ರಸ್ತೆಯಲ್ಲಿ ಕೂದಲಿನ ರಾಶಿ ಬಿದ್ದಿದ್ದನ್ನು ಕಂಡ ಶಾಸಕ ತಮ್ಮ ಪಕ್ಷದ ಕಾರ್ಯಕರ್ತನ ಜತೆ ಸ್ವಚ್ಛ ಗೊಳಿಸಿದ್ದಾರೆ. ಅಷ್ಟಕ್ಕೂ ಆ ಶಾಸಕ ಯಾರು ಅಂತೀರಾ? ಇಲ್ಲಿದೆ ವಿವರ

ಬೆಂಗಳೂರು[ಡಿ.28]: ರಸ್ತೆಯಲ್ಲಿ ಕೂದಲಿನ ರಾಶಿ ಬಿದ್ದಿದ್ದನ್ನು ಕಂಡ ಶಾಸಕ ಸುರೇಶ್‌ ಕುಮಾರ್‌ ತಮ್ಮ ಪಕ್ಷದ ಕಾರ್ಯಕರ್ತನ ಜತೆ ಸ್ವಚ್ಛ ಗೊಳಿಸಿದ್ದಾರೆ. ಈ ಬಗ್ಗೆ ಸುರೇಶ್‌ ಕುಮಾರ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಖುಷಿ ಕೊಟ್ಟಸ್ವಚ್ಛತಾ ಕಾರ್ಯಕ್ರಮ ಎಂದು ಬರೆದುಕೊಂಡಿದ್ದಾರೆ.

ಗುರುವಾರ ಮುಂಜಾನೆ 4.30ರ ಸುಮಾರಿಗೆ ವಾಯುವಿಹಾರದಲ್ಲಿ ತೊಡಗಿದ್ದ ವೇಳೆ ಕಾಮಾಕ್ಷಿಪಾಳ್ಯದ ಆಲದ ಪಾರ್ಕ್ನ ಪಶ್ಚಿಮ ರಸ್ತೆಯಲ್ಲಿ ತಲೆ ಕೂದಲಿನ ರಾಶಿ ರಸ್ತೆ ತುಂಬಾ ಹರಡಿರುವುದನ್ನು ಕಂಡಿದ್ದಾರೆ. ಹತ್ತಿರದಲ್ಲಿಯೇ ನೆಲೆಸಿರುವ ಪಕ್ಷದ ಕಾರ್ಯಕರ್ತ ಉಮೇಶ್‌ಗೆ ಕರೆ ಮಾಡಿ ಪೊರಕೆ ತರಿಸಿ ಇಬ್ಬರು ಪೂರ್ತಿಯಾಗಿ ಗುಡಿಸಲಾಯಿತು. ಕೂದಲುಗಳನ್ನು ಒಂದು ಚೀಲದಲ್ಲಿ ತುಂಬಿ ಅಲ್ಲಿಂದ ರವಾನೆ ಮಾಡಲಾಯಿತು. ನಾಗರಿಕರಿಗೆ ಅಸಹ್ಯ ವಾತಾವರಣವಾಗದಂತೆ ಸ್ವಚ್ಛ ಮಾಡುವಲ್ಲಿ ಯಶಸ್ವಿಯಾದೆವು ಎಂದು ಸ್ವಚ್ಛತಾ ಕಾರ್ಯಕ್ರಮ ಕುರಿತು ಹೇಳಿಕೊಂಡಿದ್ದಾರೆ. ಕೂದಲ ರಾಶಿಯನ್ನು ನಾವಿಬ್ಬರು ಬರೀ ಕೈಯಲ್ಲಿ ಎತ್ತಿ ತುಂಬುತ್ತಿದ್ದಾಗ ಅಲ್ಲಿ ಬಂದ ಒಂದಿಬ್ಬರು ಆಶ್ಚರ್ಯ ಮತ್ತು ಆಕ್ಷೇಪಣೆ ವ್ಯಕ್ತಪಡಿಸಿದರು. ಆದರೆ, ವಿಧಿ ಇಲ್ಲದೆ ಸ್ವಚ್ಛಗೊಳಿಸಲಾಯಿತು ಎಂದಿದ್ದಾರೆ.