ವಿಜಯಪುರದಲ್ಲಿ ಲಕ್ಕಿ ಡ್ರಾ ಹೆಸರಲ್ಲಿ 6000ಕ್ಕೂ ಹೆಚ್ಚು ಜನರಿಗೆ ಪಂಗನಾಮ!

ಮೋಸ ಹೋಗುವವರು ಇರೋತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದು ಸುಳ್ಳಲ್ಲ. ಕಡಿಮೆ ಸಮಯ, ಹಣದಲ್ಲಿ ಹೆಚ್ಚು ಗಳಿಸಬೇಕು, ರಾತ್ರೋರಾತ್ರಿ ಶ್ರೀಮಂತರಾಗಬೇಕೆಂಬ ದುರಾಸೆಯಿಂದಲೇ ಕೆಲವೊಮ್ಮೆ ಮೋಸಕ್ಕೊಳಗಾಗುವುದಂಟು. ಅಂತದ್ದೊಂದು ಘಟನೆ ಇಲ್ಲಿ ನಡೆದಿದೆ.

More than 6000 people cheated in the name of lucky draw at vijayapur districtt rav

ವಿಜಯಪುರ (ಆ.18): ಮೋಸ ಹೋಗುವವರು ಇರೋತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದು ಸುಳ್ಳಲ್ಲ. ಕಡಿಮೆ ಸಮಯ, ಹಣದಲ್ಲಿ ಹೆಚ್ಚು ಗಳಿಸಬೇಕು, ರಾತ್ರೋರಾತ್ರಿ ಶ್ರೀಮಂತರಾಗಬೇಕೆಂಬ ದುರಾಸೆಯಿಂದಲೇ ಕೆಲವೊಮ್ಮೆ ಮೋಸಕ್ಕೊಳಗಾಗುವುದಂಟು. ಅಂತದ್ದೊಂದು ಘಟನೆ ಇಲ್ಲಿ ನಡೆದಿದೆ.

ಲಕ್ಕಿ ಡ್ರಾ ಹೆಸರಲ್ಲಿ ಬರೋಬ್ಬರಿ 6 ಸಾವಿರಕ್ಕೂ ಅಧಿಕಾರ ಜನರನ್ನು ವಂಚಿಸಿರುವ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯಲ್ಲಿ ನಡೆದಿದೆ.

‘ಒನ್ ಇಂಡಿಯಾ ಒನ್ ಕಾರ್ಡ್’ ಹೆಸರಲ್ಲಿ ವಂಚನೆ: ಖದೀಮರ ಜಾಲ ಪತ್ತೆ ಹಚ್ಚಿದ ವಿಜಯಪುರ ಪೊಲೀಸರು..!

ಮನಿಯಾರ್ ಎಂಟರ್ಪ್ರೈಸಸ್ ಹೆಸರಲ್ಲಿ ಲಾಟರಿ ಮಾರಾಟ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ಸಿಂದಗಿ, ಮುದ್ದೇಬಿಹಾಳ, ಇಂಡಿ ತಾಲೂಕಿನಾದ್ಯಂತ 6 ಸಾವಿರಕ್ಕೂ ಅಧಿಕ ಜನರಿಗೆ ಲಕ್ಕಿ ಡ್ರಾ ಹೆಸ್ರಲ್ಲಿ ಮೋಸ ಮಾಡಿರುವ ಖದೀಮರು. ಇಸ್ಮಾಯಿಲ್ ಮನಿಯಾರ್, ಶಹಾನವಾಜ್, ಅಬ್ದುಲ್, ಗೌಸ್ ಮುದ್ದೀನ್, ಮಹಮ್ಮದ್ ಮನಿಯಾರ್ ಆರೋಪಿಗಳೆಲ್ಲರೂ ಒಂದೇ ಕುಟುಂಬದವರು. ಚಿನ್ನದ ಬಿಸ್ಕತ್, ಕಾರ್, ರಾಯಲ್‌ ಎನ್‌ಫಿಲ್ಡ್ ಬೈಕ್ ಸೇರಿದಂತೆ ಅನೇಕ ಬೆಲೆಬಾಳುವ ವಸ್ತುಗಳನ್ನ ನೀಡೋದಾಗಿ ನಂಬಿಸಿ ಸಾವಿರಾರು ಜನರಿಂದ ಲಕ್ಷಾಂತರ ರೂ. ಲಾಟರಿ ಖರೀದಿ. ಆದರೆ ಯಾರಿಗೂ ಲಾಟರಿ ಇಲ್ಲ. 

ಸದ್ಯ ಪ್ರಕರಣ ಸಂಬಂಧ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಮನಿಯಾರ್ ಎಂಟರ್ಪ್ರೈಸಸ್ ಮಾಲಿಕರ ವಿರುದ್ಧ  ದೂರು ದಾಖಲಾಗಿದೆ. ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವ ಪೊಲೀಸರು.

420 ಇನ್ನು ವಂಚನೆ ಅಲ್ಲ, 302 ಕೊಲೆ ಅಲ್ಲ, ಅತ್ಯಾಚಾರಕ್ಕೆ ಸೆಕ್ಷನ್‌ 375, 376ರಡಿ ಕೇಸ್‌ ಇಲ್ಲ!

Latest Videos
Follow Us:
Download App:
  • android
  • ios