Asianet Suvarna News Asianet Suvarna News

Karnataka Politics : ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕೃಷ್ಣ ಬೈರೇಗೌಡ ಅಧ್ಯಕ್ಷ

ವಿಧಾನಮಂಡಲದ ಪ್ರಮುಖ ಸ್ಥಾಯಿ ಸಮಿತಿ
ವೈಯಕ್ತಿಕ ಕಾರಣಗಳಿಂದ ಈ ಹುದ್ದೆ ನಿರಾಕರಿಸಿದ ರಮೇಶ್ ಕುಮಾರ್
ಕೃಷ್ಣ ಬೈರೇಗೌಡ ಅವರನ್ನು ನೂತನ ಅಧ್ಯಕ್ಷರಾಗಿ ನೇಮಿಸಿ ಆದೇಶ

mla Krishna Byre Gowda appointed as president of public accounts committee san
Author
Bengaluru, First Published Jan 1, 2022, 6:04 PM IST

ಬೆಂಗಳೂರು (ಜ.1): ಇತ್ತೀಚೆಗೆ 2021-22 ರ ಸಾಲಿನ ರಾಜ್ಯ ವಿಧಾನ ಮಂಡಲ/ವಿಧಾನಸಭೆಯ (Assembly)  ವಿವಿಧ ಸ್ಥಾಯಿ ಸಮಿತಿಗಳನ್ನು ರಚಿಸಿ ಅದಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ವಿಧಾನ ಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಅಧ್ಯಕ್ಷರಾಗಿ ನೇಮಕವಾಗಿದ್ದ ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ ಕುಮಾರ್ (Ramesh Kumar ) ವೈಯಕ್ತಿಕ ಕಾರಣಗಳಿಂದ ಈ ಹುದ್ದೆಯನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಕಾರಣದಿಂದಾಗಿ ಬ್ಯಾಟರಾಯನಪುರ (Byatarayanapura) ವಿಧಾನಸಭಾ ಕ್ಷೇತ್ರದ ( Assembly Constituency) ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ (Krishna Byre Gowda) ಅವರನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ರಮೇಶ್ ಕುಮಾರ್ ಅವರು ಯಾವ ಕಾರಣಕ್ಕಾಗಿ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನುವುದು ತಿಳಿದಿಲ್ಲ.  ಆದರೆ, ವೈಯಕ್ತಿಕ ಕಾರಣಗಳಿಂದ ಈ ಹೊಣೆಯನ್ನು ನಿರ್ವಹಿಸಲು ತಮ್ಮಿಂದ ಸಾಧ್ಯವಾಗುತ್ತಿಲ್ಲ. ನನ್ನ ಬದಲಿಗೆ ಬೇರೆಯವರ ಆಯ್ಕೆ ಮಾಡುವುದು ಸೂಕ್ತ ಎಂದು ಸಭಾಧ್ಯಕ್ಷರಿಗೆ ತಿಳಿಸಿದ್ದರು. ಅದರಂತೆ ಈ ಬದಲಾವಣೆಯನ್ನು ಮಾಡಲಾಗಿದೆ. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ಕೃಷ್ಣ ಬೈರೇಗೌಡ ಅವರನ್ನು, ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿಗಳ ನಿಯಮ  211 (2)ರ ಮೇರೆಗೆಸದರಿ ಸಮಿತಿಯ ಅಧ್ಯಕ್ಷರನ್ನಾಗ ಸಭಾಧ್ಯಕ್ಷರು ನಾಮ ನಿರ್ದೇಶನ ಮಾಡಿದ್ದಾರೆ ಎಂದು ಕರ್ನಾಟಕ ವಿಧಾನಸಭೆ (Karnataka Legislative Assembly) ಪ್ರಕಟಣೆಯಲ್ಲಿ ತಿಳಿಸಿದೆ.

ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ (Belagavi Assembly Session) ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್  (Ramesh Kumar) ಅತ್ಯಾಚಾರವನ್ನು ಸಾಮಾನ್ಯೀಕರಿಸುವ ಹೇಳಿಕೆಯನ್ನು  ನೀಡುವ ಮೂಲಕ ವಿವಾದಕ್ಕೆ ಈಡಾಗಿದ್ದರು. ರಾಷ್ಟ್ರಮಟ್ಟದಲ್ಲಿ ಇದು ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಈಡಾದ ಬಳಿಕ ತಮ್ಮ ಮಾತಿಗೆ ಕ್ಷಮೆ ಯಾಚಿಸಿದ್ದರು.  ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು ಇನ್ನು ಮುಂದೆ ಇಂತಹ ಪದ ಬಳಸದಂತೆ ಎಚ್ಚರ ವಹಿಸುತ್ತೇನೆ. 'ಅತ್ಯಾಚಾರ!' ಬಗ್ಗೆ ಇಂದಿನ ವಿಧಾನಸಭೆಯಲ್ಲಿ ನಾನು ಮಾಡಿದ ಉದಾಸೀನ ಮತ್ತು ನಿರ್ಲಕ್ಷ್ಯದ ಕಾಮೆಂಟ್ ಗಾಗಿ ಎಲ್ಲರ ಕ್ಷಮೆ ಕೇಳುತ್ತಿದ್ದೇನೆ.  ಲಘುವಾಗಿ ವರ್ತಿಸಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೂ ವಿಷಾದಿಸುವೆ. ದೇಶದ ಮಹಿಳೆಯರ ಭಾವನೆಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ಮುಕ್ತ ಮನಸ್ಸಿನಿಂದ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಬಹುಶಃ ಇದೇ ಕಾರಣದಿಂದಾಗಿ ಅವರು ಹೊಸ ಹುದ್ದೆಯನ್ನು ವಹಿಸಿಕೊಳ್ಳಲು ನಿರಾಸಕ್ತಿ ತೋರಿದ್ದಾರೆ ಎಂದು ವರದಿಯಾಗಿದೆ.

Karnataka Politics : ಅತ್ಯಾಚಾರವನ್ನು ಎಂಜಾಯ್ ಮಾಡಿ ಎಂದ ಕೈ ಶಾಸಕನಿಗೆ ಮಹತ್ವದ ಹೊಣೆ
"ನಿನ್ನೆ ಕಲಾಪ ನಡೆಯುವ ವೇಳೆ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗಿತ್ತು. ನಾನೂ ಕೂಡ ಇದನ್ನ ಅನುಭವಿಸ್ತಿದ್ದೇನೆ ಅಂತ ನೋವು ತೋಡಿಕೊಂಡೆ. ನಾನು ಇಂಗ್ಲಿಷ್ ಭಾಷೆಯಲ್ಲಿರೋ ಒಂದು ಮಾತು ಉಲ್ಲೇಖ ಮಾಡಿದೆ ಅಷ್ಟೇ. ಯಾವ ಸಮಯದಲ್ಲಿ ಏನ್ ಹೇಳಿದೆ ಅದು ಹೊರಟು ಹೋಯಿತು. ಹೆಣ್ಣಿಗೆ ಅಪಮಾನ ಮಾಡೋದು ಅಥವಾ ಸದನದ ಗೌರವ ಕಡಿಮೆ ಮಾಡೋದು ನನ್ನ ಉದ್ದೇಶವಾಗಿರಲಿಲ್ಲ. ನನಗೆ ಯಾವುದೇ ಪ್ರತಿಷ್ಠೆ ಇಲ್ಲ. ಕಲಾಪ ನಡೆಯುವಾಗ, ನಾನು ಇಲ್ಲಿ ಉಲ್ಲೇಖ ಮಾಡಿ ಆಡಿದ ಮಾತಿನಿಂದ . ಯಾರಿಗೆ, ಎಲ್ಲೇ ನೋವಾಗಿದ್ರೂ, ಯಾವುದೇ ವರ್ಗದ ಮಹಿಳೆಯರಿಗೆ ನೋವಾಗಿದ್ರೆ, ನಾನು ವಿಷಾಧ ವ್ಯಕ್ತಪಡಿಸುತ್ತೇನೆ. ನಾನು ಕ್ಷಮೆ ಕೇಳುತ್ತೇನೆ"  ಎಂದು ಸದನದಲ್ಲಿಯೂ ತಮ್ಮ ಮಾತಿಗೆ ಕ್ಷಮೆ ಯಾಚಿಸಿದ್ದರು.

Ramesh Kumar Controversy : ರಮೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹ
ಇನ್ನುಳಿದಂತೆ  ಸಾರ್ವಜನಿಕ ಉದ್ದಿಮೆಗಳ ಸಮಿತಿ ಅಧ್ಯಕ್ಷರಾಗಿ ಬಿಜೆಪಿ (BJP) ಸದಸ್ಯ ಜಿ.ಎಚ್‌. ತಿಪ್ಪಾರೆಡ್ಡಿ ಹಾಗೂ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಬಿಜೆಪಿ (BJP) ಸದಸ್ಯ ಎಂ.ಪಿ. ಕುಮಾರಸ್ವಾಮಿ (MP Kumaraswamy)  ಅವರನ್ನು ನೇಮಕ ಮಾಡಲಾಗಿದೆ.

Follow Us:
Download App:
  • android
  • ios