Kalaburagi: ಮಹಿಳೆಯ ಶವದ ಮುಂದೆ 20 ಗಂಟೆ ಕುಳಿತಿದ್ದ ಕೋತಿ!

ಜಿಲ್ಲೆಯ ಮಾಲಗತ್ತಿ ಗ್ರಾಮದಲ್ಲಿ ಮಹಿಳೆಯ ಶವದ ಮುಂದೆ ಮಂಗವೊಂದು ಸುಮಾರು 20 ಗಂಟೆಗಳ ಕಾಲ ಕದಲದೇ ಕುಳಿತುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ನಡೆದಿದೆ.

Monkey Sits In Front Of Women Dead Body And Disturb Final Rites In Kalaburagi gvd

ಕಲಬುರಗಿ (ಜೂ.24): ಜಿಲ್ಲೆಯ ಮಾಲಗತ್ತಿ ಗ್ರಾಮದಲ್ಲಿ ಮಹಿಳೆಯ ಶವದ ಮುಂದೆ ಮಂಗವೊಂದು ಸುಮಾರು 20 ಗಂಟೆಗಳ ಕಾಲ ಕದಲದೇ ಕುಳಿತುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ನಡೆದಿದೆ. ಜನರ ಗದ್ದಲದ ನಡುವೆ ಕೋತಿಗಳು ಇರೋದಿಲ್ಲ. ಆದರೆ, ಈ ಮಂಗ ಮಾತ್ರ ಶವದ ಮುಂದೆ ಕಣ್ಣೀರು ಹಾಕುತ್ತ ಕುಳಿತವರ ಮಧ್ಯೆ ತಾನೂ ಸಹ ಕುಳಿತು ಶೋಕದಲ್ಲಿ ಮುಳುಗುವ ಮೂಲಕ ವಿಚಿತ್ರ ವರ್ತನೆ ತೋರಿದೆ. ಮಹಿಳೆಯ ಶವದ ಪಕ್ಕದಲ್ಲಿ ಕುಳಿತ ಕೋತಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಎಲ್ಲರೂ ಬೆರಗಾಗುವಂತೆ ಮಾಡಿದೆ. 

ನಿನ್ನೆ ಮಧ್ಯಾಹ್ನ ಮಾಲಗತ್ತಿ ಗ್ರಾಮದ ಶಾಮಲಾ ಎಂಬುವರು ಕಾಯಿಲೆಯಿಂದ ಮೃತಪಟ್ಟಿದ್ದರು. ಮನೆಯಲ್ಲಿ ಶಾಮಲಾ ಅವರ ಶವವಿಟ್ಟು ಸಂಬಂಧಿಕರು ಅಳುತ್ತ ಕುಳಿತಿದ್ದರು. ಮಹಿಳೆ ಮೃತಪಟ್ಟಒಂದು ಗಂಟೆಗೆ ಪ್ರತ್ಯಕ್ಷವಾದ ಕೋತಿ ಸ್ಥಳ ಬಿಟ್ಟು ಕದಲದೇ ಜನರ ಮಧ್ಯೆ ತಾನೂ ಕೂಡ ಕುಳಿತಿತ್ತು. ಕೋತಿ ಓಡಿಸೋದಕ್ಕೆ ಎಷ್ಟೇ ಪ್ರಯತ್ನಪಟ್ಟರೂ ಸಹ ಅದು ಆ ಜಾಗದಿಂದ ಕದಲೇ ಇಲ್ಲ.

ಕೋತಿಗೆ ಮಾವಿನ ಹಣ್ಣು ತಿನ್ನಿಸಿದ ಪೊಲೀಸಪ್ಪ: ವಿಡಿಯೋ ವೈರಲ್

ಅಂತ್ಯ ಸಂಸ್ಕಾರದ ವಿಧಿ ವಿಧಾನಕ್ಕೂ ಅಡ್ಡಿಪಡಿಸಿದ ಕೋತಿ, ಶವಕ್ಕೆ ಮುಂದಿನ ಕಾರ್ಯ ನಡೆಸಲು ಬಿಡಲಿಲ್ಲ. ಇದರಿಂದ ಭಯಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕೋತಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಕರೆದೊಯ್ದಿದ್ದಾರೆ. ಇದೇ ಮೊದಲ ಬಾರಿ ಕೋತಿ ಕಾಣಿಸಿಕೊಂಡು ವಿಚಿತ್ರ ವರ್ತನೆ ತೋರಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ದತ್ತನ ಹೆಸರಲ್ಲಿ ಪೂಜಾರಿಗಳಿಂದಲೇ ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ: ಶ್ರೀ ದತ್ತಾತ್ರೇಯ ದೇವಾಲಯದ ಹೆಸರಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ  ಪೂಜಾರಿಗಳಿಂದಲೇ ಸರಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆಯಾಗಿರುವ ಆರೋಪ ಕೇಳಿಬಂದಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿನ ಶ್ರೀ ದತ್ತಾತ್ರೇಯ ದೇವಸ್ಥಾನದ ಹೆಸರಲ್ಲಿ ನಕಲಿ ವೆಬ್‌ಸೈಟ್‌‌ ಸೃಷ್ಟಿಸಿ ಕೆಲ ಅರ್ಚಕರು ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ದೇಗುಲಕ್ಕೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಭೇಟಿ ನೀಡಿದ್ದಾಗ ಮಹಾವಂಚನೆ ಬಯಲಿಗೆ ಬಂದಿದೆ.

ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ತಾಯಿ ಕೋತಿ: ವಿಡಿಯೋ ವೈರಲ್

ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ www.devalgangapur.com ಆಗಿದ್ದು, ಅಧಿಕೃತ ವೆಬ್‌ಸೈಟ್‌ ಹೊರತುಪಡಿಸಿ ಅರ್ಚಕರಿಂದ ಏಳೆಂಟು ನಕಲಿ ವೆಬ್‌ಸೈಟ್ ಸೃಷ್ಟಿಯಾಗಿವೆ ಎನ್ನಲಾಗಿದೆ. ನಕಲಿ ವೆಬ್‌ಸೈಟ್‌ ಮೂಲಕ ಭಕ್ತರಿಂದ ಕೋಟ್ಯಾಂತರ ರೂ ಸಂಗ್ರಹವಾಗಿದ್ದು,  ಮುಜರಾಯಿ ಹುಂಡಿಗೆ ಸೇರಬೇಕಿದ್ದ ಹಣ ಅರ್ಚಕರ ಖಾತೆಗಳಿಗೆ ಸೇರಿದೆ. ಈ ಸಂಬಂಧ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ಎಸ್ಪಿಗೆ ದೂರು ನೀಡಿದ್ದು,  ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿದ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.  ಅಲ್ಲದೇ ಈ ವಂಚನೆಯಲ್ಲಿ ಅರ್ಚಕರ ಜೊತೆ ಸ್ಥಳಿಯ ಮುಖಂಡರು ಹಾಗೂ ರಾಜಕೀಯ ನಾಯಕರು ಭಾಗಿಯಾಗಿರುವ  ಶಂಕೆ ವ್ಯಕ್ತವಾಗಿದೆ.  ಒಟ್ಟು 50 ಕೋಟಿಗೂ ಹೆಚ್ಚು ವಂಚನೆ ನಡೆದಿದೆ ಎನ್ನಲಾಗಿದೆ. 

Latest Videos
Follow Us:
Download App:
  • android
  • ios