ ಸರ್ಕಾರ ಮುಂದುವರಿಯಲು ಬಿಟ್ಟರೆ ತಾಲಿಬಾನ್ ಸರ್ಕಾರ ಮಾಡುವ ಎಲ್ಲಾ ಅನಾಚಾರಗಳನ್ನು ಮಾಡುತ್ತದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಮೈಸೂರು- ಕೊಡಗು ಲೋಕಸಭಾ ಬಿಜೆಪಿ ಟಿಕೆಟ್ ಈ ಬಾರಿಯೂ ನನಗೆ ಸಿಗಲಿದೆ: ಪ್ರತಾಪ್ ಸಿಂಹ

ಬಿಜೆಪಿ ಸೋತಿರುವುದಕ್ಕೆ ಸುಳ್ಳು ಹೇಳುತ್ತಿದೆಯಾ?

ರಾಜ್ಯಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷ ಸೋತಿರುವುದಕ್ಕೆ ಬಿಜೆಪಿ ಹೀಗೊಂದು ವಿವಾದ ಸೃಷ್ಟಿಸಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಆರೋಪಿಸಿದ್ದಾರೆ. ಇದು ಶುದ್ಧ ಸುಳ್ಳು. ದೇಶದಲ್ಲೇ ರಾಜ್ಯಸಭೆಯಲ್ಲಿ ಬಿಜೆಪಿ ಮೆಜಾರಿಟಿ ಪಡೆದಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಮಾಧ್ಯಮಗಳು ಪ್ರಪಂಚಕ್ಕೆ ತೋರಿಸಿವೆ. ಕೂಗಿರುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿರುಗೇಟು ನೀಡಿದರು.

ಕೊಟ್ಟ ಮಾತು ಉಳಿಸಿಕೊಂಡ ಸಂಸದ ಪ್ರತಾಪ್ ಸಿಂಹ; ಬಂತು ಮೈಸೂರು-ರಾಮೇಶ್ವರಂ ಟ್ರೈನ್!

Latest Videos
Follow Us:
Download App:
  • android
  • ios