ಕೋವಿಡ್‌ ಆತಂಕ : ರಾಜ್ಯದಲ್ಲಿ 4ನೇ ದಿನವೂ 1200 ಕೇಸು

  •  ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ 1,200ರ ಅಸುಪಾಸಿನಲ್ಲಿ 
  • ಶುಕ್ರವಾರ 1,220 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು, 19 ಮಂದಿ ಮರಣವನ್ನಪ್ಪಿದ್ದಾರೆ
more than 1200 covid cases reported in Karnataka on sep 3 snr

 ಬೆಂಗಳೂರು (ಸೆ.04):  ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ 1,200ರ ಅಸುಪಾಸಿನಲ್ಲಿ ಸ್ಥಿರವಾಗಿದೆ. ಶುಕ್ರವಾರ 1,220 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು, 19 ಮಂದಿ ಮರಣವನ್ನಪ್ಪಿದ್ದಾರೆ. 1,175 ಮಂದಿ ಗುಣ ಹೊಂದಿದ್ದಾರೆ. ಆಗಸ್ಟ್‌ 30ಕ್ಕೆ 973 ಕ್ಕೆ ಕುಸಿದಿದ್ದ ರಾಜ್ಯದ ದೈನಂದಿನ ಪ್ರಕರಣಗಳ ಸಂಖ್ಯೆ ಆ ಬಳಿಕ ಪ್ರತಿದಿನ 1,200 ಸರಾಸರಿಯಲ್ಲಿ ವರದಿಯಾಗುತ್ತಿದೆ. ಬೆಂಗಳೂರು ನಗರ (319), ದಕ್ಷಿಣ ಕನ್ನಡ (232) ಮತ್ತು ಉಡುಪಿ (150)ಯಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಶುಕ್ರವಾರ 1.79 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಈವರೆಗೆ ಒಟ್ಟು 4.39 ಕೋಟಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

ಗಡಿ ರಾಜ್ಯಗಳಲ್ಲಿ ಸೋಂಕು ಏರಿಕೆ : ಕೊಡಗಿಗೆ ತಪ್ಪದ ಆತಂಕ

2.6 ಲಕ್ಷ ಮಂದಿಗೆ ಲಸಿಕೆ: ಶುಕ್ರವಾರ 2.56 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 1.41 ಲಕ್ಷ ಮಂದಿ ಮೊದಲ ಡೋಸ್‌ ಮತ್ತು 1.15 ಲಕ್ಷ ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ.

ವಿಜಯಪುರ, ರಾಯಚೂರು ಮತ್ತು ಬೀದರ್‌ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಬಾಗಲಕೋಟೆ 1, ಕೊಪ್ಪಳ 2, ಯಾದಗಿರಿ, ರಾಮನಗರ, ಕಲಬುರಗಿ, ಹಾವೇರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 3, ಗದಗ 4, ಚಾಮರಾಜನಗರ 5, ದಾವಣಗೆರೆ ಮತ್ತು ಬಳ್ಳಾರಿ 8, ಧಾರವಾಡ ಮತ್ತು ಕೋಲಾರ ಜಿಲ್ಲೆಯಲ್ಲಿ 9 ಪ್ರಕರಣ ವರದಿಯಾಗಿದೆ.

ಬೆಂಗಳೂರು ನಗರ 8, ದಕ್ಷಿಣ ಕನ್ನಡ 4, ಉತ್ತರ ಕನ್ನಡ 2, ವಿಜಯಪುರ, ಮಂಡ್ಯ, ಕೋಲಾರ, ಧಾರವಾಡ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ರಾಜ್ಯದಲ್ಲಿ ಸದ್ಯ 18,404 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸದ್ಯ 29.53 ಲಕ್ಷ ಮಂದಿ ಕೋವಿಡ್‌ ಪೀಡಿತರಾಗಿದ್ದು 28.97 ಲಕ್ಷ ಮಂದಿ ಗುಣಮುಖರಾಗಿದ್ದಾರೆ

ಆರೋಗ್ಯ ಕಾರ್ಯಕರ್ತರು 4, ಮುಂಚೂಣಿ ಕಾರ್ಯಕರ್ತರು 39, 18 ರಿಂದ 44 ವರ್ಷದೊಳಗಿನ 1.04 ಲಕ್ಷ, 45 ವರ್ಷ ಮೇಲ್ಪಟ್ಟ37,547 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು 736, ಮುಂಚೂಣಿ ಕಾರ್ಯಕರ್ತರು 2,956, 18 ರಿಂದ 44 ವರ್ಷದೊಳಗಿನ 76,061, 45 ವರ್ಷ ಮೇಲ್ಪಟ್ಟ35,253 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

Latest Videos
Follow Us:
Download App:
  • android
  • ios