Asianet Suvarna News Asianet Suvarna News

640 ಗ್ರಾಂ. ಮಗು ಜನನ: ರಾಜ್ಯದಲ್ಲಿ ಇದೇ ಮೊದಲು

ಆರೂವರೆ ತಿಂಗಳಿಗೇ ಸಿಜೇರಿಯನ್‌ ಮೂಲಕ ಮಗು ಜನನ| 46 ದಿನದ ನಂತರವೂ ಆರೋಗ್ಯವಾಗಿರುವ ಮಗು

mother gave birth to a 640 gram weighed baby
Author
Bangalore, First Published Dec 18, 2018, 12:58 PM IST

ಬೆಂಗಳೂರು[ಡಿ.18]: ರಾಜ್ಯದ ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆರೂವರೆ ತಿಂಗಳ: ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕೇವಲ 640 ಗ್ರಾಂ. ತೂಕವಿದ್ದ ಶಿಶುವನ್ನು ಸುರಕ್ಷಿತವಾಗಿ ಹೆರಿಗೆ ಮಾಡಿ​ಸು​ವಲ್ಲಿ ನಗ​ರದ ಖಾಸಗಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.

ಹೂವಿನ ವ್ಯಾಪಾರಿ ಪತ್ನಿಗೆ 5 ಕೆಜಿ ತೂಕದ ಮಗು ಜನನ

ಹೊಸಕೆರೆಹಳ್ಳಿಯಲ್ಲಿರುವ ಎ.ವಿ. ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯರು ಈ ಸಾಧನೆ ಮಾಡಿದ್ದು, ಸಿಜೇರಿಯನ್‌ ಮೂಲಕ ಹೆರಿಗೆ ಮಾಡಿ​ಸ​ಲಾದ ಈ ಮಗು​ವಿಗೆ ಈಗ 46 ದಿನ ವಯಸ್ಸು! ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಮಗು​ವಿನ ಬೆಳ​ವ​ಣಿಗೆ ಉತ್ತ​ಮ​ವಾ​ಗಿದೆ ಎಂದು ಆಸ್ಪ​ತ್ರೆಯ ಸ್ತ್ರೀರೋಗ ತಜ್ಞೆ ಡಾ. ಗೋಪಿಕಾ ರಾಜೇಶ್‌ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ನವಲಗುಂದದ ಅನಿಲ್‌ಕುಮಾರ್‌ ಪತ್ನಿ ಪೂಜಾ ಅವರು ಅ.31 ರಂದು ಆಸ್ಪತ್ರೆಗೆ ದಾಖಲಾದರು. ಮಗು​ವಿನ ದೈಹಿಕ ಬೆಳ​ವ​ಣಿಗೆ ಉತ್ತ​ಮ​ವಾ​ಗಿ​ರ​ಲಿಲ್ಲ. ಹೀಗಾಗಿ, ಭ್ರೂಣಕ್ಕೆ 26 ವಾರ (ಆರೂವರೆ ತಿಂಗಳು) ವಿದ್ದಾಗಲೇ ಸಿಜೇರಿಯನ್‌ ಮೂಲಕ ಹೊರ ತೆಗೆಯಲಾಯಿತು ಎಂದರು.

ತಡ ಮಾಡಬೇಡಿ, ದೇಶದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಲಿ: ಸರ್ಕಾರದ ಮನವಿ!

ಆರೂವರೆ ತಿಂಗಳಿಗೆ ಭ್ರೂಣ ಸಾಮಾನ್ಯವಾಗಿ 600ರಿಂದ 700 ಗ್ರಾಂ. ಇರು​ತ್ತದೆ. ಅಂತ​ರ್ಜಾ​ಲದ ಮಾಹಿತಿ ಪ್ರಕಾರ ಕೇರಳ ರಾಜ್ಯದಲ್ಲಿ 625 ಗ್ರಾಂ. ತೂಕದ ಮಗು​ವನ್ನು ಅವ​ಧಿ​ಪೂರ್ವ ಹೆರಿಗೆ ಮಾಡಿ​ಸಿದ್ದೇ ದಾಖಲೆ. ರಾಜ್ಯದ ಬಗ್ಗೆ ಇಂತಹ ಯಾವುದೇ ಮಾಹಿ​ತಿ​ಯಿಲ್ಲ. ಹೀಗಾಗಿ ಇಷ್ಟು ಕಡಿಮೆ ತೂಕದ ಮಗ ಹುಟ್ಟಿ​ರು​ವುದು ರಾಜ್ಯ​ದಲ್ಲಿ ಇದೇ ಮೊದಲು. ಇದೊಂದು ದಾಖಲೆ ಎಂದು ಹೇಳಿ​ದ​ರು.

ಈ ವೇಳೆ ಮಗುವಿನ ಪೋಷಕರಾದ ಅನಿಲ್‌ಕುಮಾರ್‌ ಮತ್ತು ಪೂಜಾ ದಂಪತಿ ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಆಸ್ಪತ್ರೆ ವೈದ್ಯ ಡಾ.ಜಗದೀಶ್‌, ಡಾ.ರಾಜೇಶ್‌ ಕುಮಾರ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios