ಅಕ್ಕಿ ಫ್ರೀ, ಬಸ್ ಫ್ರೀ ಕೊಟ್ಟು, ಮದ್ಯ ಮಾರಿ ಹಣ ವಾಪಸ್: ಯತ್ನಾಳ್
ರಾಜ್ಯ ಸರ್ಕಾರದ ಈ ಗ್ಯಾರೆಂಟಿಗಳನ್ನು ಆರು ತಿಂಗಳು ನಡೆಸಲು 56 ಕೋಟಿ ರು.ಗಳ ಹಣ ಬೇಕು. ಜನರಿಗೆ ಅಕ್ಕಿ ಫ್ರೀ, ಬಸ್ ಫ್ರೀ ಕೊಟ್ಟು ಮದ್ಯ ಮಾರಿ ಹಣ ವಾಪಸ್ ತೆಗೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ ಯತ್ನಾಳ್, ಹಳ್ಳಿ ಹಳ್ಳಿಗಳಲ್ಲಿ ಮದ್ಯದಂಗಡಿ ತೆಗೆದು ರಾಜ್ಯದ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆಂದು ಕಿಡಿ ಕಾರಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಯಾದಗಿರಿ(ಅ.04): ರಾಜ್ಯದಲ್ಲಿ ಸಾವಿರ ಮದ್ಯದಂಗಡಿಗಳ ಆರಂಭಿಸುವ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಸಚಿವ, ವಿಜಯಪುರ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ದುಡ್ಡೇ ಇಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಈ ಗ್ಯಾರೆಂಟಿಗಳನ್ನು ಆರು ತಿಂಗಳು ನಡೆಸಲು 56 ಕೋಟಿ ರು.ಗಳ ಹಣ ಬೇಕು. ಜನರಿಗೆ ಅಕ್ಕಿ ಫ್ರೀ, ಬಸ್ ಫ್ರೀ ಕೊಟ್ಟು ಮದ್ಯ ಮಾರಿ ಹಣ ವಾಪಸ್ ತೆಗೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ ಯತ್ನಾಳ್, ಹಳ್ಳಿ ಹಳ್ಳಿಗಳಲ್ಲಿ ಮದ್ಯದಂಗಡಿ ತೆಗೆದು ರಾಜ್ಯದ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆಂದು ಕಿಡಿ ಕಾರಿದರು.
ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ಕೈಗೊಳ್ಳಿ: ಸಿದ್ದರಾಮಯ್ಯಗೆ ಶಾಸಕ ಯತ್ನಾಳ್ ಬೆಂಬಲ!
ಇನ್ನು, ಲಿಂಗಾಯತರಿಗೆ ಅನ್ಯಾಯವಾಗಿರುವ ಬಗ್ಗೆ ಶಾಮನೂರು ತಮ್ಮ ಬಳಿ ಅಂಕಿ ಸಂಖ್ಯೆ ಇದೆ ಅಂತ ಹೇಳಿದ್ದಾರೆ. ಅದರ ಬಗ್ಗೆ ಅವರೇ ಬಹಿರಂಗ ಪಡಿಸಬೇಕು ಎಂದು ಪ್ರತಿಕ್ರಿಯಿಸಿದರು.