Asianet Suvarna News Asianet Suvarna News

ಇಂದಿ​ನಿಂದ ಕುಂಸಿ, ಅರಸಾಳು ನಿಲ್ದಾಣಗಳಲ್ಲಿ 2 ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ: ಬಿ.ವೈ. ರಾಘವೇಂದ್ರ

ಹುಬ್ಬಳ್ಳಿಯಲ್ಲಿ ಮೇ ತಿಂಗಳಲ್ಲಿ ನಡೆದ ಸಭೆ ವೇಳೆ ಕುಂಸಿ, ಅರಸಾಳು ಮತ್ತು ಹಾರನಹಳ್ಳಿಯಲ್ಲಿ ರೈಲು ನಿಲುಗಡೆಗೆ ಒತ್ತಾಯಿಸಲಾಗಿತ್ತು. ಈ ಸಂಬಂಧ ನೈಋುತ್ಯ ರೈಲ್ವೆ ವಲಯದಿಂದ ರೈಲ್ವೆ ಬೋರ್ಡ್‌ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅದರಂತೆ 4 ರೈಲುಗಳು ಕುಂಸಿ ಮತ್ತು ಅರಸಾಳುವಿನಲ್ಲಿ ನಿಲುಗಡೆಗೆ ಒಪ್ಪಿಗೆ ಸಿಕ್ಕಿದೆ. ಕುಂಸಿ ನಿಲ್ದಾಣದಿಂದ ಹಾರನಹಳ್ಳಿ ನಿಲ್ದಾಣ ಐದಾರು ಕಿ.ಮೀ. ಅಂತರದಲ್ಲಿದೆ. ಆದ್ದರಿಂದ ಹಾರನಹಳ್ಳಿಯಲ್ಲಿ ರೈಲು ನಿಲುಗಡೆಗೆ ತಾಂತ್ರಿಕವಾಗಿ ಕಷ್ಟ ಎಂದು ರೈಲ್ವೆ ಮ್ಯಾನೇಜರ್‌ ತಿಳಿಸಿದ್ದಾರೆ. 

2 Express Trains Stop at Kunsi and Arasalu Stations in Shivamogga Says BY Raghavendra grg
Author
First Published Aug 24, 2023, 4:26 AM IST

ಶಿವಮೊಗ್ಗ(ಆ.24):  ಕುಂಸಿ ಮತ್ತು ಅರಸಾಳು ನಿಲ್ದಾಣಗಳಲ್ಲಿ ಎರಡು ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ಒತ್ತಾಯದ ಮೇರೆಗೆ ನೈಋುತ್ಯ ರೈಲ್ವೆ ಒಪ್ಪಿಗೆ ನೀಡಿದೆ. ಆ.24ರಿಂದ ರೈಲುಗಳು ಈ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿ​ಸಿ​ದ್ದಾರೆ.

ರೈಲು ಸಂಖ್ಯೆ 16205: 

ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್‌ ರೈಲು- ಅರಸಾಳು ನಿಲ್ದಾಣದಲ್ಲಿ ಸಂಜೆ ಸಂಜೆ 4 ರಿಂದ 4.01 ನಿಮಿಷದವರೆಗೆ ಮತ್ತು ಕುಂಸಿ ರೈಲು ನಿಲ್ದಾಣದಲ್ಲಿ ಸಂಜೆ 4.15 ರಿಂದ 4.16 ರವರೆಗೆ ನಿಲುಗಡೆ ಮಾಡಲಾಗುವುದು. ರೈಲು ಸಂಖ್ಯೆ 16206: ಮೈಸೂರು - ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು - ಕುಂಸಿ ನಿಲ್ದಾಣದಲ್ಲಿ ಬೆಳಗ್ಗೆ 11.25 ರಿಂದ 11.26 ರವರೆಗೆ ಮತ್ತು ಅರಸಾಳು ರೈಲು ನಿಲ್ದಾಣದಲ್ಲಿ 11.40 ರಿಂದ 11.41 ರವರೆಗೆ ನಿಲುಗಡೆ ಮಾಡಲಾಗುವುದು.
ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ರಾತ್ರಿ 10.03 ರಿಂದ 10.04 ರವರೆಗೆ ನಿಲುಗಡೆ ಮಾಡಲಾಗುವುದು. ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 5.43 ರಿಂದ 5.44 ರವರೆಗೆ ನಿಲುಗಡೆ ಮಾಡಲಾಗುವುದು.

ಬಿಎಸ್‌ವೈ ಪುತ್ರನ ಮಣಿಸಲು ಮತ್ತೊಬ್ಬ ಮಾಜಿ ಸಿಎಂ ಮಗನ ಅಖಾಡಕ್ಕಿಳಿಸುತ್ತಾ 'ಕೈ' ?

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಹಾರನಹಳ್ಳಿ, ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಮಾಡುವಂತೆ ಸಂಸದ ಬಿ.ವೈ.ರಾಘವೇಂದ್ರ ವಿನಂತಿ ಮಾಡಿದ್ದರ ಮೇರೆಗೆ ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ ಹಿನ್ನೆಲೆ ಈ ನಿಲುಗಡೆ ಗುರುವಾರದಿಂದ ಆರಂಭವಾಗಲಿದೆ ಎಂದು ಸಂಸದರ ಕಚೇರಿಯ ಪ್ರಕಟಣೆ ತಿಳಿಸಿದೆ.

ಹಾರನಹಳ್ಳಿಯಲ್ಲಿ ಸದ್ಯಕ್ಕಿಲ್ಲ:

ಹುಬ್ಬಳ್ಳಿಯಲ್ಲಿ ಮೇ ತಿಂಗಳಲ್ಲಿ ನಡೆದ ಸಭೆ ವೇಳೆ ಕುಂಸಿ, ಅರಸಾಳು ಮತ್ತು ಹಾರನಹಳ್ಳಿಯಲ್ಲಿ ರೈಲು ನಿಲುಗಡೆಗೆ ಒತ್ತಾಯಿಸಲಾಗಿತ್ತು. ಈ ಸಂಬಂಧ ನೈಋುತ್ಯ ರೈಲ್ವೆ ವಲಯದಿಂದ ರೈಲ್ವೆ ಬೋರ್ಡ್‌ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅದರಂತೆ 4 ರೈಲುಗಳು ಕುಂಸಿ ಮತ್ತು ಅರಸಾಳುವಿನಲ್ಲಿ ನಿಲುಗಡೆಗೆ ಒಪ್ಪಿಗೆ ಸಿಕ್ಕಿದೆ. ಕುಂಸಿ ನಿಲ್ದಾಣದಿಂದ ಹಾರನಹಳ್ಳಿ ನಿಲ್ದಾಣ ಐದಾರು ಕಿ.ಮೀ. ಅಂತರದಲ್ಲಿದೆ. ಆದ್ದರಿಂದ ಹಾರನಹಳ್ಳಿಯಲ್ಲಿ ರೈಲು ನಿಲುಗಡೆಗೆ ತಾಂತ್ರಿಕವಾಗಿ ಕಷ್ಟ ಎಂದು ರೈಲ್ವೆ ಮ್ಯಾನೇಜರ್‌ ತಿಳಿಸಿದ್ದಾರೆ. ಆದರೂ ಮುಂದೆ ಹಾರನಹಳ್ಳಿಯಲ್ಲಿ ರೈಲು ನಿಲುಗಡೆಗೆ ಒತ್ತಾಯ ಮಾಡಲಾಗುತ್ತದೆ ಎಂದು ಸಂಸದರು ಪ್ರಕಟಣೆ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios