ಎಲೆಕ್ಷನ್‌ಗೆ ಪಕ್ಷಗಳಿಂದ ಬಹುತೇಕ ಕಾಪ್ಟರ್‌ಗಳು ಬುಕ್‌: ಗಂಟೆಗೆ ಲಕ್ಷ ಲಕ್ಷ ಬಾಡಿಗೆ..!

ನಮಗೆ ತಿಳಿದಂತೆ ಸುಮಾರು ನೂರಕ್ಕೂ ಅಧಿಕ ಹೆಲಿಕಾಪ್ಟರ್‌ ಹಾಗೂ ಸಣ್ಣ ವಿಮಾನಗಳು ಬುಕ್‌ ಆಗಿವೆ. ಹೆಚ್ಚಿನ ಅಗತ್ಯಕ್ಕೆ ಸಹಜವಾಗಿ ಇತರೆ ರಾಜ್ಯಗಳಿಂದಲೂ ಹೆಲಿಕಾಪ್ಟರ್‌ ಬರಲಿವೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧೆಡೆಯ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಲಾಗುತ್ತಿದೆ. ಗಣ್ಯರ ಸುರಕ್ಷತೆ ದೃಷ್ಟಿಯಿಂದ ಉತ್ತಮ ನಿರ್ವಹಣೆಯ ಡಬಲ್‌ ಎಂಜಿನ್‌ ಕಾಪ್ಟರ್‌ ಮತ್ತು ವಿಐಪಿ ಪೈಲಟ್‌ಗಳು ನಿಯೋಜನೆ ಆಗಲಿದ್ದಾರೆ ಎಂದು ತಿಳಿಸಿದ ಖಾಸಗಿ ಏವಿಯೇಶನ್‌ ಸಂಸ್ಥೆ 

Most of the Helicopters Booked by the Political Parties for the Lok Sabha Election 2024 in Karnataka grg

ಮಯೂರ್ ಹೆಗಡೆ

ಬೆಂಗಳೂರು(ಏ.02):  ಲೋಕಸಭಾ ಚುನಾವಣೆ ಅಖಾಡ ರೂಪುಗೊಳ್ಳುತ್ತಿರುವಂತೆ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳು ಅಗತ್ಯ ಸಿದ್ಧತೆ ನಡೆಸಿದ್ದು, ಪ್ರಮುಖ ನಾಯಕರ ಬಿರುಸಿನ ಪ್ರಚಾರ ಹಾಗೂ ಪ್ರಯಾಣಕ್ಕಾಗಿ ದಕ್ಷಿಣ ಭಾರತದ ಬಹುತೇಕ ಹೆಲಿಕಾಪ್ಟರ್‌, ಜೆಟ್‌ಗಳನ್ನು ಬುಕ್ ಮಾಡಿಕೊಳ್ಳುತ್ತಿವೆ. ಮುಂದಿನ ಒಂದೂವರೆ ಎರಡು ತಿಂಗಳಿಗಾಗಿ ಖಾಸಗಿ ಏವಿಯೇಶನ್‌ ಸಂಸ್ಥೆಗಳಿಗೆ ಭರ್ಜರಿ ಡಿಮ್ಯಾಂಡ್‌ ಬಂದಿದೆ. ಹೆಲಿಟೂರಿಸಂ, ಖಾಸಗಿ ಸೇರಿ ಇತರೆ ಉದ್ದೇಶಕ್ಕಾಗಿ ಇರುವ ಹೆಲಿಕಾಪ್ಟರ್‌, ಪ್ರೈವೇಟ್‌ ಜೆಟ್‌ಗಳು ಚುನಾವಣೆಯಲ್ಲಿ ಬಳಕೆ ಆಗಲಿವೆ. ಪ್ರಮುಖವಾಗಿ ನಗರದ ಜಕ್ಕೂರು ಏರ್‌ಡ್ರೋಮ್‌, ಎಚ್‌ಎಎಲ್‌ ಹಾಗೂ ವೈಟ್‌ಫೀಲ್ಡ್‌ನಲ್ಲಿ ಹೆಲಿಕಾಪ್ಟರ್‌ಗಳು ನಿಲುಗಡೆ ಆಗಲಿವೆ.

ಬಿಜೆಪಿಯೇ ಹೆಚ್ಚಿನ ಪ್ರಮಾಣದಲ್ಲಿ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಹೆಲಿಕಾಪ್ಟರ್‌ಗಳನ್ನು ಒದಗಿಸುವಂತೆ ಬುಕ್ಕಿಂಗ್‌ ಮಾಡಿಕೊಂಡಿದೆ ಎಂದು ಖಾಸಗಿ ವಿಮಾನಯಾನ ಸಂಸ್ಥೆಯೊಂದು ತಿಳಿಸಿದೆ. ಕೇಂದ್ರ ಹಾಗೂ ಸ್ಟಾರ್‌ ಪ್ರಚಾರಕರ ಓಡಾಟಕ್ಕಾಗಿ ಇವುಗಳನ್ನು ಕಾಯ್ದಿರಿಸಲಾಗುತ್ತಿದೆ.

ಅನುದಾನದ ಹಣ ತರಲು ಹೆಲಿಕಾಪ್ಟರ್‌ ಬೇಕು: ಸಚಿವ ಸತೀಶ್ ಜಾರಕಿಹೊಳಿ

ನಮಗೆ ತಿಳಿದಂತೆ ಸುಮಾರು ನೂರಕ್ಕೂ ಅಧಿಕ ಹೆಲಿಕಾಪ್ಟರ್‌ ಹಾಗೂ ಸಣ್ಣ ವಿಮಾನಗಳು ಬುಕ್‌ ಆಗಿವೆ. ಹೆಚ್ಚಿನ ಅಗತ್ಯಕ್ಕೆ ಸಹಜವಾಗಿ ಇತರೆ ರಾಜ್ಯಗಳಿಂದಲೂ ಹೆಲಿಕಾಪ್ಟರ್‌ ಬರಲಿವೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧೆಡೆಯ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಲಾಗುತ್ತಿದೆ. ಗಣ್ಯರ ಸುರಕ್ಷತೆ ದೃಷ್ಟಿಯಿಂದ ಉತ್ತಮ ನಿರ್ವಹಣೆಯ ಡಬಲ್‌ ಎಂಜಿನ್‌ ಕಾಪ್ಟರ್‌ ಮತ್ತು ವಿಐಪಿ ಪೈಲಟ್‌ಗಳು ನಿಯೋಜನೆ ಆಗಲಿದ್ದಾರೆ ಎಂದು ಖಾಸಗಿ ಏವಿಯೇಶನ್‌ ಸಂಸ್ಥೆಯೊಂದು ತಿಳಿಸಿದೆ.

ಚುನಾವಣೆ ಪ್ರಚಾರಕ್ಕಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಕೇಂದ್ರ ಸಚಿವರು, ಗಣ್ಯರ ರೂಟ್‌ಮ್ಯಾಪ್‌ ಸಿದ್ಧಗೊಂಡಿರುತ್ತದೆ. ಎಂದು, ಯಾವ ರಾಜ್ಯದ ಸ್ಥಳಗಳಲ್ಲಿ ಪ್ರಚಾರ, ಯಾರು ಬರುತ್ತಾರೆ ಎಂಬ ಮಾಹಿತಿಯನ್ನು ಪಕ್ಷಗಳು ನೀಡುತ್ತವೆ. ಜೊತೆಗೆ ಅಗತ್ಯ ಸೂಚನೆ ನೀಡಿರುತ್ತವೆ. ಅದರಂತೆ ಸೇವೆ ಒದಗಿಸಲಿದ್ದೇವೆ ಎಂದು ಹೇಳಿದೆ.

ಇತರರಿಗೆ ಅಭಾವ:

ಮುಂದಿನ ಎರಡು ತಿಂಗಳು ರಾಜಕೀಯ ಪಕ್ಷಗಳೇ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಹೆಲಿಕಾಪ್ಟರ್‌ಗಳನ್ನು ಬಳಸಲಿವೆ. ಇದರಿಂದ ಬ್ಯುಸಿನೆಸ್‌ ಸೇರಿ ಇತರೆ ಕ್ಷೇತ್ರಗಳ ವಿವಿಐಪಿಗಳಿಗೆ ಅಗತ್ಯ ಸಮಯಕ್ಕೆ ಹೆಲಿಕಾಪ್ಟರ್‌, ಜೆಟ್‌, ಮಿನಿ ವಿಮಾನಗಳು ಸಿಗದೇ ಹೋಗಬಹುದು. ಇಲ್ಲವೇ ಅವರಿಗೆ ಬಾಡಿಗೆಯೂ ತುಸು ದುಬಾರಿ ಆಗುವ ಸಾಧ್ಯತೆಯಿದೆ.

ಲೋಕ ಕದನ: ಮಧ್ಯಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಂಭವ, ಮತ್ತೆ ‘ಮೋದಿ ಅಲೆ’ಯಲ್ಲಿ ಕಾಂಗ್ರೆಸ್‌ ಮಂಕು?

ಗಂಟೆಗೆ₹ 2.10 ಲಕ್ಷದಿಂದ ಕಾಪ್ಟರ್‌ ಬಾಡಿಗೆ ಆರಂಭ

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಎಲ್ಲ ಕ್ಷೇತ್ರಗಳಂತೆ ಏವಿಯೇಶನ್‌ ಬಾಡಿಗೆಯೂ ಏರಿಕೆಯಾಗಿದೆ ಎಂದು ಹ್ಯಾಲೋ ಜೆಟ್‌ನ ಸಿಇಒ ಶೋಬೆ ಟಿ. ಪೌಲ್‌ ಹೇಳುತ್ತಾರೆ. ಸಿಂಗಲ್‌ ಎಂಜಿನ್‌ಗಿಂತ ಡಬಲ್‌ ಎಂಜಿನ್‌ ಕಾಪ್ಟರ್‌, ವಿಮಾನಗಳ ಬಾಡಿಗೆ ಹೆಚ್ಚಾಗಿವೆ. ಎರಡು ಆಸನದ ಹೆಲಿಕಾಪ್ಟರ್‌ಗೆ ಒಂದು ತಾಸಿಗೆ ಸುಮಾರು ₹2.10 ಲಕ್ಷ ರು., 4 ಆಸನದ ಹೆಲಿಕಾಪ್ಟರ್‌ಗೆ ಗಂಟೆಗೆ ₹2.30 ಲಕ್ಷ ರು., 6 ಆಸನದ ಮಿನಿ ವಿಮಾನಕ್ಕೆ ಗಂಟೆಗೆ ₹2.60 ಲಕ್ಷ ರು., 8 ಆಸನದ ಮಿನಿ ವಿಮಾನಕ್ಕೆ ಗಂಟೆಗೆ ₹3.50 ಲಕ್ಷ ರು., 13 ಆಸನದ ಮಿನಿ ವಿಮಾನಕ್ಕೆ ಗಂಟೆಗೆ ₹4 ಲಕ್ಷ ರು. ಬಾಡಿಗೆ ಇದೆ.

20% ದರ ಏರಿಕೆ

ದಕ್ಷಿಣ ಭಾರತದ ಹೆಲಿಕಾಪ್ಟರ್‌ ಕಂಪನಿಗಳ ಬಹುತೇಕ ಹೆಲಿಕಾಪ್ಟರ್‌ಗಳು, ಜೆಟ್‌ಗಳು ಬುಕ್‌ ಆಗಿವೆ ಎಂಬ ಮಾಹಿತಿ ಇದೆ. ಕಳೆದ ಲೋಕಸಭಾ ಎಲೆಕ್ಷನ್‌ಗೆ ಹೋಲಿಸಿದರೆ ಶೇ.20ರಷ್ಟು ದರ ಹೆಚ್ಚಳವಾಗಿದೆ ಎಂದು ಹ್ಯಾಲೊ ಜೆಟ್‌ ಸಿಇಒ ಶೋಬೆ ಟಿ. ಪೌಲ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios