ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತಿನಿಂದ ಸಾವಿರಾರು ಕೋಟಿ ಬಿಲ್ ಬಾಕಿ: ಸಚಿವರು

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅನುದಾನವೇ ಇಲ್ಲದಿದ್ದರೂ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಬಿಲ್ ಬಾಕಿ ಹೆಚ್ಚಾಗಿದೆ. ಬೇರೆ ಇಲಾಖೆ ಯದ್ದು ನನಗೆ ಗೊತ್ತಿಲ್ಲ. ನಮ್ಮ ಇಲಾಖೆಗೆ ಸಂಬಂಧಿಸಿ ಗುತ್ತಿಗೆದಾರರ ಸಮಸ್ಯೆ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಸಭೆ ನಡೆಸಬೇಕು, ಸಚಿವರ ಸ್ಪಷ್ಟನೆ ಚರ್ಚಿಸಿದ್ದೇವೆ. ಹಂತ ಹಂತವಾಗಿ ಬಾಕಿ ಬಿಲ್ ಬಿಡುಗಡೆ ಮಾಡಲಾಗುವುದು: ಸಚಿವ ಸತೀಶ್ ಜಾರಕಿಹೊಳಿ
 

Ministers React to Contractors Bill dues in Karnataka

ಬೆಂಗಳೂರು(ಜ.14):  ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತಿನಿಂದ ಗುತ್ತಿಗೆದಾರರ ಸಾವಿರಾರು ಕೋಟಿ ರು. ಬಾಕಿ ಇದೆ. ಆಗಿರುವ ತಪ್ಪು ಸರಿಪಡಿಸುವ ಕೆಲಸ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಬಾಕಿ ಬಿಡುಗಡೆಗೆ ಸಮಯ ಬೇಕು. ಹೀಗಂತ ಬಾಕಿ ಬಿಲ್ ಮೊತ್ತ ಕುರಿತ ಗುತ್ತಿಗಾರರ ಸಂಘದ ಪತ್ರಕ್ಕೆ ವಿವಿಧ ಸಚಿವರು ಪ್ರತಿಕ್ರಿಯಿಸಿದರು. 

ಈ ಬಗ್ಗೆ ಪ್ರತ್ಯೇಕವಾಗಿ ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಬೋಸರಾಜು, ತಿಮ್ಮಾಪುರ, ಡಾ. ಎಂ.ಸಿ. ಸುಧಾಕರ್, ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರು. ಬಿಲ್ ಬಾಕಿ ಉಳಿಯಲು ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಆರ್ಥಿಕ ಅಶಿಸ್ತು ಕಾರಣ. ಅನುದಾನ ಇಲ್ಲದಿದ್ದರೂ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮೂಲಕ ಆ ಸರ್ಕಾರ ಮಾಡಿದ ತಪ್ಪನ್ನು ನಮ್ಮ ಸರ್ಕಾರ ಸರಿಪಡಿ ಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸಮಯ ಬೇಕಾಗುತ್ತದೆ. ಗುತ್ತಿಗೆದಾರರು ಪ್ರತಿಭಟನೆ ಬದಲು ಚರ್ಚೆ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದಾರೆ. 

ಕಾಂಗ್ರೆಸ್​ ಸರ್ಕಾರಕ್ಕೂ ಕಮಿಷನ್ ಕಳಂಕ: ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅನುದಾನವೇ ಇಲ್ಲದಿದ್ದರೂ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಬಿಲ್ ಬಾಕಿ ಹೆಚ್ಚಾಗಿದೆ. ಬೇರೆ ಇಲಾಖೆ ಯದ್ದು ನನಗೆ ಗೊತ್ತಿಲ್ಲ. ನಮ್ಮ ಇಲಾಖೆಗೆ ಸಂಬಂಧಿಸಿ ಗುತ್ತಿಗೆದಾರರ ಸಮಸ್ಯೆ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಸಭೆ ನಡೆಸಬೇಕು, ಸಚಿವರ ಸ್ಪಷ್ಟನೆ ಚರ್ಚಿಸಿದ್ದೇವೆ. ಹಂತ ಹಂತವಾಗಿ ಬಾಕಿ ಬಿಲ್ ಬಿಡುಗಡೆ ಮಾಡಲಾಗುವುದು ಎಂದರು. 

ಸಣ್ಣ ನೀರಾವರಿ ಸಚಿವ ಬೋಸರಾಜು ಮಾತನಾಡಿ, ಗುತ್ತಿಗೆದಾರರ ಸಮಸ್ಯೆಗಳ ಪರಿ ಹಾರಕ್ಕೆ ಸಿದ್ದವಿದ್ದೇವೆ. ಅವರು ಪತ್ರ ಬರೆದಿರು ವಂತೆ ಸಮಯ ನೋಡಿ ಭೇಟಿಗೆ ಅವಕಾಶ ನೀಡಲಾಗುವುದು. ಈ ವೇಳೆ, ಹಿಂದಿನ ಸರ್ಕಾರದ ಕಾಮಗಾರಿಗಳು, ಬಿಲ್ ಬಾಕಿ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು. 

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಕೆಲ ಇಲಾಖೆಗಳಲ್ಲಿ ಮನಸೋ ಇಚ್ಛೆ 1 ಲಕ್ಷ ಕೋಟಿ ರು.ಗೂ ಹೆಚ್ಚಿನ ಕಾಮಗಾರಿಯನ್ನು ಬಜೆಟ್ ಅನುದಾನವಿಲ್ಲಗೆ ನೀಡಿದ್ದಾರೆ. ಹಣಕಾಸು ಶಿಸ್ತನ್ನು ಬಿಜೆಪಿ ಸರ್ಕಾರ ಉಲ್ಲಂಘಿಸಿರುವುದು ನಮ್ಮ ಪಾಲಿಗೆ ದೊಡ್ಡ ತಲೆ ನೋವಾಗಿದೆ. ಆದರೂ ಸರ್ಕಾರ ಗುತ್ತಿಗೆದಾರರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios