Asianet Suvarna News Asianet Suvarna News

ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಹಾಕಿರೋದು ನನಗೂ ಇಷ್ಟವಿಲ್ಲ: ಶಾಸಕ ಬಸವರಾಜ ರಾಯರೆಡ್ಡಿ

ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ಮಾಡಿರುವುದು ನನಗೂ ಇಷ್ಟವಿಲ್ಲ ಎಂದು ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

MLA Basavaraj Rayareddy said I did not like Savarkar photo insertion in Belagavi Suvarna Soudha sat
Author
First Published Dec 11, 2023, 2:23 PM IST

ಬೆಳಗಾವಿ (ಡಿ.11): ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಅವರ ಪೋಟೋವನ್ನು ಅಳವಡಿಕೆ ಮಾಡಿರುವುದು ನನಗೂ ಇಷ್ಟವಿಲ್ಲ. ಆದರೆ, ಈಗ ಅದನ್ನು ತೆಗೆದುಹಾಕಿ ಎಂದರೆ ವಿವಾದ ಆಗುತ್ತದೆ. ಆದ್ದರಿಂದ, ನಾನು ಈ ಬಗ್ಗೆ ಮಾತನಾಡದೇ ಸುಮ್ಮನಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಫೋಟೋ ತೆಗೆಯಬೇಕು ಎಂಬ ಪ್ರಿಯಾಂಕ್ ಖರ್ಗೆ ಒತ್ತಾಯ ಮಾಡಿದ್ದಾರೆ. ಆದರೆ, ಸಾವರ್ಕರ್ ಪೋಟೋ ಹಾಕಿರೋದು ನನಗೂ ಇಷ್ಟ ಇಲ್ಲ. ಈಗ ತೆಗೆಯಿರಿ ಅಂದ್ರೆ ವಿವಾದ ಆಗುತ್ತದೆ, ಅದಕ್ಕೆ ಸುಮ್ಮನಿದ್ದೇನೆ. ಸಾವರ್ಕರ್ ಒಬ್ಬ ಮಹಾನ್ ದೇಶ ಭಕ್ತ ಅಂಡಮಾನ್ ಜೈಲಿನಲ್ಲಿ ಇದ್ದು ಬಂದವರು. ನಾನು ಅವರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಆದ್ರೆ ಸಾವರ್ಕರ್ ನಲ್ಲಿ ವಿಭಜಿತ ವ್ಯಕ್ತಿತ್ವ (split personality) ಇತ್ತು. ಕ್ವಿಟ್ ಇಂಡಿಯಾ ಚಳುವಳಿಗೆ ಬೆಂಬಲ ನೀಡಲಿಲ್ಲ. ಗಾಂಧೀಜಿ ಅವರನ್ನ ಹಿಪ್ಪೋಗ್ರಸಿಸ್ಟ್ ಅಂತ ನಿಂದನೆ ಮಾಡಿದ್ದರು. ಇದನ್ನೆಲ್ಲಾ ನೋಡಿದ್ರೆ ಅವರ ಫೋಟೋ ಹಾಕೋದು ನನ್ನ ಪ್ರಕಾರ ಸರಿಯಲ್ಲ. ಆದ್ರೆ ಹಾಕಿ ಆಗಿದೆ, ತೆಗೆದ್ರೆ ವಿವಾದ ಆಗುತ್ತೆ ಅದಕ್ಕೆ ಸುಮ್ಮನಿದ್ದೇನೆ ಎಂದರು.

ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ಗೋಕುಲಕೃಷ್ಣ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!

10 ಮಂದಿ ಗಣ್ಯರ ಫೋಟೋ ಹಾಕಬೇಕು: ಬೆಳಗಾವಿ ಸುವರ್ಣ ಸೌಧ ಸಭಾ ಭವನದಲ್ಲಿ 10  ಗಣ್ಯರ ಫೋಟೋಗಳನ್ನ ಹಾಕಲು ರಾಯರೆಡ್ಡಿ ಒತ್ತಾಯ ಮಾಡಿದ್ದಾರೆ. ಯಾರ ಫೋಟೋಗಳನ್ನ ಯಾಕೆ ಹಾಕಬೇಕು ಅಂತ ವಿಧಾನ ಸಭೆಯ ಕಲಾಪದಲ್ಲಿ ಚರ್ಚೆ ಮಾಡಲು ಸ್ಪೀಕರ್ ಅವರಿಗೆ ಅನುಮತಿ ಕೇಳಿದ್ದೆನು. ಆದರೆ, ಅವರು ಪತ್ರ ಬರೆಯಲು ತಿಳಿಸಿದರು. ತುಂಬಾ ಅಧ್ಯಯನ ಮಾಡಿ ಈಗ ಒಂದು ಪಟ್ಟಿ ಸಿದ್ದಪಡಿಸಿದ್ದೇನೆ. ಈ ಪಟ್ಟಿ ಇರುವ ಪತ್ರವನ್ನ ಬ್ಯುಸಿನೆಸ್ ಅಡ್ವೈಸರಿ ಕಮಿಟಿಗೆ ನೀಡುತ್ತಿದ್ದೇನೆ. ಒಂದು ಸಮಿತಿ ರಚನೆ ಮಾಡಿ ಈ ಫೋಟೋಗಳನ್ನ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಗೆ ಬಸವರಾಜ ರಾಯರೆಡ್ಡಿ ಸಲಹೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕದ ಪ್ರಧಾನಮಂತ್ರಿ ಆಗಿದ್ದ ಬಸವೇಶ್ವರ ಅವರ ಫೋಟೋವನ್ನು ಸುವರ್ಣ ಸೌಧದಲ್ಲಿ ಅಳವಡಿಕೆ ಮಾಡಲಾಗಿದೆ. ಆದರೆ, ಬಸವೇಶ್ವರ ಕೈಯಲ್ಲಿ ಲಿಂಗು ಹಿಡಿದಿರುವ ಫೋಟೋ ಬದಲಿಗೆ ತಲೆ ಮೇಲೆ ಕಿರೀಟ ಇರುವ ಫೋಟೋ ಹಾಕಬೇಕು. ಮಹಾತ್ಮ ಗಾಂಧೀಜಿ ಅವರ ಫೋಟೋವನ್ನ ಕೆಳಗೆ ಹಾಕಲಾಗಿದೆ, ಅದನ್ನ ಬಸವೇಶ್ವರ ಫೋಟೋಗೆ ಸಮಾನವಾಗಿ ಹಾಕಬೇಕು. ಸುಭಾಸ್ ಚಂದ್ರ ಬೋಸ್ ಅವರ ಧೋತಿ ಶರ್ಟ್ ಧರಿಸಿರುವ  ಪೋಟೋ ಬದಲಿಗೆ, ಸೇನಾ ವಸ್ತ್ರ ಧರಿಸಿರುವ ಫೋಟೋ ಹಾಕಬೇಕು. ಅಂಬೇಡ್ಕರ್ ಅವರ ಈಗಿರುವ ಫೋಟೋ ಬದಲಿಗೆ, ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದಿರುವ ಫೋಟೋ ಹಾಕಬೇಕು ಎಂದು ಸಲಹೆ  ನೀಡಿದ್ದಾರೆ.

ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ: ವಿಡಿಯೋ ವೈರಲ್!

ಜೊತೆಗೆ, ಸಂವಿಧಾನ ರಚನಾ ಸಭೆಯ ಮೊದಲ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಫೋಟೋವನ್ನ ಸುವರ್ಣಸೌಧದಲ್ಲಿ ಹಾಕಬೇಕು. 17 ವರ್ಷ ಭಾರತದ ಆಡಳಿತ ನಡೆಸಿದ ಮಾಜಿ ಪ್ರಧಾನಿ ಜವಹರಲಾಲ್ ನೆಹರು, ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ, ಭಾರತದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಫೋಟೋ ಕೂಡ ಅಳವಡಿಕೆ ಮಾಡಬೇಕು. ಮುಂದುವರೆದು ಕರ್ನಾಟಕ ರಾಜ್ಯದ ಏಕೀಕರಣದ ಪ್ರಥಮ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಹಾಗೂ ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಫೋಟೋ ಕೂಡ ಸದನದಲ್ಲಿ ಅಳವಡಿಕೆ ಮಾಡಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರು ವಿಧಾನಸಭಾ ಸ್ಪೀಕರ್ ಅವರಿಗೆ ಒತ್ತಾಯಿಸಿದ್ದಾರೆ.

Follow Us:
Download App:
  • android
  • ios