Asianet Suvarna News Asianet Suvarna News

Karnataka BJP vs Congress ಮತಾಂತರ ನಿಷೇಧ, ಬೆಲೆ ಏರಿಕೆ ಸೇರಿ ಹಲವು ವಿಚಾರ ಮಂದಿಟ್ಟು ಸರ್ಕಾರದ ವಿರುದ್ಧ ಕೈ ಹೋರಾಟ ತೀವ್ರ!

- ಮತಾಂತರ ನಿಷೇಧದ ವಿರುದ್ಧ ಸದನದ ಒಳಗೂ ಹೊರಗೂ ಹೋರಾಟ
- ಬೆಲೆಯೇರಿಕೆ, ನೆರೆ ವೈಫಲ್ಯ ವಿರುದ್ಧ ಇಂದು ಸಿದ್ದು, ಡಿಕೆಶಿ ಚಕ್ಕಡಿ ರಾರ‍ಯಲಿ
- ಸದನದಲ್ಲಿ 40% ಕಮಿಷನ್‌, ಬಿಟ್‌ ಕಾಯಿನ್‌ ‘ಅವ್ಯವಹಾರ’ ಪ್ರಸ್ತಾಪ
- ಸರ್ಕಾರಕ್ಕೆ ಮುಜುಗರ ಸೃಷ್ಟಿಸಲು ಕಾಂಗ್ರೆಸ್‌ ಶಾಸಕಾಂಗ ಸಭೆ ನಿರ್ಣಯ
 

Anti conversion bill to bitcoin case Karnataka Congress decide to fight against Bjp in Belagavi Winter Session ckm
Author
Bengaluru, First Published Dec 16, 2021, 2:29 AM IST

ಬೆಳಗಾವಿ(ಡಿ.16):  ರಾಜ್ಯ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ(Belagavi Winter Session) ಮಂಡಿಸಲು ಹೊರಟಿರುವ ಮತಾಂತರ ನಿಷೇಧ ವಿಧೇಯಕವನ್ನು(Anti conversion bill) ವಿರೋಧಿಸಿ ಸದನದ ಒಳಗೂ ಹಾಗೂ ಹೊರಗೂ ತೀವ್ರ ಹೋರಾಟ ಹಮ್ಮಿಕೊಳ್ಳಲು ಬುಧವಾರ ನಡೆದ ಕಾಂಗ್ರೆಸ್‌(Karnataka Congress) ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನೊಂದೆಡೆ ಬೆಲೆ ಏರಿಕೆ(Price Hike), ನೆರೆ ಪರಿಹಾರದಲ್ಲಿನ ವೈಫಲ್ಯ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಅಧಿವೇಶನದುದ್ದಕ್ಕೂ ಪ್ರತಿನಿತ್ಯ ಪ್ರತಿಭಟನೆ ಹಮ್ಮಿಕೊಳ್ಳಲು ಕೂಡ ಸಭೆ ನಿರ್ಧರಿಸಿದೆ.

ಸುವರ್ಣಸೌಧದಲ್ಲಿ ಬೆಳಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(siddaramaiah) ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಸ್ತಾಪಿಸಬೇಕಾದ ಅಂಶಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

Anti Conversion Bill : 'ಯಾವ ಧರ್ಮದಲ್ಲಿ ಜನ್ಮ ತಾಳಿರುತ್ತಾನೋ ಅದೇ ಧರ್ಮದಲ್ಲಿರಬೇಕು'

ಮತಾಂತರ ಕಾಯ್ದೆಗೆ ವಿರೋಧ:
ರಾಜ್ಯ ಸರ್ಕಾರವು ಮತಾಂತರ ನಿಷೇಧ ಕಾಯಿದೆಯನ್ನು ಒಂದು ಜಾತಿ ಹಾಗೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಜಾರಿಗೆ ತರಲು ಹೊರಟಿದೆ. ಮುಂದಿನ ರಾಜಕೀಯ ಲಾಭಗಳಿಗಾಗಿ ಈ ಕಾಯಿದೆ ತರುತ್ತಿದ್ದು, ಉದ್ದೇಶಪೂರ್ವಕವಾಗಿ ಅಧಿವೇಶನದ ಕೊನೆಯ ಅವಧಿಯಲ್ಲಿ ತರಲು ಉತ್ಸುಕರಾಗಿದ್ದಾರೆ. ಈ ವೇಳೆ ಉಭಯ ಸದನಗಳಲ್ಲಿ ತೀವ್ರವಾಗಿ ವಿರೋಧಿಸಬೇಕು. ಈ ವೇಳೆ ಸದನದ ಹೊರಗಡೆಯೂ ಸಂಘ-ಸಂಸ್ಥೆಗಳೊಂದಿಗೆ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಸೇರಿ ಬೃಹತ್‌ ಹೋರಾಟ ಮಾಡಬೇಕು. ಯಾವುದೇ ಕಾರಣಕ್ಕೂ ದುರುದ್ದೇಶದ ವಿಧೇಯಕ ಮಂಡನೆಗೆ ಅವಕಾಶ ನೀಡಬಾರದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ(Petrol Diesel Price) ಖಂಡಿಸಿ ಎತ್ತಿನಗಾಡಿ, ಟಾಂಗಾದಲ್ಲಿ ಅಧಿವೇಶನಕ್ಕೆ ಬರುವುದು ಸೇರಿದಂತೆ ಯಾವ್ಯಾವ ರೀತಿಯ ಪ್ರತಿಭಟನೆ ಮಾಡಬಹುದು ಎಂಬ ಕುರಿತು ಪ್ರತ್ಯೇಕ ಪಟ್ಟಿಮಾಡಲು ಸಹ ನಿರ್ಧರಿಸಲಾಯಿತು.

Love Jihad: ಮತಾಂತರ ನಿಷೇಧ ಕಾಯ್ದೆ ಬೆನ್ನಲ್ಲೇ ಲವ್ ಜಿಹಾದ್‌ಗೂ ಕಡಿವಾಣ?ಸಚಿವರ ಸುಳಿವು

ಕೃಷಿ ಕಾಯಿದೆ ಹಿಂಪಡೆಯಲು ನಿಲುವಳಿ:
ಇದೇ ವೇಳೆ ಎಪಿಎಂಸಿ, ಭೂ ಸುಧಾರಣೆ ಮತ್ತು ಜಾನುವಾರು ಹತ್ಯೆ ನಿಷೇಧಕ್ಕೆ ಸಂಬಂಧಿಸಿದ ಕಾಯಿದೆಗಳನ್ನು ವಾಪಸು ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲು ನಿಲುವಳಿ ಸೂಚನೆ ಮಂಡಿಸಲು ತೀರ್ಮಾನಿಸಲಾಯಿತು. ಜತೆಗೆ ನಂಜುಂಡಪ್ಪ ವರದಿ ಜಾರಿಗೆ ಆಗ್ರಹಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.

40 ಪರ್ಸೆಂಟ್‌ ಕಮಿಷನ್‌, ಬಿಟ್‌ ಕಾಯಿನ್‌ ಬಗ್ಗೆ ಪ್ರಸ್ತಾಪ:
ಸದನದಲ್ಲಿ 40 ಪರ್ಸೆಂಟ್‌ ಕಮಿಷನ್‌ ವಿಚಾರ ಹಾಗೂ ಬಿಟ್‌ ಕಾಯಿನ್‌ ವಿಚಾರ ಪ್ರಸ್ತಾಪಿಸಲೂ ಸಹ ನಿರ್ಧರಿಸಲಾಗಿದೆ. ಪ್ರಧಾನ ಮಂತ್ರಿಗಳಿಗೆ ರಾಜ್ಯದ ಗುತ್ತಿಗೆದಾರರ ಸಂಘವು ಅಧಿಕೃತವಾಗಿ ದಾಖಲೆಗಳ ಸಮೇತ ರಾಜ್ಯದ ವಿವಿಧ ಇಲಾಖೆಗಳಲ್ಲಿ 40 ಪರ್ಸೆಂಟ್‌ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರಿದೆ. ಆದರೆ ಪ್ರಧಾನಮಂತ್ರಿ ಸ್ಪಂದಿಸಿಲ್ಲ. ಈ ಬಗ್ಗೆ ಗುತ್ತಿಗೆದಾರರು ಹೋರಾಟ ಮುಂದುವರೆಸಿದ್ದಾರೆ. ಇದಕ್ಕೆ ಪೂರಕವಾಗಿ ಉಭಯ ಸದನಗಳಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿ ಬೀಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಇನ್ನು ಬಿಟ್‌ ಕಾಯಿನ್‌ ಬಗ್ಗೆ ಪ್ರಿಯಾಂಕ ಖರ್ಗೆ ಎಲ್ಲಾ ಮಾಹಿತಿ ಸಂಗ್ರಹಿಸಿದ್ದಾರೆ. ಮತ್ತಷ್ಟುಮಾಹಿತಿ ಸಂಗ್ರಹಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಉಭಯ ಸದನಗಳಲ್ಲಿ ಪ್ರಸ್ತಾಪಿಸಬೇಕು. ಪ್ರಕರಣದಲ್ಲಿ ರಾಜ್ಯ ಸರ್ಕಾರ ಮಾಡಿರುವ ಲೋಪಗಳನ್ನು ಎತ್ತಿ ತೋರಿಸಿ ಮುಜುಗರ ಉಂಟುಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸುವ ಬಗ್ಗೆ ಹಾಗೂ ವಿಧಾನಪರಿಷತ್‌ ಚುನಾವಣೆ ಫಲಿತಾಂಶದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಳಗಾವಿ ನಗರದಿಂದ ಸುವರ್ಣಸೌಧವರೆಗೆ ಇಂದು ಕಾಂಗ್ರೆಸ್‌ ಚಕ್ಕಡಿ ರ್ಯಾಲಿ
ಬೆಲೆ ಏರಿಕೆ, ರಾಜ್ಯ ಸರ್ಕಾರದ ನೆರೆ ನಿರ್ವಹಣೆ ಸೇರಿದಂತೆ ವಿವಿಧ ವೈಫಲ್ಯಗಳ ವಿರುದ್ಧ ಪ್ರತಿಭಟಿಸಿ ಬೆಳಗಾವಿ ನಗರದಿಂದ ಸುವರ್ಣಸೌಧದವರೆಗೆ ಗುರುವಾರ ಬೆಳಗ್ಗೆ 10 ಗಂಟೆಗೆ ಟ್ರಾಕ್ಟರ್‌, ಟ್ರಕ್‌, ಚಕ್ಕಡಿ ಮೂಲಕ ರಾರ‍ಯಲಿ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿದಂತೆ ವಿಧಾನಸಭೆ ಹಾಗೂ ಪರಿಷತ್‌ ಸದಸ್ಯರು ಒಟ್ಟಿಗೆ ವಾಹನಗಳಲ್ಲಿ ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್‌ ಕಚೇರಿಯಿಂದ ಸುವರ್ಣಸೌಧಕ್ಕೆ ಆಗಮಿಸಲಿದ್ದು, ಇದೇ ವೇಳೆ ಕಾರ್ಯಕರ್ತರು ಬೇರೆ ಬೇರೆ ವಾಹನಗಳ ಮೂಲಕ ರಾರ‍ಯಲಿಯಲ್ಲಿ ಸಾಥ್‌ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಪರಿಷತ್ತಲ್ಲಿ ಧರಣಿ: 14 ಕಾಂಗ್ರೆಸಿಗರು ಸಸ್ಪೆಂಡ್‌
ಭೂ ಅಕ್ರಮ ಪ್ರಕರಣವೊಂದರಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ವಿರುದ್ಧ ಎಫ್‌ಐಆರ್‌ ದಾಖಲಿಸಲು ನ್ಯಾಯಾಲಯ ಆದೇಶಿಸಿರುವ ವಿಚಾರದ ಬಗ್ಗೆ ಮೇಲ್ಮನೆಯಲ್ಲಿ ಬುಧವಾರ ತೀವ್ರ ಕೋಲಾಹಲ ಉಂಟಾಗಿ, ಪ್ರತಿಪಕ್ಷ ಕಾಂಗ್ರೆಸ್‌ನ 14 ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ ಘಟನೆ ನಡೆದಿದೆ. ಪ್ರತಿಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್‌, ಬಿ.ಕೆ.ಹರಿಪ್ರಸಾದ್‌, ಸಿ.ಎಂ.ಇಬ್ರಾಹಿಂ ಸೇರಿದಂತೆ 14 ಮಂದಿಯನ್ನು ಸಭಾಪತಿ ಬಸವರಾಜ ಹೊರಟ್ಟಿಅಮಾನತು ಮಾಡಿದ್ದಾರೆ. ಬೈರತಿ ಬಸವರಾಜು ರಾಜೀನಾಮೆ ನೀಡಬೇಕೆಂದು ಘೋಷಣೆ ಕೂಗುತ್ತಾ ಇವರು ಧರಣಿ ನಡೆಸಿದ್ದರು.

Follow Us:
Download App:
  • android
  • ios