₹6 ಕೋಟಿ ಚೀಟಿ ಹಣದೊಂದಿಗೆ ಪರಾರಿ ಆದ ಖತರ್ನಾಕ್ ದಂಪತಿಗಾಗಿ ಶೋಧ
ಚೀಟಿ ನಡೆಸುತ್ತಿದ್ದ ದಂಪತಿ ಹಣ ಹೂಡಿದ್ದ ಹತ್ತಾರು ಜನರಿಗೆ ಮೋಸ ಮಾಡಿ ಹಣದೊಂದಿಗೆ ತಲೆಮರೆಸಿಕೊಂಡ ಘಟನೆ ಚಿಕ್ಕಬಾಣಾವರ ಸಮೀಪದ ಕೆರೆಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪೀಣ್ಯ ದಾಸರಹಳ್ಳಿ (ಸೆ.5) : ಚೀಟಿ ನಡೆಸುತ್ತಿದ್ದ ದಂಪತಿ ಹಣ ಹೂಡಿದ್ದ ಹತ್ತಾರು ಜನರಿಗೆ ಮೋಸ ಮಾಡಿ ಹಣದೊಂದಿಗೆ ತಲೆಮರೆಸಿಕೊಂಡ ಘಟನೆ ಚಿಕ್ಕಬಾಣಾವರ ಸಮೀಪದ ಕೆರೆಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆರೆಗುಡ್ಡದಹಳ್ಳಿಯ ನಿವಾಸಿ ವಿಶ್ವನಾಥ್ ಹಾಗೂ ವನಿತಾ ವಂಚಿಸಿದವರು. ಇವರು 10 ವರ್ಷದಿಂದ ಚೀಟಿ ಹಣ ವ್ಯವಹಾರ ನಡೆಸುತ್ತಿದ್ದರು. ತಮ್ಮ ಸ್ವಂತ ಐಶಾರಾಮಿ ಮನೆ, ವಾಣಿಜ್ಯ ಮಳಿಗೆ ತೋರಿಸಿ ಚೀಟಿ ಹಾಕಿಸಿಕೊಂಡು ಬರೋಬ್ಬರಿ .6 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಡ್ರಗ್ಸ್ ಮಾರುತ್ತಿದ್ದ ಒಡಿಶಾ ಮೂಲದ 7 ಮಂದಿ ಸೆರೆ
ವಿಶ್ವನಾಥ್ ಮತ್ತು ವನಿತಾ ವಕೀಲರು, ಡಾಕ್ಟರ್, ಉದ್ಯಮಿಗಳು, ದೊಡ್ಡ ಅಧಿಕಾರಿ ವರ್ಗದವರನ್ನೇ ಗುರಿಯಾಗಿಸಿ ಅವರಿಂದ ಲಕ್ಷಗಟ್ಟಲೇ ಹಣ ಹಾಕಿಸಿಕೊಂಡಿದ್ದರು. ತಿಂಗಳಿಂದ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ದಂಪತಿಗಳಾದ ವಿಶ್ವನಾಥ್, ವನಿತಾ, ಮಂಜುನಾಥ್, ಮುನಿಸ್ವಾಮಿ, ಲಕ್ಷ್ಮೇನಾರಾಯಣ, ವೆಂಕಟರಮಣಪ್ಪ, ವಸಂತರಾಜ್ ಮತ್ತು ಬಾಲಾಜಿ ಸೇರಿದಂತೆ ಒಟ್ಟು 8 ಜನರ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ವಂಚಕರ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚನೆ ಮಾಡಿ, ಶೋಧ ಕಾರ್ಯ ನಡೆಯುತ್ತಿದ್ದಾರೆ.
ಮಾಜಿ ಸಚಿವರೊಬ್ಬರ ಗನ್ ಮ್ಯಾನ್‌ನಿಂದ ವಂಚನೆ: 30 ಕೋಟಿಯ ಕಾಮಗಾರಿಗೆ ಹಣ ಕೇಳಿದ ಆರೋಪ
ಆನ್‌ಲೈನ್ ಮೂಲಕ ₹1.24 ಲಕ್ಷ ವಂಚನೆ
ಹುಬ್ಬಳ್ಳಿ: ಮನೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಖದೀಮರು, ಒಟ್ಟು ₹1,24,999 ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಕೇಶ್ವಾಪುರದ ಸುಖದೇವ್‌ಸಿಂಗ್ ವಂಚನೆಗೊಳಗಾದವರು. ಮನೆಯಲ್ಲಿ ಕುಳಿತಿದ್ದ ಇವರ ಗಮನಕ್ಕೆ ಬಾರದೇ ಇವರ ಖಾತೆಯಲ್ಲಿದ್ದ ₹99,999 ಹಾಗೂ ₹25 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸುಖದೇವಸಿಂಗ್ ಅವರು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.