Asianet Suvarna News Asianet Suvarna News

ಅನಂತ ಪದ್ಮನಾಭ ದೇವಸ್ಥಾನದ 'ಬಬಿಯಾ' ಇನ್ನಿಲ್ಲ!

ಕರ್ನಾಟಕ ಗಡಿ‌ಭಾಗ ಕಾಸರಗೋಡಿನ ಅನಂತ ಪದ್ಮನಾಭ ದೇವಸ್ಥಾನದ 'ಬಬಿಯಾ' ಹೆಸರಿನ ಮೊಸಳೆ ಇಹಲೋಕ ತ್ಯಜಿಸಿದೆ. ಹಲವು ವರ್ಷಗಳ ಕಾಲ ದೇವಸ್ಥಾನದ ಭಕ್ತರ ಕೇಂದ್ರ ಬಿಂದುವಾಗಿದ್ದ ಮೊಸಳೆ ಅಕಾಲಿಕ ಮರಣವು ಭಕ್ತ ವಲಯದಲ್ಲಿ ನೋವು ತಂದಿದೆ.

miraculous crocodile babiya death at kumbala anantapur temple kasaragodu
Author
First Published Oct 10, 2022, 8:58 AM IST

ಮಂಗಳೂರು (ಅ.10): ಕರ್ನಾಟಕ ಗಡಿ‌ಭಾಗ ಕಾಸರಗೋಡಿನ ಅನಂತ ಪದ್ಮನಾಭ ದೇವಸ್ಥಾನದ 'ಬಬಿಯಾ' ಹೆಸರಿನ ಮೊಸಳೆ ಇಹಲೋಕ ತ್ಯಜಿಸಿದೆ. ಹಲವು ವರ್ಷಗಳ ಕಾಲ ದೇವಸ್ಥಾನದ ಭಕ್ತರ ಕೇಂದ್ರ ಬಿಂದುವಾಗಿದ್ದ ಮೊಸಳೆ ಅಕಾಲಿಕ ಮರಣವು ಭಕ್ತ ವಲಯದಲ್ಲಿ ನೋವು ತಂದಿದೆ.

ಮಂಗಳೂರು(Mangaluru) ಗಡಿಭಾಗದ ಕಾಸರಗೋಡು(Kasaragodu) ಜಿಲ್ಲೆಯ ಕುಂಬಳೆ(Kumbale)ಯ ಅನಂತ ಪದ್ಮನಾಭ ದೇವಸ್ಥಾನ(Anantha Padmanabha Swamy Temple)ದಲ್ಲಿ ಸಸ್ಯಹಾರಿ ಮೊಸಳೆ ಎಂದೇ ಬಬಿಯಾ(Babiya) ಪ್ರಖ್ಯಾತಿ ಪಡೆದಿತ್ತು.ಕಳೆದ 70 ವರ್ಷಗಳಿಂದ ಈ ಮೊಸಳೆ(Babiya crocodile) ದೇವಸ್ಥಾನದ ಕೆರೆಯಲ್ಲಿದೆ ಎಂಬ ನಂಬಿಕೆಯಿತ್ತು. ತಿರುವನಂತಪುರಂ(Tiruvananthapuram)ನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎನ್ನಲಾದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದ ಕಲ್ಯಾಣಿಯಲ್ಲಿ ಬಬಿಯಾ ವಾಸವಾಗಿತ್ತು. 

ದೇವಸ್ಥಾನದ ಆವರಣದಲ್ಲಿ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನಡೆಯಲಿದೆ. ನಿತ್ಯ ಎರಡು ಬಾರಿ ಪೂಜೆ ಬಳಿಕ ನೈವೇದ್ಯ ಸ್ವೀಕರಿಸುತ್ತಿದ್ದ ಮೊಸಳೆ, ದೇವರ ಮೊಸಳೆ ಎಂದೇ ಪ್ರಖ್ಯಾತಿ ‌ಪಡೆದಿತ್ತು.‌ ಎರಡು ವರ್ಷಗಳ ಹಿಂದೆ ನೀರಿನಿಂದ ಹೊರ ಬಂದು ದೇಗುಲ ಪ್ರವೇಶಿಸಿದ್ದ ಬಬಿಯಾ,‌ ಮೊದಲ ಬಾರಿಗೆ ದೇಗುಲದ ಆವರಣಕ್ಕೆ ಬಂದಿದ್ದು ಭಕ್ತರ ಅಚ್ಚರಿಗೆ ಕಾರಣವಾಗಿತ್ತು.

ಕೇರಳ(Kerala)ದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ಎನ್ನುವ ವಿಶಾಲವಾದ ಪ್ರದೇಶದಲ್ಲಿ ಕೆರೆ ಮಧ್ಯೆ ಇರುವ ದೇವಸ್ಥಾನ ಅನಂತಪುರ ತುಳುನಾಡಿ(Tulunadu)ನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು. ಇದನ್ನು ಜನರು ಸರೋವರ ಕ್ಷೇತ್ರ ಅನಂತಪುರ(Anantapura) ಎಂದೂ ಕರೆಯುತ್ತಾರೆ. ಇಲ್ಲಿ 5 ಹೆಡೆ ಸರ್ಪದ ಮೇಲೆ ಕುಳಿತ ಅನಂತಪದ್ಮನಾಭ ಸ್ವಾಮಿ ಮೂರ್ತಿ ಇದೆ. ಈ ಕ್ಷೇತ್ರದ ಇನ್ನೊಂದು ವೈಶಿಷ್ಟ್ಯವಾಗಿದ್ದಿದ್ದು ಕೆರೆಯಲ್ಲಿದ್ದ ಬಬಿಯ ಎನ್ನುವ ಮೊಸಳೆ. 

ಕರೆದರೆ ಸಾಕು ಪ್ರಸಾದ ತಿಂದು ಹೋಗೋ ಮೊಸಳೆ!

ಮೊಸಳೆ ಮಾಂಸಹಾರಿಯಾದರೂ, ಇಲ್ಲಿರುವ ಬಬಿಯ ಸಸ್ಯಹಾರಿ ಎನ್ನುವುದು ವಿಶೇಷ. ಹಿಂದೆ ಬ್ರಿಟಿಷರು ಈ ಜಾಗದಲ್ಲಿ ಟೆಂಟ್ ಹಾಕಿದ್ದಾಗ ಕೆರೆಯಲ್ಲಿ ಮೊಸಳೆಯನ್ನು ಕೊಲ್ಲಲು ಸಂಚು ರೂಪಿಸಿದ್ದರು. ಬಬಿಯಾ ಎಂದು ಕರೆದಾಗ ಮೊಸಳೆ ಹೊರ ಬಂದಿತ್ತು. ಆಗ ಗುಂಡು ಹಾರಿಸಿ, ಮೊಸಳೆಯನ್ನು ಕೊಂದಿದ್ದರು. ಆ ಮೊಸಳೆ ಕೊಂದ ಬ್ರಿಟಿಷ್ ಅಧಿಕಾರಿ ಸ್ವಲ್ಪ ದಿವಸಗಳಲ್ಲಿಯೇ ವಿಷ ಹಾವು ಕಚ್ಚಿ ಅಸುನೀಗಿದ ಎಂದು ಹೇಳಲಾಗಿದೆ. 

Crocodile Park: ದಾಂಡೇಲಿಯಲ್ಲಿ ರಾಜ್ಯದ ಮೊದಲ ಮೊಸಳೆ ಪಾರ್ಕ್

ಅಚ್ಚರಿ ಎಂಬಂತೆ ಆ ಕೆರೆಯಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಅಲ್ಲಿಯ ಪೂಜಾರಿ ಬಬಿಯಾ ಎಂಬ ಹೆಸರಿನಿಂದ ಕರೆಯುತ್ತಾರೆ. ಆ ಮೊಸಳೆಗೆ ಪ್ರತಿದಿನ ಮಧ್ಯಾಹ್ನ ಮಹಾಪೂಜೆ ಆದ್ಮೇಲೆ ನೈವೇದ್ಯ ಕೊಡುವ ಸಮಯಕ್ಕೆ ಬಬಿಯಾ ಎಂದು ಕರೆಯುತ್ತಾರೆ. ಆಗ ಸುರಂಗದಿಂದ ಹೊರಗೆ ಬಂದು ನೈವೇದ್ಯ ಸ್ವೀಕರಿಸುತ್ತಿತ್ತು ಈ ಮೊಸಳೆ. ಮೊಸಳೆಗೆ ಜನರು ಹರಕೆ ರೂಪದಲ್ಲಿಯೂ ನೈವೇದ್ಯ ಸಮರ್ಪಿಸುವ ಪದ್ಧತಿ ಇಲ್ಲಿದೆ. ಮೊಸಳೆ ಮಾಂಸಹಾರಿಯಾದರೂ, ಈ ಬಬಿಯಾ ಯಾರಿಗೂ ತೊಂದರೆಯೇ ಕೊಡುವುದಿಲ್ಲ. ಕೆರೆಯಲ್ಲಿರುವ ಮೀನುಗಳನ್ನೂ ಈ ಮೊಸಳೆ ತಿಂದಿದ್ದೇ ಇಲ್ಲ. ಅದರೆ ಇದೀಗ ಬಬಿಯಾ ಇಹಲೋಕ ತ್ಯಜಿಸಿದೆ.

Follow Us:
Download App:
  • android
  • ios