ಸಿಎಂ ವಿರುದ್ಧ ಸಂಸದ ಅನಂತಕುಮಾರ್ ಅವಾಚ್ಯ ಪದ ಬಳಕೆ: 'ದೀಪ ಆರೋ ಮುಂಚೆ ಹೆಚ್ಚು ಉರಿಯುತ್ತೆ' ಎಂದ ಶಾಸಕ ಲಕ್ಷ್ಮಣ್ ಸವದಿ!
ದೀಪ ಆರೋ ಮುಂಚೆ ಹೆಚ್ಚು ಉರಿಯುತ್ತೆ ಹಾಗೇ ಅನಂತಕುಮಾರ್ ಹೆಗ್ಡೆ ರಾಜಕೀಯವಾಗಿ ಕಳೆದು ಹೋಗುವ ಮುನ್ನ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ ಎಂದು ಸಂಸದ ಅನಂತಕುಮಾರ ಹೆಗ್ಡೆ ವಿರುದ್ಧ ಶಾಸಕ ಲಕ್ಷ್ಮಣ್ ಸವದಿ ವಾಗ್ದಾಳಿ ನಡೆಸಿದರು.
ವಿಜಯಪುರ (ಫೆ.24): ದೀಪ ಆರೋ ಮುಂಚೆ ಹೆಚ್ಚು ಉರಿಯುತ್ತೆ ಹಾಗೇ ಅನಂತಕುಮಾರ್ ಹೆಗ್ಡೆ ರಾಜಕೀಯವಾಗಿ ಕಳೆದು ಹೋಗುವ ಮುನ್ನ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ ಎಂದು ಸಂಸದ ಅನಂತಕುಮಾರ ಹೆಗ್ಡೆ ವಿರುದ್ಧ ಶಾಸಕ ಲಕ್ಷ್ಮಣ್ ಸವದಿ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ವಾಗ್ದಾಳಿ ನಡೆಸಿದ ವಿಚಾರ ಸಂಬಂಧ ಇಂದು ವಿಜಯಪುರದ ಇಂಡಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ, ಅನಂತಕುಮಾರ್ ಹೆಗಡೆ ತಮ್ಮ ಅಸ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿರೋದು ಪ್ರಾರಂಭವಾಗಿದೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂದರು.
ದೇವಸ್ಥಾನ ಹಣ ಸರ್ಕಾರ ಬಳಕೆ ವಿಚಾರ ಬಿಜೆಪಿಗೆ ಅಸ್ತ್ರವಾಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸವದಿ, ಬಿಜೆಪಿಯವರು ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಈಗ ರಾಜ್ಯದ 28 ಕ್ಷೇತ್ರ ಗೆಲ್ಲಲು ಕೇಂದ್ರದವರು ಟಾರ್ಗೆಟ್ ಮಾಡಿದ್ದಾರೆ. ಗೆಲ್ಲೋಕಾಗಲ್ಲ ಎಂಬ ಭ್ರಮನಿರಸನರಾಗಿ ಹೀಗೆ ಮಾತನಾಡುತ್ತಿದ್ದಾರೆ. ಬಿಜೆಪಿಯವರು 28 ಸ್ಥಾನ ಗೆಲ್ಲೋ ಮಾತನಾಡುತ್ತಾರೆ. ಪಕ್ಕದ ರಾಜ್ಯದಲ್ಲಿ ಎರಡ್ಮೂರು ತಗೊಂಡು ಮೂವತ್ತರವರೆಗೆ ಗೆಲ್ಲೋ ಮಾತನ್ನಾಡುತ್ತಾರೆ ಎಂದರು.
'ನೀನು ಬಾರದಿದ್ದರೆ ರಾಮಜನ್ಮಭೂಮಿ ನಿಲ್ಲಲ್ಲ ಮಗನೇ..' ಸಿದ್ಧರಾಮಯ್ಯಗೆ ಏಕವಚನದಲ್ಲಿ ವಾಗ್ದಾಳಿ!
28 ಸ್ಥಾನ ಗೆಲ್ಲದಿದ್ದರೆ ಬಿಜೆಪಿಯಲ್ಲಿ ಬದಲಾವಣೆ ಆಗುತ್ತಾ? ಎಂಬ ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ, ಬದಲಾವಣೆ ಆಗೋ ಪ್ರಶ್ನೆ ಉದ್ಭವ ಆಗಲ್ಲಾ. ಈಗ ಎಲ್ಲಿ ಕೂಡಬೇಕೋ ಅಲ್ಲಿ ಕೂತಿದ್ದಾರೆ. ಬದಲಾವಣೆ ಆಗೇ ಕೂತಿದ್ದಾರೆ . ಇನ್ನು ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ಸವದಿ, ನಮ್ಮ ಸರ್ಕಾರ ಬಂದು ಎಂಟು ತಿಂಗಳಾಗಿವೆ. ಇನ್ನೂ ನಾಲ್ಕು ವರ್ಷ ನಾಲ್ಕು ತಿಂಗಳಿವೆ.ಅಷ್ಟರಲ್ಲಿ ಮೇಕಾದಾಟು, ಭದ್ರಾ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಹಂತ ಹಂತವಾಗಿ ಮಾಡಲಾಗುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ರಾಷ್ಟ್ರೀಯ ಪಕ್ಷದಲ್ಲಿ ಅಂಥ ವಿಚಾರಗಳು ಸಹಜವಾಗಿ ಬರುತ್ತವೆ. ಯಾವ ಅಭ್ಯರ್ಥಿ ಸೂಕ್ತವಾಗುತ್ತಾರೆ ಅಂಥವರ ಸ್ಪರ್ಧೆ ಕುರಿತು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಆ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇವೆ. ನಾನು ರಾಜ್ಯ ರಾಜಕಾರಣದಲ್ಲೇ ಇರುವೆ ಎನ್ನುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು.