ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಎಚ್.ಡಿ.ರೇವಣ್ಣ, ಪಕ್ಕೆಲುಬಿಗೆ ಪೆಟ್ಟು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ!
ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಅವರು ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಿದ್ದಾರೆ.
ಹಾಸನ (ಜು.17) : ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಅವರು ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿ ದೇವಾಲಯದಲ್ಲಿ ಘಟನೆ ನಡೆದಿದೆ.
ಏಕಾದಶಿ ಪ್ರಯುಕ್ತ ಉಪವಾಸವಿದ್ದ ಎಚ್.ಡಿ.ರೇವಣ್ಣ ಬಿದ್ದು ಅವರ ಪಕ್ಕೆಲುಬಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬರುವ ವೇಳೆ ಜಾರಿ ಬಿದ್ದಿದ್ದರು. ಹರದನಹಳ್ಳಿಯಿಂದ ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಹೊರಟಿದ್ದ ವೇಳೆ ಘಟನೆ ನಡೆದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ದುಡ್ಡಿದ್ದವರ ವಿರೋಧಕ್ಕೆ ಮಣಿದು ಟ್ವೀ ...
ತೀವ್ರ ಪಕ್ಕೆಲುಬು ನೋವಿನ ಹಿನ್ನೆಲೆ ಹೊಳೆನರಸೀಪುರದ ತಾಲೂಕು ಆಸ್ಪತ್ರೆಗೆ ಎಚ್.ಡಿ.ರೇವಣ್ಣ ಅವರನ್ನು ದಾಖಲು ಮಾಡಲಾಗಿತ್ತು. ಉಪವಾಸ ಹಾಗೂ ತೀವ್ರ ಪಕ್ಕೆಲುಬು ನೋವಿನ ಕಾರಣ ಸುಸ್ತಾಗಿದ್ದಾರೆ. ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೇವಣ್ಣ ಅವರು ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಪ್ರಯಾಣ ಬೆಳೆಸಿದ್ದಾರೆ.
ಮೈಸೂರು ಕೆಫೆ ಓನರ್ ಗುರುತಿಸಿ ರಾಧಿಕಾಳನ್ನು ಕರೆದು ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅನಂತ್ ಅಂಬಾನಿ!
ಹೊಳೆನರಸೀಪುರ ದಿಂದ ಬೆಂಗಳೂರು ಕಡೆ ತಮ್ಮ ಕಾರಿನಲ್ಲೆಆಸ್ಪತ್ರೆಯಿಂದ ಹೊರಟಿದ್ದು ಪರಿಸ್ಥಿತಿ ನೆನೆದು ಕಾರಿನಲ್ಲಿ ಭಾವುಕರಾಗಿ ಕುಳಿತರು. ತನ್ನ ಕಾರಿನಲ್ಲಿ ಕುಳಿತು ಕುಟುಂಬದ ಸಂಕಷ್ಟ ನೆನೆದು ಭಾವುಕರಾದರು. ರೇವಣ್ಣಗೆ ಅಭಿಮಾನಿಗಳು ಧೈರ್ಯ ತುಂಬಿದರು. ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ದೇವೇಶ್ವರ ದೇವಾಲಯದಲ್ಲಿ ಹಾಸುಗಲ್ಲಿನ ಮೇಲೆ ನಿಂತಿದ್ದ ಮಳೆ ನೀರಿನ ಮೇಲೆ ಕಾಲಿಟ್ಟು ಜಾರಿ ಬಿದ್ದು, ಬಲಭಾಗದ ಪೆಕ್ಕೆಲುಬಿಗೆ ಪೆಟ್ಟಾಗಿದೆ.