ಕೂಲಿ ಕೆಲಸ ಮಾಡಿ ದಣಿದು ಬಂದ ಮಹಿಳೆ ಮೇಲೆ ಮುರಿದುಬಿದ್ದ ಬೃಹತ್ ಮರ!
ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮರ ಬಿದ್ದು ಕೃಷಿ ಕಾರ್ಮಿಕ ಮಹಿಳೆಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹತ್ತಿಕುಡಿಗೆಯಲ್ಲಿ ನಡೆದಿದೆ.
ಚಿಕ್ಕಮಗಳೂರು (ಜೂ.12): ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮರ ಬಿದ್ದು ಕೃಷಿ ಕಾರ್ಮಿಕ ಮಹಿಳೆಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹತ್ತಿಕುಡಿಗೆಯಲ್ಲಿ ನಡೆದಿದೆ.
ರತ್ನಮ್ಮ, ಗಾಯಗೊಂಡ ಮಹಿಳೆ. ಎಂದಿನಂತೆ ಇಂದು ಕೂಲಿ ಕೆಲಸಕ್ಕೆ ಜಮೀನಿಗೆ ಹೋಗಿದ್ದ ಮಹಿಳೆ. ಕೆಲಸ ಮುಗಿಸಿ ಮನೆ ತಲುಪಿದ ವೇಳೆ ಬಿರುಗಾಳಿ ಎದ್ದಿದೆ. ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆ ಮನೆ ಮುಂದಿನ ಬೃಹತ್ ಮರ ಬಿದ್ದ ನಡೆದಿರುವ ದುರಂತ ಘಟನೆ. ಘಟನೆ ಬಳಿಕ ಸ್ಥಳೀಯರು, ಕುಟುಂಬದವರ ಸಹಾಯದಿಂದ ಕಳಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಬಳಿಕ ಮಹಿಳೆಗೆ ಗಂಭೀರ ಪೆಟ್ಟಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.
ಕಾಫಿನಾಡ ಮಳೆಗೆ ಮೂರನೇ ಬಲಿ; ನಡೆದು ಹೋಗುತ್ತಿದ್ದ ಮಹಿಳೆ ಮೇಲೆ ಮುರಿದುಬಿದ್ದ ಮರ
ಕೊಪ್ಪಳದಲ್ಲಿ ಭಾರೀ ಮಳೆ:
ಬಿಸಿಲಿನಿಂದ ಕಂಗೆಟ್ಟಿದ್ದ ಕೊಪ್ಪಳ ರೈತರಿಗೆ ಮೊದಲ ಮಳೆಗೆ ರೈತರು ಖುಷಿಯಾಗಿದ್ದಾರೆ ಇನ್ನೊಂದೆಡೆ ಇಂದು ಕೊಪ್ಪಳದಲ್ಲಿ ಸುರಿದ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ಕಿನ್ನಾಳ ರಸ್ತೆ ತುಂಬೆಲ್ಲ ನೀರೋ ನೀರು. ರಾಜಕಾಲುವೆ ತುಂಬಿ ಹರಿಯುತ್ತಿದೆ. ಕಾಲುವೆ ನೀರು ಸಹ ರಸ್ತೆಗೆ ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಮಂಗಳೂರು, ಕಿನ್ನಾಳ ಗ್ರಾಮಗಳಿಗೆ ತೆರಳಲು ಜನರು ಪರದಾಡುವಂತಾಯಿತು. ರಭಸವಾಗಿ ಹರಿಯುತ್ತಿರುವ ನೀರಿನಲ್ಲೇ ಪ್ರಗತಿನಗರ, ಕಲ್ಯಾಣನಗರಗಳಿಗೆ ತೆರಳಲು ಜನರು ಹರಸಾಹಸ ಪಡುತ್ತಿದ್ದಾರೆ.