ನಸುಕಿನ ಜಾವ ಖಾಸಗಿ ಶಾಲಾ ವಾಹನಕ್ಕೆ ಬೆಂಕಿಯಿಟ್ಟು ಕಿಡಿಗೇಡಿಗಳು ಪರಾರಿ!
ಕಿಡಿಗೇಡಿಗಳುನ ನಸುಕಿನ ಜಾವ ಖಾಸಗಿ ಶಾಲಾ ಬಸ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪ ಸಮೀಪದ ಅತ್ತೂರು ಗ್ರಾಮದಲ್ಲಿ ನಡೆದಿದೆ.
ಕೊಡಗು (ಅ.8): ಕಿಡಿಗೇಡಿಗಳುನ ನಸುಕಿನ ಜಾವ ಖಾಸಗಿ ಶಾಲಾ ಬಸ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪ ಸಮೀಪದ ಅತ್ತೂರು ಗ್ರಾಮದಲ್ಲಿ ನಡೆದಿದೆ.
ನ್ಯಾಷನಲ್ ಅಕಾಡೆಮಿ ಶಾಲೆಗೆ ಸೇರಿದ ಶಾಲಾ ಬಸ್. ಶಾಲೆ ಬಳಿ ನಿಲ್ಲಿಸಿದ್ದ ಬಸ್ . ನಸುಕಿನ ಜಾವ 2-3 ಗಂಟೆಗೆ ಶಾಲೆಗೆ ನುಗ್ಗಿರುವ ದುಷ್ಕರ್ಮಿಗಳು. ಬಸ್‌ಗೆ ಬೆಂಕಿ ಪರಾರಿ. ಬಿಯರ್ ಬಾಟಲಿಗೆ ಪೆಟ್ರೋಲ್ ತುಂಬಿಸಿ ಬಸ್‌ಗೆ ಎಸೆದಿರುವ ಶಂಕೆ. ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿರುವ ಶಾಲಾ ಬಸ್. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಗೋಣಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿರುವ ಪೊಲೀಸರು.
ವಂದೇ ಭಾರತ್ ರೈಲು ಅಪಘಾತಕ್ಕೆ ಮಹಾ ಸಂಚು: ರೈಲ್ವೆ ಹಳಿ ಮೇಲೆ ರಾಶಿ ರಾಶಿ ಕಲ್ಲು, ರಾಡ್ ಇಟ್ಟ ಕಿಡಿಗೇಡಿಗಳು!
ಹಾಗಲಕಾಯಿ ಬೆಳೆ ಹಾಳುಮಾಡಿದ ಕಿಡಿಗೇಡಿ!
ಹಿರೇಕೆರೂರು: ಬೀಜೋತ್ಪಾದನೆಗಾಗಿ ಅರ್ಧ ಎಕರೆಯಲ್ಲಿ ಬೆಳೆಸಲಾಗಿದ್ದ ಹಾಗಲಕಾಯಿ ಬೆಳೆಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಹಾಳು ಮಾಡಿದ ಘಟನೆ ತಾಲೂಕಿನ ಆಲದಗೇರಿ ಗ್ರಾಮದಲ್ಲಿ ನಡೆದಿದೆ.
ನಾಗವ್ವ ಹಿತ್ತಲಮನಿ ಎಂಬವರಿಗೆ ಸೇರಿದ ಬೆಳೆಯನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಹತ್ತಾರು ಸಾವಿರ ರು. ಖರ್ಚು ಮಾಡಿ ಬೀಜೋತ್ಪಾದನೆಗಾಗಿ ಅರ್ಧ ಎಕರೆ ಜಾಗದಲ್ಲಿ ಹಾಗಲಕಾಯಿ ಬೆಳೆಸಿದ್ದರು. ಸಾಲ ಮಾಡಿ ಬೆಳೆ ಬೆಳೆದಿದ್ದ ನಾಗವ್ವ ಬೆಳಗ್ಗೆ ಹೊಲಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸೇವಂತಿಗೆ ಹೂವಿನ ದರ ಕುಸಿತದಿಂದ ಕಂಗಾಲಾದ ಅನ್ನದಾತ: ಬೆಳೆ ನಾಶಪಡಿಸಿದ ರೈತ!
ಬೆಳೆ ಹಾಳು ಮಾಡಿರುವುದನ್ನು ಕಂಡು ನಾಗವ್ವ ಕಣ್ಣೀರಿಡುತ್ತಿದ್ದಾರೆ. ಸುಮಾರು ₹2 ಲಕ್ಷ ಹಾನಿಯಾಗಿದೆ. ವಿಷಯ ತಿಳಿದು ರೈತರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಿ ನಷ್ಟ ವಸೂಲಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.