ಆನೆ ಕೊಂದು ದಂತ ಮಾರುತ್ತಿದ್ದವರ ರಕ್ಷಣೆಗೆ ನಿಂತ ಪ್ರಜ್ವಲ್ ರೇವಣ್ಣ? ಸೂಕ್ತ ತನಿಖೆಗೆ ಒತ್ತಾಯಿಸಿದ ಮೇನಕಾ ಗಾಂಧಿ!
ದಂತ ಮಾರಾಟದ ಸಂಬಂಧ ಮೇನಕಾ ಗಾಂಧಿ ಹಾಸನ ಸಂಸದ ಪ್ರಜ್ಚಲ್ ರೇವಣ್ಣ ವಿರುದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್ ರೇವಣ್ಣ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾಸನ(ಜು.19): ಅರಣ್ಯ ಇಲಾಖೆಗೆ ಸಂಬಂಧಿಸಿದ ಗಂಭೀರ ಪ್ರಕರಣ, ಕೋಟ್ಯಾಂತರ ರೂಪಾಯಿ ದಂತ ಮಾರಾಟದ ಸಂಬಂಧ ಮೇನಕಾ ಗಾಂಧಿ ಹಾಸನ ಸಂಸದ ಪ್ರಜ್ಚಲ್ ರೇವಣ್ಣ ವಿರುದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್ ರೇವಣ್ಣ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಹೌದು ಕಳೆದ ಕೆಲ ತಿಂಗಳ ಹಿಂದೆ ದಂತಕ್ಕಾಗಿ ಹಾಸನ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿ ಸಲಗ ಕೊಂದಿದ್ದ ಆರೋಪಿಗಳಾದ ಚಂದ್ರೆಗೌಡ ಮತ್ತು ಇತರರು ಬಳಿಕ ಅದನ್ನು ಹೂತು ಹಾಕಿದ್ದರು. ಆದರೆ ಮಾರ್ಚ್ 19 ರಂದು ಸತ್ತ ಆನೆಯಿಂದ ದಂತ ಕತ್ತರಿಸಿದ್ದ ಆರೋಪಿಗಳು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಪ್ರಕರಣ ಸಂಬಂಧ ಹಾಸನ ಅರಣ್ಯ ಇಲಾಖೆ ಕೂಡಾ ಕೇಸ್ ದಾಖಲಿಸಿ ತನಿಖೆ ಆರಂಭಿಸಿತ್ತು. ಆದರೀಗ ಈ ಆರೋಪಿಗಳ ರಕ್ಷಣೆಗೆ ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬ ಬಂದಿದೆ.
ಹೀಗಿರುವಾಗ ಸಿಎಂಗೆ ಪತ್ರ ಬರೆದಿರುವ ಸಂಸದೆ ಮೇನಕಾ ಗಾಂಧಿ ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಬಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೇಸ್ ನಲ್ಲಿ ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್.ಎಫ್ ಓ ಪ್ರಯತ್ನ ಮಾಡಿದ್ದಾರೆ. ಪದೇ ಪದೆ ಕೇಸ್ ಅನ್ಮು ವರ್ಗಾಯಿಸಲು ಸಿ.ಕೆ ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಒತ್ತಡ ಹಾಕಿದ್ದಾರೆ ಎಂದೂ ಆರೋಪಿಸಲಾಗಿದೆ. ಈಕೇಸ್ ನ ಆರೋಪಿಗಳು ತಮ್ಮ ಪಕ್ಷದ ಬೆಂಬಲಿಗರು ಅನ್ನೋ ಕಾರಣಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆರೋಪಿಗಳ ಪರವಾಗಿ ಾವರನ್ನು ರಕ್ಷಿಸಲು ಒತ್ತಡ ಹೇರುತ್ತಿದ್ದಾರೆಂದು ದೂರಲಾಗಿದೆ.
ಹೀಗಾಗಿ ಈ ಕೇಸ್ ನಲ್ಲಿ ಸಿಎಂ ಮಧ್ಯ ಪ್ರವೇಶ ಮಾಡಿ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಲು ಮೇನಕಾ ಗಾಂಧಿ ಪತ್ರ ಮುಖೇನ ಒತ್ತಾಯಿಸಿದ್ದಾರೆ. ಜುಲೈ 18 ರಂದು ಮೇನಕಾ ಗಾಂಧಿ ಈ ಪತ್ರ ಬರೆದಿದ್ದಾರೆ ಎಂಬುವುದು ಉಲ್ಲೇಖನೀಯ.
ಪ್ರಜ್ವಲ್ ರೇವಣ್ಣ ಹೇಳಿಕೆ
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಿನ್ನೆ ರಾತ್ರಿ ನನಗೆ ಒಂದು ಫೋನ್ ಕರೆ ಬಂತು. ಆನೆ ಕೊಂದ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್ ರೇವಣ್ಣ ನಿಂತಿದ್ದಾರೆ ಎಂದು ಮಾಜಿ ಸಚಿವೆ ಮೇನಕಾ ಗಾಂಧಿಯವರು ಆರೋಪಿಸಿದ್ದಾರೆ. ಮೇನಕಾ ಗಾಂಧಿವರಿಗೆ ಈ ಬಗ್ಗೆ ಪೂರ್ಣ ಮಾಹಿತಿಯೇ ಇಲ್ಲ. ನನಗೆ ಈ ಬಗ್ಗೆ ಗೊತ್ತಾಗಿದ್ದೆ ಮೊನ್ನೆ ನಡೆದ ದಿಶಾ ಸಭೆಯಲ್ಲಿ, ಈ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ಆರೋಪಿಗಳು ಬೇಲ್ ತೆಗೆದುಕೊಂಡು ಬಂದಿದ್ದಾರೆ ಎಂದು ಮೇನಕಾ ಗಾಂಧಿ ಆರೋಪಿಸಿದ್ದಾರೆ. ಬೇಲ್ ಕೊಡುವ ವಿಚಾರ ಕೋಟ್೯ಗೆ ಬಿಟ್ಟಿದ್ದು, ಬೇಲ್ ಪ್ರಜ್ವಲ್ ರೇವಣ್ಣ ಕೊಡ್ತಾನಾ? ಎಂದಿದ್ದಾರೆ.