Asianet Suvarna News Asianet Suvarna News

ನಮ್ಮಮ್ಮ ತನ್ನ ಎದೆಹಾಲು ಕುಡಿಸಿ ಬೆಳಸಿದ್ದು, ಯಾವುದೋ ಬೇವರ್ಸಿ ಹಾಲಲ್ಲ: ಅನಂತ ಕುಮಾರ್ ಹೆಗಡೆ

ಸಂಸದ ಅನಂತ ಕುಮಾರ್ ಹೆಗಡೆ  ಇಂದಿರಾ ಗಾಂಧಿ  ಕುಟುಂಬಕ್ಕೆ ಸ್ವಾಮೀಜಿಯೊಬ್ಬರ ಶಾಪವಿರುವುದಾಗಿ ಹೇಳಿದ್ದು, ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ.

mp ananth kumar hegde controversial statement against gandhi family gow
Author
First Published Jan 16, 2024, 9:23 PM IST

ಕಾರವಾರ (ಜ.16):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾಷಣದ ಭರಾಟೆಯಲ್ಲಿ ಏಕವಚನದಲ್ಲೇ ನಿಂದಿಸಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಈ ಘಟನೆ ಬೆನ್ನಲ್ಲೇ ಮತ್ತೊಂದು ಹೇಳಿಕೆ ನೀಡಿರುವ ಅವರು ತಮ್ಮ ಭಾಷಣದಲ್ಲಿ‌  ಇಂದಿರಾ ಗಾಂಧಿ  ಕುಟುಂಬಕ್ಕೆ ಶಾಪವಿರುವುದಾಗಿ ಸಂಸದ ಅನಂತ ಕುಮಾರ್ ಹೆಗಡೆ  ಹೇಳಿದ್ದು, ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ಧಾರೆ.

ದಾಂಡೇಲಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತ ಕುಮಾರ್ ಹೆಗಡೆ , ಸಂಜಯ್ ಗಾಂಧಿ, ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿ ಸತ್ತದ್ದು ಗೋಪಾಷ್ಠಮಿ ದಿನ. ಸಂತರು, ಗೋವುಗಳ‌ ಮಾರಣ ಹೋಮ ನಡೆಸಿದ್ದಕ್ಕೆ ಕರಪಾತ್ರ ಮಹಾರಾಜ ಸ್ವಾಮೀಜಿಯಿಂದ ದೊರೆತ ಶಾಪ ಎಂದು ಹೇಳಿದ್ದಾರೆ.

ರಾತ್ರೋ ರಾತ್ರಿ ಸ್ಟಾರ್ ಆದ ಈ ನಟಿಯ ಒಂದು ತಪ್ಪು ನಿರ್ಧಾರ ವೃತ್ತಿಜೀವನವನ್ನೇ ಹಾಳುಮಾಡಿತು!

ಮುಖ್ಯಮಂತ್ರಿ ವಿರುದ್ಧವೂ ಕಿಡಿ ಕಾರಿದ ಸಂಸದ, ಮೊದಲು ಸಂಸ್ಕತಿ, ಸಭ್ಯತೆಯನ್ನು ಸಿಎಂ ಸಿದ್ಧರಾಮಯ್ಯನವರು ಕಲಿಯಲಿ. ಪತ್ರಕರ್ತರು, ಶಾಸಕರಿಗೆ ಅವರು ಯಾವ ರೀತಿ ಏಕವಚನದಲ್ಲಿ ಮಾತಾಡ್ತಾರೆ. ನಮಗೆ ಬರೋದಿಲ್ವಾ,..? ನಮಗೆ ತಾಕತ್ತಿಲ್ವಾ....? ನಾವು ನಮ್ಮ ತಾಯಿ ಎದೆ ಹಾಲು ಕುಡಿದು ಬೆಳೆದವರು, ಯಾವುದೋ ಬೇವರ್ಸಿ ಹಾಲಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸೋ ಜಾಯಮಾನದವರಲ್ಲ. ಒಂದು ಕೆನ್ನೆಗೆ ಹೊಡೆದರೆ ಹೊಡೆದವನ ತಲೆಯನ್ನೇ ಕಿತ್ತು ಬಿಸಾಕ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿ ಬ್ರೇಕಪ್‌ ಬಳಿಕ ಗೆಳತಿಯ ಗಂಡನನ್ನೇ ಮದುವೆಯಾದ ನಟಿ!

ನಮ್ಮದು ವೀರ ಸಂತಾನ ಹೇಡಿಗಳ ಸಂತಾನ ಅಲ್ಲ. ನಮ್ಮಮ್ಮ ತನ್ನ ಎದೆಹಾಲು ಕುಡಿಸಿ ಬೆಳಸಿದ್ದು , ಬೇವರ್ಸಿ ಹಾಲನ್ನಲ್ಲ. ತಾಯಿ ಹಾಲು ಕುಡಿದಿದ್ದಕ್ಕೆ ಗಂಡು ಭಾಷೆ ಜನ್ಮದಿಂದ ಬಂದಿದೆ. ಏಕವಚನದಲ್ಲಿ ನೀವು ಮಾತನಾಡಿದ್ರೆ ನಾವು ಏಕವಚನದಲ್ಲಿ ಮಾತನಾಡುತ್ತೀವಿ. ಟಿವಿಯಲ್ಲಿ ಚರ್ಚೆ ನಡಿಯುತ್ತಿದೆ. ನಡೀಲಿ. ಈಶ್ವರನಿಗೆ ರುದ್ರಾಭಿಷೇಕ ನಡೆಯುತ್ತಿದೆ ನಡೆಯಲಿ. ಸ್ವಾಭಿಮಾನಕ್ಕೆ ಧಕ್ಕೆ ಬಂದರೇ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಜೀವ ಇರೋ ತನಕ ತಲೆ ತಗ್ಗಿಸಲು ಸಾಧ್ಯ ಇಲ್ಲ. ನಾನೇನಾದ್ರು ತಲೆ ತಗ್ಗಿಸಿದ್ರೆ ನೀವು ಹಾಕಿದ ಓಟಿಗೆ ಅಪಮಾನ. ಯಾರು ಕುಣಿತಾರೋ ಕುಣಿದುಕೊಂಡು ಹೋಗಲಿ ನಾವು ತಾಂಡವ ನೃತ್ಯ ನಮ್ಮವರಿಗೂ ಬರುತ್ತೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios