Asianet Suvarna News Asianet Suvarna News

ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ: ವಿಡಿಯೋ ವೈರಲ್!

ಬೈಕ್‌ ಮೇಲೆ ಮುಸ್ಲಿಂ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದಾನೆಂಬ ಕಾರಣಕ್ಕೆ ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ. 

Davangere moral policing case issue incident video viral rav
Author
First Published Dec 11, 2023, 1:21 PM IST

ದಾವಣಗೆರೆ (ಡಿ.11) ಬೈಕ್‌ ಮೇಲೆ ಮುಸ್ಲಿಂ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದಾನೆಂಬ ಕಾರಣಕ್ಕೆ ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ. 

ದಾವಣಗೆರೆ ಜಾಲಿ ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ  ನಡೆದ ಘಟನೆ. ಶ್ರೀನಿವಾಸ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು. ಶ್ರೀನಿವಾಸನಿಗೆ ಮದುವೆ ನಿಶ್ಚಯವಾಗಿತ್ತು. ಆತ ತೆರಳುತ್ತಿರುವಾಗ ನೆರೆಮನೆ ಯುವತಿ ಮನೆವರೆಗೆ ಬಿಡಲು ಕೇಳಿದ್ದರಿಂದ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ ಯುವಕ ಇದನ್ನು ಕಂಡು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೆರವು ಸಿಎಂ ಹೇಳಿಕೆಗೆ ಎಂಪಿ ರೇಣುಕಾಚಾರ್ಯ ಫುಲ್ ಗರಂ!

ಯುವಕನಿಗೆ ಪ್ರಜ್ನೆ ಬಂದು ತನ್ನ ಪೋಷಕರಿಗೆ ಪೋನ್ ಮಾಡಿದ‌ ನಂತರ ಪ್ರಕರಣ ಬೆಳಕಿಗೆ ಬಂದಿದೆ.  ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣಾಂತಿಕ ಹಲ್ಲೆಗೊಳಗೊಗಿ ಚಿಕಿತ್ಸೆಗೆ ದಾಖಲಾಗಿರುವ  ಯುವಕ ಶ್ರೀನಿವಾಸ. ಹಲ್ಲೆ ಮಾಡಿದವರಿಂದಲೇ  ದಾವಣಗೆರೆ ಮಹಿಳಾ ಠಾಣೆಯಲ್ಲಿ  ಮಧ್ಯರಾತ್ರಿ 2.30 ಕ್ಕೆ ಪೋಕ್ಸೊ ಪ್ರಕರಣ ದಾಖಲಾಗಿದೆ. ಯುವತಿಯ ಮೇಲೆ  ಅತ್ಯಾಚಾರ ಮಾಡಿದ್ದಾರೆಂದು ದೂರು ನೀಡಿ ಪೋಕ್ಸೋ ಪ್ರಕರಣ ದಾಖಲಿಸಿರುವ ಯುವತಿ ಸಂಬಂಧಿಕರು. ಆದರೆ ವಿಡಿಯೋದಲ್ಲಿ ಯುವತಿ ಅತ್ಯಾಚಾರಕ್ಕೆ ಒಳಗಾದವರಂತೆ ವರ್ತಿಸಿಲಲ್ಲ. ಶ್ರೀನಿವಾಸನಿಗೆ ಹಲ್ಲೆ ಮಾಡದಂತೆ ಕೈಮುಗಿಯುತ್ತಿರುವ ಯುವತಿ. ಯುವತಿಯನ್ನು ದುಷ್ಕರ್ಮಿಗಳು ಎಳೆದಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

 

ಯುವತಿಗೆ ಡ್ರಾಪ್‌ ನೀಡಿದ್ದಕ್ಕೆ ಯುವಕನ ಮೇಲೆ ಯದ್ವಾತದ್ವಾ ಹಲ್ಲೆ !

ಇತ್ತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಹಿಂದೂ ಸಂಘಟನೆಗಳಿಂದ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಯುವಕನ‌ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಹಿಂದೂಸಂಘಟನೆಗಳ ಆಗ್ರಹ. ಯುವಕನನ್ನು ಖಾಸಗಿ ಶಾದಿಮಹಲ್ ನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡುವ ಅವಶ್ಯಕತೆ ಇತ್ತಾ ? ಯುವಕ ಮೇಲೆ ಅತ್ಯಾಚಾರ ಪ್ರಕರಣ ಕೊಡುವುದಕ್ಕು ಮುನ್ನ ನೈತಿಕ ಪೊಲೀಸ್ ಗಿರಿ ನಡೆಸಿದ್ದು ಏಕೆ ? ಯುವಕ ತಪ್ಪು ಮಾಡಿದ್ದರೇ ಶಿಕ್ಷೆ ಕೊಡುವುದಕ್ಕೆ ಕಾನೂನು ಇದೆ, ನೈತಿಕ ಪೊಲೀಸ್ ಗಿರಿ ಏಕೆ ಎಂದು ಹಿಂದು ಸಂಘಟನೆ ಮುಖಂಡರಿಂದ ಆಕ್ರೋಶ ವ್ಯಕ್ತವಾಗಿದೆ.

Follow Us:
Download App:
  • android
  • ios