Upper house majority ಪೂರ್ಣ ಬಹುಮತದತ್ತ ಬಿಜೆಪಿ ಹೆಜ್ಜೆ, ಶಕ್ತಿ ಇದ್ದರೆ ತಡೆಯಲಿ, ಕಾಂಗ್ರೆಸ್‌ಗೆ ಈಶ್ವರಪ್ಪ ಸವಾಲು!

  • ಪಕ್ಷದ ಸೋಲಿಗೆ ಕಾರ್ಯಕರ್ತರೇ ಹೊಣೆ ಹೊರಬೇಕು
  • ಬಿಜೆಪಿ ಪೂರ್ಣ ಬಹುಮತಕ್ಕೆ ಹೆಜ್ಜೆ ಇಡುತ್ತಿದೆ.
  • ಸೋತರೂ ಮೀಸೆ ಮಣ್ಣಾಗಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ
  • ಕಾಂಗ್ರೆಸ್ ವಿರುದ್ಧ ಕೆಎಸ್ ಈಶ್ವರಪ್ಪ ಕಿಡಿ
MLC Karnataka BJP heading towards clear majority in upper house KS Eshwarappa dig congress ckm

ಬೆಳಗಾವಿ(ಡಿ.16):  ವಿಧಾನಪರಿಷತ್‌ ಚುನಾವಣೆಗೆ(Karnataka MLC Election) ಸಂಬಂಧಿಸಿದಂತೆ ಬೆಳಗಾವಿಯಲ್ಲಿ(Belagavi) ಪಕ್ಷದ ಸೋಲಿಗೆ ಕಾರ್ಯಕರ್ತರೇ ಹೊಣೆ ಹೊರಬೇಕು. ಸೋಲು ಗೆಲುವಿಗೆ ಕಾರ್ಯಕರ್ತರೇ ನೇರ ಕಾರಣ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ(ks eshwarappa) ಹೇಳಿದ್ದಾರೆ.

ಬುಧವಾರ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲು-ಗೆಲುವಿಗೆ ಕಾರ್ಯಕರ್ತರೇ ಕಾರಣ. ಮುಖಂಡರು ರಾಜ್ಯಾದ್ಯಂತ ಓಡಾಡಬೇಕಲ್ಲವೇ? ಬಿಜೆಪಿ 6ರಿಂದ 11 ಸ್ಥಾನಕ್ಕೇರಿದೆ. ಕಾಂಗ್ರೆಸ್‌ನಿಂದ 2, ಜೆಡಿಎಸ್‌ನಿಂದ 3 ಸ್ಥಾನ ಕಸಿದುಕೊಂಡು ಗೆದ್ದಿದ್ದೇವೆ ಎಂದರು.

Karnataka BJP vs Congress ಮತಾಂತರ ನಿಷೇಧ, ಬೆಲೆ ಏರಿಕೆ ಸೇರಿ ಹಲವು ವಿಚಾರ ಮಂದಿಟ್ಟು ಸರ್ಕಾರದ ವಿರುದ್ಧ ಕೈ ಹೋರಾಟ ತೀವ್ರ!

‘ಸೋತರೂ ಮೀಸೆ ಮಣ್ಣಾಗಿಲ್ಲ ಎಂದು ಕಾಂಗ್ರೆಸ್ಸಿಗರು(Karnataka Congress) ಹೇಳುತ್ತಾರೆ. ಸೋತರೂ ನಾವೇ ಗೆದ್ದಿದ್ದೇವೆ ಎನ್ನುವುದು ಎಷ್ಟುಸರಿ? ಬಿಜೆಪಿ ಪೂರ್ಣ ಬಹುಮತಕ್ಕೆ ಹೆಜ್ಜೆ ಇಡುತ್ತಿದೆ. ಇದನ್ನು ಶಕ್ತಿ ಇದ್ದರೆ ಕಾಂಗ್ರೆಸ್‌ ತಡೆಯಲಿ ನೋಡೋಣ’ ಎಂದು ಸವಾಲು ಹಾಕಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿ ದ ಅವರು, ಲಖನ್‌ ಅವರನ್ನು ಬಿಜೆಪಿ ಸೇರಿಸಿಕೊಳ್ಳುವ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬೆಳಗಾವಿಯ ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಂತೇಶ ಕವಟಗಿಮಠ ಅವರ ಸೋತು ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಗೆಲುವು ಸಾಧಿಸಿದ ಬೆನ್ನಲ್ಲೇ ಬಿಜೆಪಿಗೆ ಮುಂದೇನು ಮಾಡಬೇಕು ಎಂಬುದು ತೋಚದೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

MLC Election Results: ಬೆಳಗಾವಿ ಸೋಲಿಗೆ ಕಾರಣ ಏನು ಎಂದು ತನಿಖೆ ಮಾಡಿಸ್ತೇವೆ: ಬಿಎಸ್‌ವೈ

ಬಿಜೆಪಿಗೆ ರಮೇಶ ಜಾರಕಿಹೊಳಿ ಬಿಸಿತುಪ್ಪ
ಪಕ್ಷದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ(Ramesh Jarkiholi) ಅವರು ತಮ್ಮ ಸಹೋದರ ಲಖನ್‌ ಅವರನ್ನು ತಾವೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿರುವುದು ಈಗ ಜಗಜ್ಜಾಹೀರಾಗಿರುವ ಸಂಗತಿ. ಈ ಬಗ್ಗೆ ಪಕ್ಷದ ವರಿಷ್ಠರು ಮುಂಚೆಯೇ ಎಚ್ಚರಿಕೆಯನ್ನೂ ನೀಡಿದ್ದರು. ಲಖನ್‌ ಗೆಲುವು ಸೋಲಿಗಿಂತ ಪಕ್ಷದ ಅಧಿಕೃತ ಅಭ್ಯರ್ಥಿ ಕವಟಗಿಮಠ ಅವರ ಗೆಲುವು ಮುಖ್ಯ ಎಂಬ ಸಂದೇಶವನ್ನು ಚುನಾವಣೆಗೆ ಮುಂಚೆಯೇ ವರಿಷ್ಠರು ರಮೇಶ್‌ ಅವರಿಗೆ ನೀಡಿದ್ದರು.

ಬೆಳಗಾವಿಯಲ್ಲಿ ಪ್ರಾಬಲ್ಯ ಹೊಂದಿರುವ ರಮೇಶ್‌ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವುದು ಅಷ್ಟುಸುಲಭದ ಮಾತೇನೂ ಅಲ್ಲ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಗೆ ನಾಂದಿ ಹಾಡಿದ್ದರು. ಮೇಲಾಗಿ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಸೇರಿದಂತೆ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ರಮೇಶ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.

ಹಾಗೊಂದು ವೇಳೆ ರಮೇಶ್‌ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದಲ್ಲಿ ಈಗಿರುವ ಬಿಜೆಪಿ ಸರ್ಕಾರಕ್ಕೂ ಅಪಾಯ ತಂದೊಡ್ಡಬಹುದು ಎಂಬ ಭೀತಿಯೂ ಬಿಜೆಪಿ ಪಾಳೆಯದಲ್ಲಿದೆ. ಹೀಗಾಗಿಯೇ ಬೆಳಗಾವಿ ಸೋಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿರುವ ರಾಜ್ಯ ಬಿಜೆಪಿ ನಾಯಕರು ಅಳೆದೂ ತೂಗಿ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ನಾನು ಮನೆಯನ್ನು ಬಿಡುವ ಪೂರ್ವದಲ್ಲಿ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಹಾಗೂ ಸಂಘದಿಂದ ನನಗೆ ಕರೆ ಮಾಡಿದ್ದರು. ಏನೂ ಮಾತನಾಡಬೇಡ ಎಂದು ಅವರು ಆದೇಶ ಮಾಡಿದ್ದಾರೆ. ಹೀಗಾಗಿ ಸದ್ಯಕ್ಕೆ ನಾನು ಏನು ಮಾತನಾಡುವುದಿಲ್ಲ. ಅವರ ಆದೇಶ ಪಾಲನೆ ಮಾಡುವುದು ನನ್ನ ಕರ್ತವ್ಯವಾಗಿದೆ. ಬಹಳಷ್ಟುವಿಷಯಗಳ ಕುರಿತು ಬಹಳ ಗಂಭೀರವಾಗಿ ಹೇಳುವ ವಿಚಾರವಿತ್ತು. ಡಿಕೆಶಿ ಆರೋಪಗಳ ಬಗ್ಗೆಯೂ ಬಹಳ ಕಠೋರವಾಗಿ ಹೇಳುವವನಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದ ಏನನ್ನು ಹೇಳಲು ಆಗುತ್ತಿಲ್ಲ. ಕೆಲವೇ ದಿನಗಳಲ್ಲಿ ಬಹಿರಂಗವಾಗಿ ಉತ್ತರ ಕೊಡುತ್ತೇನೆ ಎಂದು ರಮೇಶ್‌ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಬಿಜೆಪಿ ಸೋಲು, ಲಖನ್‌ ಗೆಲುವು
- ಲಖನ್‌ ಕಣಕ್ಕಿಳಿಸಿದ ರಮೇಶ್‌ಗೆ ಏನು ಮಾಡಬೇಕು?
- ರಮೇಶ್‌ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಲ್ಲ
- ಅಳೆದೂ ತೂಗಿ ಹೆಜ್ಜೆ ಇಡಲು ಬಿಜೆಪಿ ನಿರ್ಧಾರ

Latest Videos
Follow Us:
Download App:
  • android
  • ios