Asianet Suvarna News Asianet Suvarna News

Covid Crisis: 231 ದಿನ ಬಳಿಕ ರಾಜ್ಯದಲ್ಲಿ 34047 ಕೋವಿಡ್‌ ಕೇಸ್‌

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ವೇಗದಲ್ಲಿ ಹರಡುತ್ತಿದ್ದು ಶುಕ್ರವಾರ 34,047 ಹೊಸ ಪ್ರಕರಣಗಳು ದಾಖಲಾಗಿದೆ. ಇದು ಕಳೆದ 231 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಲಕ್ಷದ ಸಮೀಪಕ್ಕೆ ಬಂದಿದೆ.

More Than 34047 Covid Cases on jan 17th in Karnataka gvd
Author
Bangalore, First Published Jan 17, 2022, 4:00 AM IST

ಬೆಂಗಳೂರು (ಜ. 17):  ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು (Covid Cases) ವೇಗದಲ್ಲಿ ಹರಡುತ್ತಿದ್ದು ಶುಕ್ರವಾರ 34,047 ಹೊಸ ಪ್ರಕರಣಗಳು ದಾಖಲಾಗಿದೆ. ಇದು ಕಳೆದ 231 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಲಕ್ಷದ ಸಮೀಪಕ್ಕೆ ಬಂದಿದೆ. ರಾಜ್ಯದ ಪಾಸಿಟಿವಿಟಿ ದರ ಶೇ.19.29ಕ್ಕೆ ಏರಿದೆ. 13 ಮಂದಿ ಮೃತರಾಗಿದ್ದಾರೆ. 5,902 ಮಂದಿ ಚೇತರಿಸಿಕೊಂಡಿದ್ದಾರೆ.

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 2356 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಈ ಪೈಕಿ 49 ಮಂದಿ ಐಸಿಯು ವೆಂಟಿಲೇಟರ್‌ ಹಾಸಿಗೆಯಲ್ಲಿದ್ದಾರೆ. 145 ಮಂದಿ ಐಸಿಯು, 829 ಮಂದಿ ಎಚ್‌ಡಿಯು, 1,333 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಚೇತರಿಸಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆ ಆಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1.97 ಲಕ್ಷಕ್ಕೆ ಏರಿದೆ.

ಇದೇ ವೇಳೆ ಬೆಂಗಳೂರಿನಲ್ಲಿ ಶನಿವಾರ 22,284 ಮಂದಿಯಲ್ಲಿ ಸೋಂಕು ಪತ್ತೆ ಆಗಿದ್ದರೆ ಭಾನುವಾರ 21,071 ಮಂದಿಯಲ್ಲಿ ಸೋಂಕು ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಹೊಸ ಪ್ರಕರಣಗಳಲ್ಲಿ ಕುಸಿತ ಕಂಡು ಬಂದಿದ್ದರೂ ರಾಜ್ಯದ ಅನ್ಯ ಭಾಗಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ವರದಿಯಾಗಿದೆ.

ಮೈಸೂರು 1,892, ತುಮಕೂರು 1,373, ಹಾಸನ 1,171 ಪ್ರಕರಣ ದಾಖಲಾಗಿದೆ. ಯಾದಗಿರಿ 33, ಕೊಪ್ಪಳ 80, ಹಾವೇರಿ 55 ಜಿಲ್ಲೆಯನ್ನು ಹೊರತು ಪಡಿಸಿ ಉಳಿದೆಲ್ಲ ಕಡೆ ಮೂರಂಕಿಯಲ್ಲಿ ಪ್ರಕರಣ ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ 5, ದಕ್ಷಿಣ ಕನ್ನಡ 2, ಚಿಕ್ಕಬಳ್ಳಾಪುರ, ಹಾಸನ, ಕಲಬುರಗಿ, ಮಂಡ್ಯ, ಮೈಸೂರು ಮತ್ತು ರಾಮನಗರದಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 32.20 ಲಕ್ಷ ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು 29.83 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 38,431 ಮಂದಿ ಮರಣವನ್ನಪ್ಪಿದ್ದಾರೆ.

Covid-19 Crisis: ಭಾರತದಲ್ಲೀಗ ಒಟ್ಟಿಗೆ ಎರಡು ಪ್ರತ್ಯೇಕ ಕೋವಿಡ್‌ ಅಲೆ

ತುಮಕೂರಲ್ಲಿ ಮೊದಲ ಬಾರಿ 1000+: ಮೂರನೇ ಅಲೆಯಲ್ಲಿ ಬೆಂಗಳೂರು ಹೊರತುಪಡಿಸಿದರೆ ಸಾವಿರಕ್ಕಿಂತ ಹೆಚ್ಚು ಪ್ರಕರಣ ಮೊದಲ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. ತುಮಕೂರು (1,326), ಹಾಸನ (968), ದಕ್ಷಿಣ ಕನ್ನಡ (792), ಮೈಸೂರು (729), ಮಂಡ್ಯ (718), ಧಾರವಾಡ (648), ಉಡುಪಿ (607) ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ ವರದಿಯಾಗಿದೆ. ಯಾದಗಿರಿ 13, ಹಾವೇರಿ 17, ವಿಜಯಪುರ 76, ಚಾಮರಾಜನಗರ 93 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ನೂರಕ್ಕಿಂತ ಹೆಚ್ಚು ಹೊಸ ಪ್ರಕರಣ ವರದಿಯಾಗಿದೆ. 

ಬೆಂಗಳೂರು ನಗರದಲ್ಲಿ ಐವರು, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 31.80 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 29.77 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 38,418 ಮಂದಿ ಮರಣವನ್ನಪ್ಪಿದ್ದಾರೆ.

164 ಪೊಲೀಸರಿಗೆ ಸೋಂಕು ದೃಢ: ಬೆಂಗಳೂರು (Bengaluru) ನಗರ ಪೊಲೀಸ್‌ (Police) ವಿಭಾಗದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಿದ್ದು, ಶುಕ್ರವಾರ ಒಂದೇ ದಿನ 164 ಪೊಲೀಸರಿಗೆ ಕೊರೋನಾ(Coronavirus) ಸೋಂಕು ದೃಢಪಟ್ಟಿದೆ. ಈ ಮೂಲಕ ಕಳೆದ ನವೆಂಬರ್‌ನಿಂದ ಈವರೆಗೆ (ಒಟ್ಟು 75 ದಿನಗಳಲ್ಲಿ) ಕೊರೋನಾ ಸೋಂಕಿಗೆ ತುತ್ತಾದ ಪೊಲೀಸರ ಒಟ್ಟು ಸಂಖ್ಯೆ 504ಕ್ಕೆ ಏರಿಕೆಯಾಗಿದೆ.

Covid Crisis: 236 ದಿನದ ಬಳಿಕ ಬೆಂಗ್ಳೂರಲ್ಲಿ 20 ಸಾವಿರ ಅಧಿಕ ಜನಕ್ಕೆ ವೈರಸ್‌

ನಗರದಲ್ಲಿ ಕಳೆದೊಂದು ವಾರದಿಂದ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ನಡುವೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ಒಂದೇ ದಿನ ಪಶ್ಚಿಮ ವಿಭಾಗದಲ್ಲಿ 36 ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅದರಲ್ಲಿಯೂ ಎರಡು ಡೋಸ್‌ ಲಸಿಕೆ (Vaccine) ಪಡೆದಿರುವ ಪೊಲೀಸರಲ್ಲೇ ಸೋಂಕು ಕಾಣಿಸಿಕೊಂಡಿದೆ.

ಕಡಿಮೆ ಲಕ್ಷಣ ಇರುವ ಸೋಂಕಿತ ಪೊಲೀಸರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಗಂಭೀರ ಲಕ್ಷಣವಿದ್ದವರು ಪೊಲೀ​ಸ​ರಿ​ಗಾ​ಗಿಯೇ ನಿರ್ಮಿ​ಸಿ​ರುವ ಕೊರೋನಾ ಆರೈಕೆ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೊರೋನಾ ಮುಂಚೂಣಿ ಕಾರ್ಯ​ಕ​ರ್ತ​ರಾಗಿ ಕರ್ತವ್ಯ ನಿರ್ವ​ಹಿ​ಸು​ತ್ತಿ​ರುವ ಪೊಲೀ​ಸ​ರಿಗೆ ಮುನ್ನೆ​ಚ್ಚ​ರಿಕಾ ಡೋಸ್‌(ಬೂಸ್ಟರ್‌ ಡೋಸ್‌) ನೀಡ​ಲಾಗುತ್ತಿದೆ. ಇದರ ನಡುವೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಪೊಲೀಸರಲ್ಲಿ ಆತಂಕ ಹೆಚ್ಚಿಸಿದೆ.

Follow Us:
Download App:
  • android
  • ios