ಬೆಂಗಳೂರು, (ಏ.19): ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಆಪ್ತ ಸಹಾಯಕ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಸಚಿವ ಸುರೇಶ್ ಕುಮಾರ್ ಅವರ ಆಪ್ತ ಸಹಾಯಕರಾಗಿದ್ದ ರಮೇಶ್ ಎನ್ನುವರು ಕಳೆದ ನಾಲ್ಕೈದು ದಿನಗಳಿಂದ  ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಇಂದು (ಸೋಮವಾರ) ಚಿಕಿತ್ಸೆ ಫಲಕಾರಿಯಾಗದೇ ರಮೇಶ್ ಸಾವನ್ನಪ್ಪಿದ್ದಾರೆ.  ಈ ಬಗ್ಗೆ ಸ್ವತಃ ಸುರೇಶ್ ಕುಮಾರ್ ಅವರು ಸಾಮಾಜಿ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

ರಾಜ್ಯದಲ್ಲಿ ದಾಖಲೆ ಕೊರೋನಾ ಕೇಸ್ : ಸಾವಿನ ಸಂಖ್ಯೆಯಲ್ಲಿಯೂ ಭಾರೀ ಏರಿಕೆ

ಕಳೆದ 8 ವರ್ಷಗಳಿಂದ ರಮೇಶ್, ಸುರೇಶ್ ಕುಮಾರ್ ಅವರ ಆಪ್ತ ಸಹಾಯಕರಾಗಿದ್ದರು. ಈ ಹಿಂದೆ ಹಲವು ರೋಗಿಗಳನ್ನು ನಗರದ ಕಿದ್ವಾಯಿ, ಜಯದೇವ, ವಿಕ್ಟೋರಿ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಆದ್ರೆ, ಇದೀಗ ಅವರೇ ಚಿಕಿತ್ಸೆಗೆ ಸ್ಪಂಧಿಸಿದೇ ಕೊನೆಯುಸಿರೆಳೆದಿದ್ದಾರೆ.

ನಮ್ಮ ಕ್ಷೇತ್ರದ ಅನೇಕರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಉಳಿಸಿದ್ದ ನನ್ನ ಆಪ್ತ ಸಹಾಯಕ HJ ರಮೇಶ್ ಇನ್ನಿಲ್ಲ. ರಮೇಶ್ ಸುಮಾರು ೮ ವರ್ಷ ನನ್ನೊಡನೆ ನಗು ನಗುತ್ತಾ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.

Posted by Suresh Kumar S on Sunday, April 18, 2021