ಹೂವಿನ ವ್ಯಾಪಾರಿ ಪತ್ನಿಗೆ 5 ಕೆಜಿ ತೂಕದ ಮಗು ಜನನ
ಮೈಸೂರಿನಲ್ಲಿ ತಾಯಿಯೊಬ್ಬಳು ಬರೋಬ್ಬರಿ 5 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ.
ಮೈಸೂರು[ಡಿ.08]: ತಾಯಿಯೊಬ್ಬಳು ಬರೋಬ್ಬರಿ 5 ಕೆ.ಜಿ ಅಪರೂಪದ ಮಗುವಿಗೆ ಜನ್ಮ ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೂವಿನ ವ್ಯಾಪಾರಿ ತಿಲಕ್ ನಗರದ ನಿವಾಸಿ ಸಿದ್ದರಾಜು ಅವರ ಪತ್ನಿರಾಜೇಶ್ವರಿ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾರಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯ ಹೆರಿಗೆಯಾಗದ ಕಾರಣ ವೈದ್ಯಾಧಿಕಾರಿಗಳು ಸೀಸರಿನ್ ಮೂಲಕ ಮಗುವನ್ನು ಹೊರತೆಗೆದಿದ್ದಾರೆ.
ಭಾರತೀಯ ನವಜಾತ ಶಿಶುಗಳ ತೂಕ ಸರಾಸರಿ 2.50 ರಿಂದ 3.50 ಕೆ.ಜಿ. ಇರುತ್ತದೆ. ಹೀಗಾಗಿ 5 ಕೆ.ಜಿ. ಮಗು ಕಂಡು ಅಚ್ಚರಿಗೊಂಡ ಪೋಷಕರು ಹಾಗೂ ವೈದ್ಯರು ಅಚ್ಚರಿಗೊಳಗಾಗಿದ್ದಾರೆ.