ಸರ್ಕಾರಿ ಶಾಲೆ ಮಕ್ಕಳಿಗೆ ವಿಮೆ ಭಾಗ್ಯ, ಸರ್ಕಾರಕ್ಕೆ ಯತ್ನಾಳ್ ಸೆಡ್ಡು! 4000ಕ್ಕೂ ಅಧಿಕ ಮುಸ್ಲಿಂ ಮಕ್ಕಳಿಗೂ ವಿಮೆ ಲಾಭ!
ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ತಮ್ಮ ಕ್ಷೇತ್ರದ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಸಾಮೂಹಿಕ ಜೀವ ವಿಮೆ ಒದಗಿಸಿದ್ದಾರೆ. ಮೂರು ಮಕ್ಕಳ ಸಾವಿನ ಘಟನೆಯಿಂದ ಪ್ರೇರಿತರಾದ ಯತ್ನಾಳ್, ಸರ್ಕಾರ ಮಾಡದ ಕೆಲಸವನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

-ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.25) : ರಾಜ್ಯ ರಾಜಕಾರಣದಲ್ಲಿ ಫೈರ್ ಬ್ರಾಂಡ್ ಶಾಸಕ ಎಂದು ಖ್ಯಾತಿಗಳಿಸಿರೋ ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ಯಾರು ಮಾಡದ ಕಾರ್ಯವೊಂದನ್ನ ಮಾಡುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಅಪಾಯಗಳು ಉಂಟಾದಲ್ಲಿ, ಜೀವಕ್ಕೆ ಹಾನಿಯಾದಲ್ಲಿ ಸರ್ಕಾರದಿಂದ ಯಾವುದೇ ಲೈಫ್ ಕವರೇಜ್ ಅನ್ನೋದು ಇಲ್ಲ. ಆದ್ರೆ ಶಾಸಕ ಯತ್ನಾಳ್ ತಮ್ಮ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಾಮೂಹಿಕ ಜೀವ ವಿಮೆ ಭಾಗ್ಯ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಸರ್ಕಾವು ಮಾಡದ ಕಾರ್ಯವನ್ನ ಯತ್ನಾಳ್ ಮಾಡಿದ್ದಾರೆ.
ಸರ್ಕಾರಿ ಶಾಲೆ ಮಕ್ಕಳಿಗೆ ವಿಮೆ ಭಾಗ್ಯ ನೀಡಿದ ಯತ್ನಾಳ್!
ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಾರೆ. ಸರ್ಕಾರಿ ಶಾಲೆಯಲ್ಲಿ ಓದು ಮಕ್ಕಳೆಲ್ಲ ಬಹುತೇಕರು ಬಡವರು, ಕಡು ಬಡವರು. ಇಂತಹ ಬಡವರ ಮಕ್ಕಳಿಗೆ ಅಕಸ್ಮಾತ್ ಏನಾದ್ರೂ ಅನಾಹುತಗಳಾದ್ರೆ ಇಡೀ ಕುಟುಂಬವೇ ತತ್ತರಿಸಿ ಹೋಗುತ್ತೆ. ಅಂದ್ರೆ ಸರ್ಕಾರಿ ಶಾಲೆ ಮಕ್ಕಳ ಲೈಫ್ ಗೆ ಯಾವುದೇ ಕವರೇಜ್ ಇರೋದಿಲ್ಲ. ಇದನ್ನ ಅರಿತ ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ರಾಜ್ಯ ಸೇರಿ ದೇಶದಲ್ಲಿ ಯಾವ ರಾಜಕಾರಣಿಯು ತೆಗೆದುಕೊಳ್ಳದ ತೀರ್ಮಾನವನ್ನ ತೆಗೆದುಕೊಂಡಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ಸಂಕಷ್ಟ ಉಂಟಾದ್ರೆ ಸಹಾಯವಾಗಲಿ ಅಂತಾ ಜೀವ ವಿಮಾ ಮಾಡುವ ಬಡ ಮಕ್ಕಳ ಕುಟುಂಬದ ಭದ್ರತೆಗೆ ಕೈ ಜೋಡಿಸಿದ್ದಾರೆ.
ಆಸ್ತಿ ವಿಚಾರಕ್ಕೆ ಶ್ರೀರಾಮುಲು-ಜನಾರ್ದನರೆಡ್ಡಿ ನಡುವೆ ಗಲಾಟೆ? ಆಪ್ತಮಿತ್ರರ ಸಂಘರ್ಷಕ್ಕೆ ಕಾರಣವೇನು?
ಮೂರು ಮಕ್ಕಳ ಸಾವೇ ಶಾಸಕರ ನಿರ್ಧಾರಕ್ಕೆ ಕಾರಣ!
ಯಸ್, ಇನ್ನೂ ಶಾಸಕರು ಇಂತಹ ತೀರ್ಮಾನ ಕೈಗೊಳ್ಳೊದರ ಹಿಂದೆಯೂ ಒಂದು ಕಾರಣ ಇದೆ. ಕಳೆದ ಕೆಲ ತಿಂಗಳ ಹಿಂದೆ ವಿಜಯಪುರದ ನೀರು ಶುದ್ದೀಕರಣ ಘಟಕದಲ್ಲಿ ಬಿದ್ದು ಮೂವರು ಶಾಲಾ ಮಕ್ಕಳು ಸಾವನಪ್ಪಿದರು. ಅವರಿಗೆ ಪರಿಹಾರ ನೀಡಬೇಕಾದರೆ ಸರ್ಕಾರಕ್ಕೆ ಕಾನೂನು ತೊಡಕು ಉಂಟಾಗಿತ್ತು. ಪರಿಹಾರವೂ ಇಲ್ಲದೆ, ಮಕ್ಕಳೂ ಇಲ್ಲದೆ ಬಡ ಕುಟುಂಬಗಳು ಕಂಗಾಲಾಗಿದ್ದರು. ಇದನ್ನ ಅರಿತು ಬಡ ಶಾಲಾಮಕ್ಕಳಿಗೆ ಏನಾದ್ರೂ ಮಾಡಲೇ ಬೇಕು ಎಂದು ಶಾಸಕ ಯತ್ನಾಳ್ ತಮ್ಮ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಯ ಮಕ್ಕಳಿಗೆ ಇನ್ಶುರೆನ್ಸ್ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇನ್ಶುರೆನ್ಸ್ ನಲ್ಲಿ ಏನೆಲ್ಲ ಇದೆ!?
ಸರ್ಕಾರಿ ಶಾಲೆ ಮಕ್ಕಳು ಅಪಘಾತ, ವಿದ್ಯುತ್ ಶಾಕ್, ಹಾವು, ಚೇಳು ಕಡಿತ ಮತ್ತಿತರೆ ಕಾರಣಗಳಿಂದ ಮೃತಪಟ್ಟರೆ, ಅವರನ್ನೇ ನಂಬಿದ್ದ ಆ ಮನೆಯೇ ಕತ್ತಲಾಗಲಿದೆ. ವಿಮೆ ಸೌಲಭ್ಯದಿಂದ ಅಂತಹ ಪಾಲಕರಿಗೆ ಆರ್ಥಿಕವಾಗಿ ನೆರವಾಗಲು 2 ಲಕ್ಷ ಪರಿಹಾರ, ಗಂಭೀರವಾಗಿ ಗಾಯಗೊಂಡ ಮಕ್ಕಳ ಚಿಕಿತ್ಸೆಗೆ 1 ಲಕ್ಷ ಪರಿಹಾರ ಅನುಕೂಲ ಕಲ್ಪಿಸುವ ಯೋಜನೆ ಜಾರಿ ಮಾಡಿದ್ದಾರೆ.
ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಮೂಲಕ ವಿಮೆ ಹಣ ಸಂದಾಯ!
ಯತ್ನಾಳ್ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಮಾ ಖಾತೆಗೆ ಹಣ ಜಮಾ ಮಾಡಲಾಗ್ತಿದೆ. ಸುಮಾರು 7 ಲಕ್ಷದವರೆಗೆ ವಿಮಾ ಹಣವನ್ನು ಪ್ರತಿ ವರ್ಷವೂ ಭರಿಸಲಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆ ಸಹ ಕೈ ಜೋಡಿಸಿದ್ದು, ಮಕ್ಕಳಿಗೆ ಜೀವನ ಭದ್ರತೆ ಒದಗಿಸುವ ಕಾರ್ಯ ಮಾಡಲಾಗಿದೆ.
ಇದನ್ನೂ ಓದಿ: ಖಾಸಗಿ ಬಸ್ ನಲ್ಲಿ ರಾತ್ರಿ ಕುಡಿದು ಸಹ ಪ್ರಯಾಣಿಕರಿಗೆ ತೊಂದರೆ | private bus incident | Suvarna News
ಮುಸ್ಲಿಂ ಮಕ್ಕಳಿಗೂ ವಿಮೆ ಭಾಗ್ಯ!
ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ 128 ಪ್ರಾಥಮಿಕ ಶಾಲೆಗಳು ಹಾಗೂ 7 ಪ್ರೌಢ ಶಾಲೆಗಳ ಒಟ್ಟು 15, 279 ಮಕ್ಕಳಿಗೆ ವಿಮೆ ಮಾಡಲಿಸಲಾಗಿದೆ. ಇನ್ನೂ ಸರ್ಕಾರಿ ಶಾಲೆಯಲ್ಲಿ ಓದುವ ಮುಸ್ಲಿಂ ಸಮುದಾಯದ 4 ಸಾವಿರಕ್ಕೂ ಅಧಿಕ ಮಕ್ಕಳು ಸಹ ಈ ವಿಮೆಯ ಲಾಭ ಪಡೆಯಲಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್. ಕಾಮ್ ಜೊತೆಗೆ ಮಾತನಾಡಿದ ಮುಸ್ಲಿಂ ವಿದ್ಯಾರ್ಥಿಯ ತಾಯಿಯೊಬ್ಬರು ಶಾಸಕ ಯತ್ನಾಳರಿಗೆ ಧನ್ಯವಾದ ಹೇಳಿದ್ದಾರೆ. ವಿಮೆಯಿಂದಾಗಿ ಅನೂಕುಲವಾಗಲಿದೆ ಎಂದಿದ್ದಾರೆ.