ತಿಂಗಳ ಮೊದಲೇ ಕೆಎಎಸ್ ಪ್ರಶ್ನೆ ಪತ್ರಿಕೆ ಮುದ್ರಣ ಆರೋಪ; ಕೆಪಿಎಸ್ಸಿ ನಡೆ ಪ್ರಶ್ನಿಸಿದ ಯತ್ನಾಳ್

ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್ ಪ್ರೊಬೇಷನರ್, ಕೆಎಎಸ್ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಗೆ ಗೊತ್ತುಪಡಿಸಿದ ದಿನಾಂಕಕ್ಕೆ ಒಂದು ತಿಂಗಳ ಮೊದಲೇ ಪ್ರಶ್ನೆ ಪತ್ರಿಕೆ ಮುದ್ರಣ ಮಾಡಿಟ್ಟಿಕೊಂಡಿರುವ ಆರೋಪ ಕೇಳಿಬಂದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

MLA Basangowda patil yatnal tweet on kpsc kas question paper before month rav

ಬೆಂಗಳೂರು (ಆ.10) : ಪರೀಕ್ಷೆಗೆ ದಿನಾಂಕ ನಿಗದಿಯಾದ ಒಂದು ವಾರದ ಮುಂಚೆ ಪ್ರಶ್ನೆ ಪತ್ರಿಕೆ ಮುದ್ರಣ ಮಾಡುವುದು ಸಾಮಾನ್ಯ. ಆದರೆ ಗೆಜೆಟೆಡ್ ಪ್ರೊಬೇಷನರ್, ಕೆಎಎಸ್ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಗೆ ಪರೀಕ್ಷೆಗೆ ಗೊತ್ತುಪಡಿಸಿದ ದಿನಾಂಕಕ್ಕೆ ಒಂದು ತಿಂಗಳ ಮೊದಲೇ ಕೆಪಿಎಸ್ಸಿ ಮುದ್ರಣ ಮಾಡಿಟ್ಟಿಕೊಂಡಿರುವ ಆರೋಪ ಕೇಳಿಬಂದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ತಿಂಗಳ ಮೊದಲೇ ಪ್ರಶ್ನೆ ಪತ್ರಿಕೆ ಮುದ್ರಣ ಮಾಡಿದ್ದು ಯಾಕೆ? ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಯಾರು ಹೊಣೆ? ಕೆಪಿಎಸ್ಸಿ ನಡೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಟ್ವೀಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಕೆಪಿಎಸ್ಸಿ ಪಾರದರ್ಶಕತೆ ಬಗ್ಗೆ ಪ್ರಶ್ನಿಸಿದ್ದಾರೆ. 

ದೇಶದಲ್ಲಿ ರೈಲ್ವೆ, ರಕ್ಷಣಾ ಇಲಾಖೆ ಬಿಟ್ರೆ ಅತಿ ಹೆಚ್ಚು ಭೂ ಆಸ್ತಿ ಇರೋದು ವಕ್ಫ್ ಬಳಿ! ಅಂಕಿ-ಅಂಶ ಸಮೇತ ಬಿಚ್ಚಿಟ್ಟ ಯತ್ನಾಳ್!

ಟ್ವಿಟರ್‌ನಲ್ಲಿ ಏನಿದೆ?

ಪ್ರಶ್ನೆ ಪತ್ರಿಕೆ ಪರೀಕ್ಷೆ ನಿಗದಿ ಆಗಿರುವ ಒಂದು ವಾರದ ಹಿಂದೆಯಷ್ಟೇ ಮುದ್ರಣ ಆಗಬೇಕು. ಆದರೆ ಕರ್ನಾಟಕ ಲೋಕಸೇವಾ ಆಯೋಗವು (KPSC) ಈಗಾಗಲೇ ಮುದ್ರಣ ಮಾಡಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದಿದ್ದಾರೆ.

ಕೇಂದ್ರ ಲೋಕಸೇವಾ ಯೋಗ (UPSC) ಸೇರಿದಂತೆ ಪರೀಕ್ಷೆ ನಡೆಸುವ ಪ್ರಾಧಿಕಾರಗಳು ಒಂದು ವಾರದ ಹಿಂದೆಯಷ್ಟೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡುತ್ತವೆ. ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಬಾರದು ಹಾಗೂ ಪರೀಕ್ಷೆಯ ಪಾರದರ್ಶಕತೆಯನ್ನು ಪಾಲಿಸುವ ಸಲುವಾಗಿ ಈ ರೀತಿಯಾದ ಕ್ರಮವನ್ನು ಪಾಲಿಸಲಾಗಿದೆ. ಆದರೆ ಕೆಪಿಎಸ್‌ಸಿ  ಮಾತ್ರ KAS ಪರೀಕ್ಷೆಯ ಒಂದು ತಿಂಗಳ ಮುಂಚೆ ಮುದ್ರಣ ಮಾಡಿಟ್ಟುಕೊಂಡಿರುವುದು ಸಾಕಷ್ಟು ಅನುಮಾನ ಮೂಡಿಸಿದೆ.

ನನಗೆ ಮೈಸೂರಲ್ಲಿಸ್ವಂತ ಮನೆ ಇಲ್ಲ, ಇದ್ದ ಮನೆ ಸಾಲ ತೀರಿಸಲಾಗದೆ ಮಾರಿಬಿಟ್ಟೆ: ಸಿಎಂ ಸಿದ್ದರಾಮಯ್ಯ

ಲೋಕಸೇವಾ ಆಯೋಗವು ಇದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು. ಈಗಾಗಲೇ ಇರುವ ಪ್ರಮಾಣಿತ ಕಾರ್ಯ ವಿಧಾನ (Standard Operating Procedure) ನ ಬಿಟ್ಟು ಅವರ ಇಷ್ಟದಂತೆ ಮುದ್ರಣ ಮಾಡಿಟ್ಟುಕೊಳ್ಳುವುದು ಯಾಕೆ ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios