Asianet Suvarna News Asianet Suvarna News

ಜಾರಕಿಹೊಳಿ ರಾಸಲೀಲೆ : ಇದೊಂದು ಪಕ್ಕಾ ಪ್ಲಾನ್ಡ್ ಘಟನೆ

ರಮೇಶ್ ಜಾರಕಿಹೊಳಿ  ರಾಸಲೀಲೆ ಸಿ ಡಿ ಬಹಿರಂಗವಾಗಿದೆ. ಇದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ. ಇದೀಗ ಇದೊಂದು ಪ್ರೋ ಪ್ಲಾನ್ಡ್ ಘಟನೆ ಎನ್ನಲಾಗುತ್ತಿದೆ. 

Minister Sudhakar Reacts on Ramesh Jarkiholi Scandal Case snr
Author
Bengaluru, First Published Mar 4, 2021, 12:05 PM IST

ಬೆಂಗಳೂರು (ಮಾ.04): ರಮೇಶ್ ಜಾರಕಿಹೊಳಿ ವಿಚಾರವಾಗಿ ನಾನು ಏನೂ ಹೇಳೊದಿಲ್ಲ. ನಾನು ಆವಿಚಾರದ ಬಗ್ಗೆ ಮಾತನಾಡುವುದು ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿಂದು ಮಾತನಾಡಿದ ಆರೋಗ್ಯ ಸಚಿವರು ಇದೊಂದು ಪ್ಲಾನ್ಡ್ ಆಗಿ ಮಾಡಿರುವ ಘಟನೆ. ಇದು ರಾಜಕೀಯ ಷಡ್ಯಂತ್ರ. ಅವರು ಪೂರ್ಣ ನಿರ್ದೋಷಿಯಾಗಿ ಬರುತ್ತಾರೆ ಎಂದು ಸುಧಾಕರ್ ಹೇಳಿದರು. 

 ಇದು ರಾಜಕೀಯ ವ್ಯವಸ್ಥೆಯಲ್ಲಿ ಈ ರೀತಿಯ ಷಡ್ಯಂತ್ರ ಮಾಡೋ ವ್ಯವಸ್ಥೆ ಸರಿಯಲ್ಲ. ಇದು ವ್ಯವಸ್ಥೆಗೆ ಆಗಲಿ, ಪ್ರಜಾಪ್ರಭುತ್ವಕ್ಕೆ ಆಗಲಿ ಒಳ್ಳೆಯದಲ್ಲ.  ರಾಜಕರಣಿಗಳ ಬಗ್ಗೆ  ಇನ್ನಷ್ಟು ಅಹಸ್ಯ ಹುಟ್ಟುವಂತ ರೀತಿಯಲ್ಲಿ ಬಹಳ ವ್ಯವಸ್ಥಿತವಾಗಿ ಸಂಚನ್ನ ಮಾಡಲಾಗಿದೆ ಎಂದರು.

ನ್ಯೂಸ್ ಅವರ್; ರಮೇಶ್ ರಾಜೀನಾಮೆ, ಇನ್ನೂ ಮೂವರದ್ದು ಇದೆಯಂತೆ!

ಇದನ್ನ ನಾನು ಖಂಡಿಸುತ್ತೇನೆ. ನೈತಿಕವಾಗಿ ನಾನು ರಮೇಶ ಜಾರಕಿಹೊಳಿ ಜೊತೆಗೆ ಇರುತ್ತೇನೆ. ಕಳೆದ ಎರಡು ದಿನದಿಂದ ನಾನು ಅವ್ರನ್ನ ಸಂಪರ್ಕ ಮಾಡೋ ಪ್ರಯತ್ನ ಮಾಡಿದ್ದೇನೆ. ಆದರೆ ಅವರು ಸಿಗಲಿಲ್ಲ ಎಂದು ಸುಧಾಕರ್ ಹೇಳಿದರು. 

ಇದು ಪ್ರಾರಂಭ ಅಷ್ಟೇ, ಇದು ಎಲ್ಲರ ಮೇಲೂ ಕೂಡ ಹೊಸ ತಂತ್ರವನ್ನ ರೂಪಿಸುವ ಅಸ್ತ್ರವಾಗಿದೆ. ನಾನು ಮಾನ್ಯ ಗೃಹಸಚಿವರು ಅನುಭವಿಗಳು, ಇದಕೆಲ್ಲ ತಾತ್ವಿಕ ಅಂತ್ಯ ಹೇಳುವುದಕ್ಕೆ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು. 

Follow Us:
Download App:
  • android
  • ios