ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ, ರಾಜ್ಯದಲ್ಲಿ ನಾಯಿ ದಾಳಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ದಾವಣಗೆರೆಯಲ್ಲ ನಾಯಿ ದಾಳಿಗೆ ಮಹಿಳೆ ಮೃತಪಟ್ಟ ಬೆನ್ನಲ್ಲೇ ಈ ಘಟನೆ ನಡೆದಿದೆ.

ಬಾಗಲಕೋಟೆ (ಡಿ.06) ಕರ್ನಾಟಕದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ.ದಾವಣಗೆರೆಯಲ್ಲಿ ರಾಟ್ ವೀಲರ್ ನಾಯಿ ದಾಳಿ ಮಾಡಿ ಮಹಿಳೆ ಮೃತಪಟ್ಟ ಬೆನ್ನಲ್ಲೇ ಇದೀಗ ಬಾಗಲಕೋಟೆಯಲ್ಲಿ ಶಾಲೆಯಿಂದ ಮರಳುತ್ತಿದ್ದ 5 ವರ್ಷದ ಎಲ್‌ಕೆಜಿ ವಿದ್ಯಾರ್ಥಿನಿ ಮೇಲೆ ಬೀದ ನಾಯಿ ದಾಳಿ ಮಾಡಿದ ಘಟನೆ ನಡೆದಿದೆ. ಬಾಗಲಕೋಟೆ ನಗರದ ವಿದ್ಯಾಗಿರಿಯ ಬಳಿ ಘಟನೆ ನಡೆದಿದೆ. 5 ವರ್ಷದ ಮಗು ಅನನ್ಯಾ ತೆಗ್ಗಿ ಮೇಲೆ ಬೀದ ನಾಯಿಗಳು ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲೆಯಿಂದ ಮರಳುವಾಗ ಘಟನೆ

ಬಿ ವಿ ವಿ ಸಂಘದ ಶಾಲೆಯಲ್ಲಿ ಎಲ್‌ಕೆಜಿ ವಿದ್ಯಾರ್ಥಿನಿಯಾಗಿರುವ ಬಾಲಕಿ ಅನನ್ಯ ತೆಗ್ಗಿ, ಶಾಲೆಯಿಂದ ಸಂಜೆ ಮರಳುತ್ತಿರುವಾಗ ಬೀದಿ ನಾಯಿಗಳು ದಾಳಿ ಮಾಡಿದೆ. ಬೆನ್ನು ಹೊಟ್ಟೆ, ಹಿಂಭಾಗ ಕಚ್ಚಿದ ಗಾಯ ಮಾಡಿದೆ. ಬಾಲಕಿಯನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇತ್ತ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಅನನ್ಯ ಪೋಷಕರು ಮನವಿ ಮಾಡಿದ್ದಾರೆ.

ದಾವಣೆಗೆರೆಯಲ್ಲಿ ಬಿಚ್ಚೀ ಬೀಳಿಸಿದ ಘಟನೆೆ

ದಾವರಣೆಗೆರೆಯಲ್ಲಿ ರಾಟ್‌ವೀಲರ್ ನಾಯಿ ದಾಳಿಗೆ ಮಹಿಳೆ ಮೃತಪಟ್ಟ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ ಮೇಲೆ ರಾಟ್‌ವೀಲರ್ ನಾಯಿ ದಾಳಿ ಮಾಡಿತ್ತು. ದೇಹದ ಯಾವ ಭಾಗವನ್ನೂ ಬಿಡದೇ ನಾಯಿಗಳು ಕಚ್ಚಿ ಹಾಕಿತ್ತು. ರಾತ್ರಿ 11:3೦ಕ್ಕೆ ನಡೆದ ಘಟನೆ ಬೆಳಗಿನ ಜಾವ 3:3೦ ಕ್ಕೆ ಬೆಳಕಿಗೆ ಬಂದಿತ್ತು. ತಕ್ಷಣವೇ ಆಕೆಯನ್ನ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಶಿರಾ ಬಳಮೃತಪಟ್ಟಿದ್ದಾರೆ.

ನಾಯಿ ದಾಳಿಯ ಭೀಕರತೆ ಬಿಚ್ಚಿಟ್ಟ ಸಹೋದರ ಹಾಗೂ ಸಂಬಂಧಿಕರು

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಅನಿತಾರನ್ನು ರಾಟ್ ವೀಲರ್ ನಾಯಿಗಳು ಕಚ್ಚಿ ಎಳೆದಾಡಿದೆ. ಈ ರಾಟ್ ವೀಲರ್ ನಾಯಿಗಳನ್ನು ಬೀದಿಯಲ್ಲಿ ಯಾರೋ ಬಿಟ್ಟು ಹೋಗಿದ್ದಾರೆ. ಅನಿತಾ ಪತಿನೂ ತೀರಿಕೊಂಡಿದ್ದಾರೆ, ಮೂವರು ಮಕ್ಕಳು ಅನಾಥರಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಅನಿತಾ ಸಂಬಂಧಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕ್ರೂರಿ ನಾಯಿಗಳನ್ನು ಬಿಟ್ಟು ಹೋದ ಮಾಲೀಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಹಳ್ಳಿಗಳ ಬಳಿ ಕ್ರೂರಿ ನಾಯಿಗಳನ್ನು ಬಿಟ್ಟು ಹೋಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳೂರು ಹೊರವಲಯದಲ್ಲಿ ಬೀದಿ ನಾಯಿ ದಾಳಿ

ಮಂಗಳೂರು ಹೊರವಲಯದ ಬಜಪೆ ಕಂದಾವರ ಎಂಬಲ್ಲಿನ ಸೌಹಾರ್ದ ನಗರದಲ್ಲಿ ಮದರಸದಿಂದ ಹಿಂದಿರುವ ವೇಳೆ 6 ವರ್ಷದ ಬಾಲಕನ ಮೇಲೆ ನಾಯಿ ದಾಳಿ ಮಾಡಿದ ಘಟನೆ ಇತ್ತೀಚೆಗೆ ವರದಿಯಾಗಿದೆ. ಸೌಹಾರ್ದ ನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್(6) ಗಾಯಗೊಂಡ ಬಾಲಕ. ಅಹಿಲ್ ಮದರಸ ದಿಂದ ಮನೆಗೆ ಹಿಂತಿರುಗುವಾಗ ಬೀದಿ ನಾಯಿಗಳು ದಾಳಿ ಮಾಡಿದೆ. ಬೀದಿ ನಾಯಿಗಳ ದಾಳಿಗೆ ಮಗುವಿನ ಕೆನ್ನೆ, ಕೈಗೆ ಗಂಭೀರ ಗಾಯವಾಗಿದೆ. ಬಾಲಕನ ಬೊಬ್ಬೆ ಕೇಳಿ ಹೊರಬಂದ ತಾಯಿ ಪುತ್ರನನ್ನು ರಕ್ಷಿಸಿದ್ದಾರೆ.

ತಕ್ಷಣವೇ ಬಜಪೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಟೀಲಿನ ದುರ್ಗ ಸಂಜೀವಿನಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.