ಕೊಡಗಿನ ಗಡಿ ರಾಜ್ಯಗಳಲ್ಲಿ ಏರು ಮುಖವಾಗುತ್ತಿರುವ ಕೊರೋನಾ ಪ್ರವಾಸಿಗರ ದಂಡು ಕೊಡಗು ಜಿಲ್ಲೆಯತ್ತ ಆಗಮಿಸುತ್ತಿದ್ದು, ಎಚ್ಚರ ತಪ್ಪಿದರೆ ಕೊಡಗಿನಲ್ಲಿ ಏರಿಕೆ

ಸುಂಟಿಕೊಪ್ಪ (ಸೆ.03): ಕೊಡಗಿನ ಗಡಿ ರಾಜ್ಯಗಳಲ್ಲಿ ಏರು ಮುಖವಾಗುತ್ತಿರುವ ಕೊರೋನಾ ಸೋಂಕಿನ ನಡುವೆಯೇ ಪ್ರವಾಸಿಗರ ದಂಡು ಕೊಡಗು ಜಿಲ್ಲೆಯತ್ತ ಆಗಮಿಸುತ್ತಿದ್ದು, ಎಚ್ಚರ ತಪ್ಪಿದರೆ ಕೊಡಗಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಲಿದೆ.

ಕೊಡಗಿನ ಗಡಿ ರಾಜ್ಯವಾದ ಕೇರಳ ಹಾಗೂ ಬೆಳಗಾವಿಯ ಗಡಿಯಾದ ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್‌ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಕೊಡಗು ಹಾಗೂ ದಕ್ಷಣ ಕನ್ನಡ ಜಿಲ್ಲೆಗೆ ಕೇರಳದಿಂದ ಪ್ರತಿದಿನ ಸಾವಿರಾರು ಮಂದಿ ವ್ಯಾಪಾರ ವಹಿವಾಟು, ಆಸ್ಪತ್ರೆ, ಶಾಲಾ ಕಾಲೇಜಿಗೆ ಬಂದು ಹೋಗುವುದು ಸಾಮಾನ್ಯವಾಗಿದೆ. 

4 ಜಿಲ್ಲೆಗಳಲ್ಲಿ ಶೂನ್ಯ ಕೇಸ್: ಇಲ್ಲಿದೆ ಸೆ.1ರ ಕರ್ನಾಟಕದ ಕೊರೋನಾ ಅಂಕಿ-ಸಂಖ್ಯೆ

ಅಲ್ಲಿಂದ ಬರುವವರ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಿ ಪರೀಕ್ಷೆಗೆ ಒಳಪಡಿಸದೆ ಮೈ ಮರೆತರೆ, ಕೊಡಗಿನಲ್ಲಿ ಕೋವಿಡ್‌ ಸೋಂಕು ಹೆಚ್ಚಳವಾಗಲಿದೆ. ಅಲ್ಲದೆ ಕೈಲ್‌ಪೊಳ್‌್ದ ಹಬ್ಬ, ಗೌರಿ-ಗಣೇಶ ಹಬ್ಬವೂ ಬರಲಿದ್ದು, ಕೊಡಗಿನವರು ಹೊರ ಜಿಲ್ಲೆ ರಾಜ್ಯದಲ್ಲಿ ಉದ್ಯೋಗ ನಿಮಿತ್ತ ತೆರಳಿದವರು ಹಬ್ಬಕ್ಕೆಂದು ಊರಿಗೆ ಬರುತ್ತಾರೆ. ಹಾಗೆ ಬರುವವರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಡಸದಿದ್ದರೆ ಸೋಂಕು ಹರಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

 ಇನ್ನು ಕೊಡಗಿನಲ್ಲಿ ವಾರಾಂತ್ಯದ ಕಪ್ರ್ಯೂ ಜಾರಿ ಇದ್ದರೂ ಶನಿವಾರ,ಭಾನುವಾರ ಹೋಂಸ್ಟೇಗಳಲ್ಲಿ ರೆಸಾರ್ಟ್‌ಗಳಲ್ಲಿ ಪ್ರವಾಸಿಗರು ತುಂಬಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona