Asianet Suvarna News Asianet Suvarna News

ಅದು ಇಂಡಿಯಾ ಅಲೈಯನ್ಸ್ ಅಲ್ಲ, ಮೊಂಡ್ ಅಲೈಯನ್ಸ್: ಯತ್ನಾಳ್

ಗಣಪತಿ ಹಬ್ಬ ಬಂದ್ರೆ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಟೆನ್ಷನ್ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

MLA Basangowda patil yatnal outraged against india alliance at khaveri rav
Author
First Published Oct 7, 2023, 8:04 PM IST

ಹಾವೇರಿ (ಅ.7): ಗಣಪತಿ ಹಬ್ಬ ಬಂದ್ರೆ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಟೆನ್ಷನ್ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಇಂದು ಬಂಕಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಹಬ್ಬಗಳು ಬಂದ್ರೆ ಸರ್ಕಾರಕ್ಕೆ ಟೆನ್ಷನ್ ಶುರುವಾಗುತ್ತದೆ. ಮೊದಲು ಕಾಂಗ್ರೆಸ್ ಸರ್ಕಾರವಿದ್ದಾಗ ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ಒಗೆಯುತ್ತಿದ್ದರು. ಈ ಭಾರತದ ಧ್ವಜದ ಮೇಲೆ ಹೂ ಬೀಳುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ಗೆದ್ದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. 2024 ರಲ್ಲಿ ಪಾಕಿಸ್ತಾನದಲ್ಲಿ ಗಣಪತಿ ಕೂಡಿಸಬೇಕು ಎಂದರು. 

 ಇಂಡಿಯಾ ಒಕ್ಕೂಟ ಪ್ರಸ್ತಾಪಿಸಿದ ಯತ್ನಾಳ್, ಅದು ಇಂಡಿಯಾ ಅಲೈಯನ್ಸ್ ಅಲ್ಲ ಅದು ಮೊಂಡ ಅಲೈಯನ್ಸ್. ಇವರೆಲ್ಲ ಹೈಬ್ರೀಡ್ ತಳಿಗಳು ಒಂದು ಕಡೆ ಕೂಡಿದಾವೆ. ಹೈಬ್ರೀಡ್ ತಳಿಗಳು ಸೇರಿ ದೇಶ ಹಾಳು ಮಾಡಬೇಕು ಅಂತಾರೆ. ನೆಹರು ಫಾರುಕ್ ಅಬ್ದುಲ್ ಒಂದೇ ತರ ಕಾಣಿಸ್ತಾರೆ, ರಾಹುಲ್ ಉಮರ್ ಅಬ್ದುಲ್ಲಾ ಒಂದೇ ತರ ಕಾಣಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡೋ ಬದಲು ಮುಸ್ಲಿಮರಿಗೆ ರಕ್ಷಣೆ ಕೊಡುತ್ತಿದೆ: ಯತ್ನಾಳ್‌

Follow Us:
Download App:
  • android
  • ios