Asianet Suvarna News Asianet Suvarna News

ದೇಶದಲ್ಲಿ ರೈಲ್ವೆ, ರಕ್ಷಣಾ ಇಲಾಖೆ ಬಿಟ್ರೆ ಅತಿ ಹೆಚ್ಚು ಭೂ ಆಸ್ತಿ ಇರೋದು ವಕ್ಫ್ ಬಳಿ! ಅಂಕಿ-ಅಂಶ ಸಮೇತ ಬಿಚ್ಚಿಟ್ಟ ಯತ್ನಾಳ್!

ಅಲ್ಪಸಂಖ್ಯಾತರ ಓಟ್‌ಗೆ ಹೆದರಿ ವಕ್ಫ್ ಪರ ಹೇಳಿಕೆ ಕೊಡ್ತೀರಾ? ಕಾನೂನು ತಜ್ಞರೇ ನಿಮಗಿದು ಗೊತ್ತೆ ಎಂದು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

Waqf property Act dispute cm siddaramaiah vs mla basanagowda yatnal rav
Author
First Published Aug 8, 2024, 3:38 PM IST | Last Updated Aug 8, 2024, 3:38 PM IST

ವಿಜಯಪುರ (ಆ.8): ಅಲ್ಪಸಂಖ್ಯಾತರ ಓಟ್‌ಗೆ ಹೆದರಿ ವಕ್ಫ್ ಪರ ಹೇಳಿಕೆ ಕೊಡ್ತೀರಾ? ಕಾನೂನು ತಜ್ಞರೇ ನಿಮಗಿದು ಗೊತ್ತೆ ಎಂದು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿರುವ ಶಾಸಕ ಯತ್ನಾಳ್ ಅವರು ವಕ್ಫ್ ಕಾಯ್ದೆಯ ಲೋಪದೋಷಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ವಕ್ಫ್‌ ಬೋರ್ಡ್‌ಗಳ ವಿಶೇಷ ಸ್ಥಾನಮಾನ ರದ್ದು ಮಾಡಲು ಕೇಂದ್ರದ ನಿರ್ಧಾರ!

ಟ್ವಿಟರ್‌ನಲ್ಲಿ ಏನಿದೆ?

ಕಾನೂನು ತಜ್ಞರು ಹಾಗೂ ಸಂವಿಧಾನ ತಜ್ಞರಾದ ಶ್ರೀಯುತ ಸಿದ್ದರಾಮಯ್ಯನವರೇ ನಿಮಗಿದು ಗೊತ್ತೆ? ಎಂದು ಪ್ರಶ್ನಿಸುವ ಮೂಲಕ ವಕ್ಫ್ ಬೋರ್ಡ್ ಬಳಿಯಿರುವ ಕೋಟ್ಯಂತರ ಮೌಲ್ಯದ ಆಸ್ತಿಯ ಅಂಕಿ-ಅಂಶಗಳನ್ನು ಬಿಚ್ಚಿಟ್ಟಿರುವ ಶಾಸಕ ಯತ್ನಾಳ್ ಅವರು, ವಕ್ಫ್ ಬೋರ್ಡ್ ಬಳಿ ಸುಮಾರು 8.66 ಲಕ್ಷ ಆಸ್ತಿಗಳಿವೆ. 8.02 ಲಕ್ಷ ಎಕರೆ ಒಡೆತನದ ಆಸ್ತಿ ವಕ್ಫ್ ಬಳಿ ಇದೆ. ಅಂದರೆ ಇದು ಸುಮಾರು 30 ಚಂಡೀಗಡದಷ್ಟು ಆಗಿದೆ ಎಂದಿದ್ದಾರೆ. ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲೇ ವಕ್ಫ್ ಎಂಬ ಪರಿಕಲ್ಪನೆ ಇಲ್ಲ. ರಕ್ಷಣಾ ಇಲಾಖೆ ಹಾಗೂ ಭಾರತೀಯ ರೈಲ್ವೆ ಇಲಾಖೆ ಬಿಟ್ಟರೆ ಅತಿ ಹೆಚ್ಚು ಭೂಮಿಯ ಒಡೆತನ ಇರುವುದು ವಕ್ಫ್ ನಲ್ಲಿ!

ಆಸ್ತಿ ವಶಕ್ಕೆ ಪಡೆಯುವ ವಕ್ಫ್‌ ಮಂಡಳಿಗೆ ಕೇಂದ್ರ ಸರ್ಕಾರದಿಂದ ಅಂಕುಶ?

 ಈ ಕಾಯ್ದೆಯಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಪಟ್ಟಿರುವುದು ಹಿಂದೂಗಳು. ತಮಿಳನಾಡಿನ ತಿರುಚಿರಾಪಳ್ಳಿ ಜಿಲ್ಲೆಯ, ತಿರುಚೆಂಥುರೈ ಹಳ್ಳಿಯಲ್ಲಿರುವ 1,500 ವರ್ಷಗಳ ಇತಿಹಾಸವಿರುವ ಸುಂದರೇಶ್ವರ ಸ್ವಾಮಿ ದೇವಸ್ಥಾನದ ಮೇಲೂ ವಕ್ಫ್ ಮಂಡಳಿ 'ಕಾಕ ದೃಷ್ಟಿ' ಬಿದ್ದಿದ್ದು, ದೇವಸ್ಥಾನದ 369 ಎಕರೆ ಸಂಪೂರ್ಣ ವಕ್ಫ್ ಗೆ ಸೇರಿದ್ದು ಎಂದು ಹೇಳಿಕೆ ನೀಡಿತ್ತು. ಈ ರೀತಿಯಾದ ಏಕಪಕ್ಷಿಯವಾದ ಕಾನೂನು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದ್ದು ಎಂಬುದು ಕಾನೂನು ತಜ್ಞರಾದ ನಿಮಗೆ ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ಅಲ್ಪಸಂಖ್ಯಾತರ ಓಟ್ ಬ್ಯಾಂಕ್‌ಗಾಗಿ ಹೆದರಿಕೊಂಡು ವಕ್ಫ್ ಪರ ಹೇಳಿಕೆ ನೀಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios