Asianet Suvarna News Asianet Suvarna News

ನಿನ್ನೆ ಒಂದೇ ದಿನ 70 ಕೋಟಿ ಮದ್ಯ ಮಾರಾಟ!

ನಿನ್ನೆ ಒಂದೇದಿನ 70 ಕೋಟಿ ಮದ್ಯ ಮಾರಾಟ ! ಕಳೆದ ವರ್ಷಕ್ಕೆ ಹೋಲಿಸಿದರೆ ವಹಿವಾಟು ಕಡಿಮೆ ಸಾಧ್ಯತೆ | ನಗರದ ಸೇರಿದಂತೆ ರಾಜ್ಯಾದ್ಯಂತ ಭರ್ಜರಿ ಮಾರಾಟ

More than 70 crores worth liquor sold on December 31
Author
Bengaluru, First Published Jan 1, 2020, 8:21 AM IST
  • Facebook
  • Twitter
  • Whatsapp

ಬೆಂಗಳೂರು (ಜ. 01):  ಹೊಸ ವರ್ಷ 2020ರ ಸ್ವಾಗತ ಹಾಗೂ ಸಂಭ್ರಮಾಚರಣೆಯಲ್ಲಿ ಯಾವ ವ್ಯಾಪಾರ, ವಹಿವಾಟು ಕಡಿಮೆಯಾಗಿದೆಯೋ ಏನೋ ಗೊತ್ತಿಲ್ಲ. ಆದರೆ, ಮದ್ಯದ ಗಮ್ಮತ್ತೇನೂ ಕಡಿಮೆಯಾಗಿಲ್ಲ. ಡಿ.31ರ ಒಂದೇ ದಿನ ಬರೋಬ್ಬರಿ .70 ಕೋಟಿಗೂ ಹೆಚ್ಚಿನ ಮದ್ಯ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ.

ಇದು, ಕಳೆದ ವರ್ಷದ ಡಿ.31ರಂದು ನಡೆದಿದ್ದ .81 ಕೋಟಿ ಮದ್ಯ ವಹಿವಾಟಿಗೆ ಹೋಲಿಸಿದರೆ ಕೊಂಚ ಕಡಿಮೆ ಎನ್ನುವಂತೆ ಕಂಡುಬರುತ್ತಿದ್ದರೂ, ಇದು ಕೇವಲ ಅಂದಾಜು ಮೊತ್ತವಾಗಿದ್ದರಿಂದ ಒಟ್ಟಾರೆ ಮದ್ಯ ಮಾರಾಟದ ಪೂರ್ಣ ಲೆಕ್ಕ ಸಿಕ್ಕ ಬಳಿಕ ಕಳೆದ ವರ್ಷದ ವಹಿವಾಟಿನ ಸಮೀಪಕ್ಕೇ ಬರಬಹುದು ಎನ್ನುತ್ತವೆ ಮೂಲಗಳು.

2018ರ ಹೊಸ ವರ್ಷಾಚರಣೆ ವೇಳೆ ಎಂಜಿ ರಸ್ತೆ-ಇಂದಿರಾನಗರದದಲ್ಲಿ ಏನಾಗಿತ್ತು?

ರಾಜ್ಯದ ಜನರು ಹೊಸ ವರ್ಷದ ಸಂಭ್ರಮಾಚಾರಣೆಗೆ ಇಷ್ಟವಾದ ಉಡುಪು, ಅಲಂಕಾರಿಕ ವಸ್ತುಗಳು, ಆಭರಣಗಳ ಖರೀದಿ, ಇಷ್ಟವಾದ ಹೋಟೆಲ್‌, ಮಾಲ್‌, ರೆಸ್ಟೋರೆಂಟ್‌ಗಳಲ್ಲಿ ಸಂಗೀತ, ನೃತ್ಯ ಮತ್ತಿತರ ಸಾಂಸ್ಕೃತಿಕ ಸಂಭ್ರಮಾಚರಣೆ, ಭಕ್ಷ್ಯ ಭೋಜನಗಳನ್ನು ಸವಿಯಲು ಜನರು ಸಾಕಷ್ಟುಖರ್ಚು ಮಾಡಿದ್ದಾರೆ. ಇದರ ಜತೆಗೆ ಹೊಸ ವರ್ಷವನ್ನು ಬರಮಾಡಿಕೊಂಡ ಸಂಭ್ರಮದ ನಶೆಯಲ್ಲಿ .70 ಕೋಟಿಯಷ್ಟುಮದ್ಯಮಾರಾಟದ ವಹಿವಾಟು ನಡೆದಿದೆ.

ಹಲವರು ಮುಂಗಡವಾಗಿಯೇ ಮದ್ಯದ ಅಂಗಡಿಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು, ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಮದ್ಯಕ್ಕೆ ಬೇಡಿಕೆ ಸಲ್ಲಿಸಿ ಅಗತ್ಯಕ್ಕನುಗುಣವಾಗಿ ಕಾಯ್ದಿರಿಸಿದ್ದರೆ, ಇನ್ನು ಒಂದಷ್ಟುಜನ ಸಂಭ್ರಮಾಚರಣೆಯ ವೇಳೆಯಲ್ಲೇ ಬೇಕಾದಷ್ಟುಮದ್ಯ ಖರೀದಿಸಿ ಸೇವೆಸಿ ಸಂಭ್ರಮಿಸಿದ್ದಾರೆ.

ವಿಶೇಷವಾಗಿ ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ ಮಂಗಳೂರು, ಕಲಬುರಗಿ ಸೇರಿದಂತೆ ಪ್ರಮುಖ ನಗರಗಳು, ಪಟ್ಟಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ಬೇಡಿಕೆ ಬಂದಿತ್ತು. ಹೀಗಾಗಿ ಈ ಬಾರಿ ಮದ್ಯದ ಮಾರಾಟ ಕಳೆದ ವರ್ಷಕ್ಕಿಂತ ಹೆಚ್ಚಾಗಬಹುದೆಂದು ಅಬಕಾರಿ ಇಲಾಖೆ ನಿರೀಕ್ಷಿಸಿತ್ತು. ಆದರೆ, ಸದ್ಯ .70 ಕೋಟಿಗೂ ಹೆಚ್ಚಿನ ಮದ್ಯ ಮಾರಾಟ ನಡೆದಿರಬಹುದೆಂದು ಅಂದಾಜು ಮಾಡಲಾಗಿದ್ದು, ವಹಿವಾಟಿನ ಸ್ಪಷ್ಟಮೊತ್ತದ ಲೆಕ್ಕ ಒಂದೆರಡು ದಿನಗಳಲ್ಲಿ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಗುಡ್ ಬೈ 2019: ODI ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ಗಳಿವರು

ಕಳೆದ ವರ್ಷ 82 ರೂ ಕೋಟಿ ವಹಿವಾಟು

ಅಬಕಾರಿ ಇಲಾಖೆಯು ಮಾಹಿತಿ ಪ್ರಕಾರ, ಕಳೆದ ವರ್ಷ ಡಿ.31ರಂದು ರಾಜ್ಯದಲ್ಲಿ .82.02 ಕೋಟಿ ಮದ್ಯ ಮಾರಾಟದ ವಹಿವಾಟು ನಡೆದಿತ್ತು. ಈ ಬಾರಿ 70ರಿಂದ 75 ಕೋಟಿ ವಹಿವಾಟಿನ ನಿರೀಕ್ಷೆಯಲ್ಲಿದೆ. ನಿರೀಕ್ಷೆಗೂ ಮೀರಿದ ವಹಿವಾಟ ನಡೆದರೂ ಆಶ್ಚರ್ಯವಿಲ್ಲ. ಏಕೆಂದರೆ 2017ರ ವಷಾಂತ್ಯದ 10 ದಿನಗಳ 512 ಕೋಟಿ ರು. ವಹಿವಾಟು ನಡೆದರೆ, 2018ರ ಕೊನೆಯ ಹತ್ತು ದಿನಗಳಲ್ಲಿ ಕೇವಲ 481 ಕೋಟಿ ರು. ವಹಿವಾಟು ನಡೆದಿತ್ತು. ಆದರೆ, 2019ರಲ್ಲಿ ಡಿ.30ರ ವರೆಗೆ ಹಿಂದಿನ 10 ದಿನಗಳಲ್ಲಿ 516 ಕೋಟಿ ರು. ವಹಿವಾಟು ನಡೆದಿದೆ. ಹಾಗಾಗಿ ಏರಿಳಿತಗಳು ಪ್ರತಿ ವರ್ಷ ನಡೆಯುತ್ತದೆ. 2019ನೇ ವರ್ಷ ಕೊನೇ ದಿನದ ವಹಿವಾಟಿನ ಸ್ಪಷ್ಟಚಿತ್ರಣ ಒಂದೆರಡು ದಿನಗಳಲ್ಲಿ ತಿಳಿಯಲಿದೆ ಎನ್ನುತ್ತಾರೆ ಅಧಿಕಾರಿಗಳು.

2017ರ ಡಿ.30ರಂದು 49.41 ಲಕ್ಷ ಕೇಸ್‌ ಮದ್ಯ (ಹಾಟ್‌), ಡಿ.31ರಂದು 50.17 ಲಕ್ಷ ಕೇಸ್‌ ಮಾರಾಟವಾಗಿತ್ತು. 2018ರ ಡಿ.30ರಂದು 48.59 ಲಕ್ಷ ಕೇಸ್‌ ಹಾಗೂ ಡಿ.31ರಂದು 52.42 ಲಕ್ಷ ಕೇಸ್‌ ಖಾಲಿಯಾಗಿತ್ತು. ಅದೇ ರೀತಿ 2017ರಲ್ಲಿ ಡಿ.30ರಂದು 23.41 ಲಕ್ಷ ಕೇಸ್‌ ಹಾಗೂ ಡಿ.31ರಂದು 23.77 ಲಕ್ಷ ಕೇಸ್‌ ಬಿಯರ್‌, 2018ರ ಡಿ.30ರಂದು 26.38 ಲಕ್ಷ ಕೇಸ್‌ ಹಾಗೂ ಡಿ.31ರಂದು 27.86 ಲಕ್ಷ ಕೇಸ್‌ ಬಿಯರ್‌ ಮಾರಾಟವಾಗಿತ್ತು.

- ಎನ್‌.ಎಲ್‌.ಶಿವಮಾದು

ಜನವರಿ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios